Uncategorized

ಚಿಂತನ.

೧.ವೇಷಾಂತರ –ನಾಟಕದಲ್ಲಿ ವೇಷಧಾರಿ ನೋಡುಗರ ಮನ
ರಂಜಿಸುತ್ತಾನೆ. ನಿಜಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ
ಇನ್ನೊಬ್ಬನ ಎದುರು ನಿಂತಾಗ ಒಂದೊಂದು ವೇಷದಲ್ಲಿ
ನಿಂತಿರುತ್ತಾನೆ. ಅಮ್ಮನೆದುರು, ಗುರುವಿನೆದುರು, ಗೆಳೆಯನೆದುರು,
ವಿದ್ಯಾರ್ಥಿಗಳ ಮುಂದೆ, ಅಪರಿಚಿತನೆದುರು, ಹೆಂಡತಿಯ ಮುಂದೆ,
ಮಕ್ಕಳ ಮುಂದೆ ನಿಂತಾಗ ಅವನ ವೇಷಗಳು ಬಹಳ ಭಿನ್ನ-ಭಿನ್ನ
ವಾಗಿರುತ್ತವೆ. ಕನ್ನಡಿ ಮುಂದೆ ನಿಂತಾಗ ಮಾತ್ರ ನಿಜವೇಷದಲ್ಲಿ
ನಿಂತಿರುತ್ತಾನೆ. ಅಲ್ಲಿ ಅಭಿನಯ, ನಾಚಿಗೆ, ಭಯ ಯಾವುದೂ
ಇರೋದಿಲ್ಲ.
೨. ಪ್ರಖ್ಯಾತ ಸಂಗೀತ ನಿರ್ದೇಶಕ ಬಿಥೋವನ್ ಮೂಕ. ಪೃಕೃತಿ
ಪ್ರೀತಿಯ ಕಾವ್ಯಕ್ಕೆ ಹೆಸರಾದ ಮಿಲ್ಟನ್,ಕುರುಡ. ಒಂದು ದೇಶವನ್ನಾಳಿ
ಹೆಸರುಗಳಿಸಿದ ರೂಸವೆಲ್ಟ್ ಅಂಗ ವಿಕಲರು. ಇವರೆಲ್ಲರೂ
ಸವಾಲುಗಳನ್ನು ಅವಕಾಶದ ದಾರಿಯನ್ನಾಗಿ ಪರಿವರ್ತಿಸಬಲ್ಲವರೇ
ಯಶಸ್ವಿ ಎಂಬುದಕ್ಕೆ ಸಾಕ್ಷಿ. ಬೆಂದರೆ ಮೃದುವಾಗುವ ಗಟ್ಟಿಯಾದ
ಕ್ಯಾರಟ್, ಬೆಂದರೆ ಗಟ್ಟಿಯಾಗುವ ಮೃದುವಾದ ಮೊಟ್ಟೆ, ನೀರಿನೊಂದಿಗೆ
ಕುದಿದು, ನೀರಿಗೆ ಬಣ್ಣ,ರುಚಿ ಕೊಡುವ ಕಾಫಿ ಪುಡಿ ಇವುಗಳಲ್ಲಿ ನಮ್ಮ
ಆಯ್ಕೆ ಏನು ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ಪ್ರಕಟವಾಗುತ್ತದೆ.
–ಡಾ. ಪುಂಡಿ ಕಾಯ್ ಗಣಪತಿ ಭಟ್.
೩. ಧಾರ್ಮಿಕ ಮನೋಭಾವದಿಂದ ದೂರ ಸರಿಯುತ್ತಿರುವುದನ್ನು
ತಡೆಯಲು ಹಬ್ಬಗಳ ಆಚರಣೆ ಪ್ರೇರಕ ಶಕ್ತಿಯಾಗುತ್ತದೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s