Uncategorized

ಸುಭಾಷಿತಗಳು.

೧. ಸೂರ್ಯನತ್ತ ಮುಖ ಮಾಡು. ನೆರಳು ನಿನ್ನ ಹಿಂದಕ್ಕೆ ಬೀಳುತ್ತದೆ. ೨.ದುಡಿಯುವುದು ಕುದುರೆ; ಭಕ್ಷೀಸು ಗಾಡಿಯವನಿಗೆ. ಈ ಪ್ರಪಂಚ ಇರುವುದೇ ಹೀಗೆ. ೩. ನೀರಸವಾದ ಹೂವಿನಲ್ಲೂ ಭಾವನೆ ಹುಡುಕುವುದು ಕಾವ್ಯದ ಲಕ್ಷಣ. ೪.ಮನುಷ್ಯನನ್ನು ಕೆಡುಕಿನ ಹಾದಿಗೆ ಸೆಳೆಯುವುದು ಅವನ ಮನಸ್ಸೇ ಹೊರತು, ಅವನ ಮಿತ್ರನೋ, ಶತ್ರುವೋ ಅಲ್ಲ. ೫. ಕಹಿ ಭಾವನೆ ಕ್ಯಾನ್ಸರ್ ಇದ್ದ ಹಾಗೆ. ಮನುಷ್ಯನನ್ನು ನಿಧಾನವಾಗಿ ತಿನ್ನುತ್ತದೆ. ಸಿಟ್ಟು ಬೆಂಕಿಯಾಗಿ ನಮ್ಮನ್ನು ಸುಟ್ಟು ಹಾಕುತ್ತದೆ. ೬. ಬೆಲ್ಲದ ಕಟ್ಟೆಯ ಕಟ್ಟಿ, ಬೇವಿನ ಬೀಜವ ಬಿತ್ತಿ,… Continue reading ಸುಭಾಷಿತಗಳು.

Uncategorized

ಅಧ್ಯಾತ್ಮ ಚಿಂತನ.

೧. ಪೃಥ್ವಿಯು ಮನುಕುಲಕ್ಕಿರುವ ಒಂದೇ ಮನೆ. ಈ ಮನೆಯ ನಾಶವನ್ನು ಯಾರೂ ಬಯಸುವುದಿಲ್ಲ. ಅದನ್ನು ವಿಕೃತಗೊಳಿಸದೆ ಅದರ ಮೂಲಸೌ೦ದರ್ಯವನ್ನು ಕಾಪಾಡಿಕೊಂಡು ಬರಬೇಕು. ೨. ಸನಾತನ ಧರ್ಮವು ಎಲ್ಲಾ ರಾಗಗಳನ್ನೂ ನುಡಿಸುವ ಹಾರ್ಮೋನಿಯಂನಂತೆ. ಉಳಿದ ಮತಧರ್ಮಗಳು ಒಂದೇ ಸ್ವರವನ್ನು ಕೇಳಿಸುವ ಶ್ರುತಿ ಪೆಟ್ಟಿಗೆಯಂತೆ. ವಿವಿಧ ಸಂಸ್ಕಾರವುಳ್ಳ ವ್ಯಕ್ತಿಯ ವಿಶ್ವಾಸಕ್ಕೆ, ಅನುಸರಣೆಗೆ ತಕ್ಕಂತಹ ಸಾಧನಾ ಮಾರ್ಗಗಳು ಸನಾತನ ಧರ್ಮದಲ್ಲಿ ವಿಪುಲವಾಗಿವೆ. ೩.ಪರೋಪಕಾರ ಎಂದರೆ ದೇವರನ್ನು ಸಮೀಪಿಸುವುದು. ಪರ=ದೇವರು; ಉಪ =ಸಮೀಪ; ಕರ =ಮಾಡುವುದು. ೪. ನಮ್ಮ ಕಿವಿಗಳನ್ನು ತೆರೆದು ಕೊಂಡಿರುವವರೆಗೂ… Continue reading ಅಧ್ಯಾತ್ಮ ಚಿಂತನ.

Uncategorized

ಇಂದಿನ ಶಿಕ್ಷಣ ಪದ್ಧತಿ.

ಬದಲಾದ ನಮ್ಮ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳ ಸತ್ತ್ವ ಸಂಹಾರ ಮಾಡುತ್ತಿದೆ. ಈ ನೆಲದ ಸಂಸ್ಕಾರ, ಸಂಸ್ಕೃತಿಗಳ ಸಂಪರ್ಕ ವಾಗದಂತೆ ಮಾಡುತ್ತಿದೆ. ಗುರುಕುಲದ ಶಿಕ್ಷಣ ಪದ್ಧತಿಯಲ್ಲಿ ಆಳಕ್ಕೆ ಪ್ರಾಶಸ್ತ್ಯ. ಈಗಿನ ಪದ್ಧತಿಯಲ್ಲಿ ಅಗಲವೇ ಪ್ರಧಾನ. ಪರಂಪರಾಗತವಾಗಿ ಹರಿದು ಬರುತ್ತಿದ್ದ ಅಮೂಲ್ಯ ವಿದ್ಯಾ ವಾಹಿನಿ ಇಂಗಿಹೋಗಿದೆ. ಮಾಹಿತಿ ಸ್ಫೋಟ ಇಂದಿನ ಶಿಕ್ಷಣ ಪದ್ಧತಿ. ಗಂಟೆಗೊಬ್ಬರು ಬಂದು ಪಾಠ ಹೇಳುವುದರಿಂದ ಗುರುನಿಷ್ಠೆ, ಶಿಷ್ಯ ವಾತ್ಸಲ್ಯ ನಾಮಾವಶೇಷವಾಗಿದೆ. ಇಂದಿನ ಶಿಕ್ಷಣ ಸಂಸ್ಥೆಗಳು ತಯಾರಿಸುತ್ತಿರುವುದು ಸಂಸ್ಕಾರಯುಕ್ತ , ಮೌಲ್ಯ ಭರಿತ ಮನುಷ್ಯರನ್ನಲ್ಲ, ಮಾಹಿತಿ ಯಂತ್ರಗಳನ್ನು.… Continue reading ಇಂದಿನ ಶಿಕ್ಷಣ ಪದ್ಧತಿ.