Uncategorized

ಚಿಂತನ.

ಪ್ರತಿಯೊಬ್ಬನೂ ಒಂದು ಧರ್ಮ. ಅನ್ಯ ಮತ, ಪಂಗಡ, ಗುಂಪು
ಎಲ್ಲ ಸುಳ್ಳು. ಪ್ರಚಲಿತ ಜಗತ್ತಿನಲ್ಲಿ ಈಗ ಆರೂವರೆ ಬಿಲಿಯನ್(ವ್ಯಕ್ತಿ )
ಧರ್ಮಗಳಿವೆ. ಭಾರತ ಎಂಬುದು ಮೂಲತಃ ದೇವರಿಲ್ಲದ ಸಂಸ್ಕೃತಿ.
ಇಲ್ಲಿ ಇಂಥದ್ದೇ ದೇವರು ಎಂಬುದಿಲ್ಲ. ಯಾರು ಯಾರನ್ನು ಬೇಕಾದರೂ
ಇಲ್ಲಿ ದೇವರೆಂದು ನಂಬಬಹುದು. ಆರಾಧಿಸಬಹುದು. ಮರ, ಹಕ್ಕಿ ,ಕಲ್ಲು ,
ತಾಯಿ, ತಂದೆ, ಗುರು, ಅತಿಥಿ, ಸ್ತ್ರೀ, ಮಗು ಇಲ್ಲಿ ದೇವರೇ ಆಗಿ ಬಿಡುತ್ತಾರೆ.
ದುರದೃಷ್ಟವಶಾತ್ ಈಗ ಧರ್ಮ, ಗುಂಪುಗಾರಿಕೆಯ ರಾಜಕೀಯದಲ್ಲಿ
ನರಳುತ್ತಿದೆ. ಇದರಿಂದಾಗಿ ನಮ್ಮೊಳಗಿನ ಧರ್ಮವನ್ನು ಏನು, ಎಲ್ಲಿ ಅಂತ
ಗುರುತಿಸುವುದು ಕಷ್ಟವಾಗಿದೆ.
–ಸದ್ಗುರು ಜಗ್ಗಿ (ಜಗದೀಶ್)ವಾಸುದೇವ.
ಅನ್ಯಾಯ, ಅಧರ್ಮ ಗಳಿಲ್ಲದ ಕಾಲವೊಂದು ಚರಿತ್ರೆಯಲ್ಲಿ ದಾಖಲಾದದ್ದೇ
ಇಲ್ಲ. ಪುರಾಣಗಳ ಉದ್ದಕ್ಕೂ ಕಂಡುಬರುವುದು ಧರ್ಮ-ಅಧರ್ಮ ಗಳ
ನಡುವಿನ ಸಮರವೇ . ಸತ್ಯ, ಧರ್ಮ, ನ್ಯಾಯ, ನೀತಿಗಳನ್ನು ಅರ್ಥ ಮಾಡಿ
ಕೊಳ್ಳುವುದು ಸುಲಭವಲ್ಲ. ಅವು ಅತ್ಯಗತ್ಯ ಜೀವನ ಮೌಲ್ಯಗಳಾದಾರೂ
ಅವೆಲ್ಲ ನಮ್ಮ ದೌರ್ಬಲ್ಯಗಳೆಂದು ಇತರರು ಅರ್ಥೈಸಿಕೊಳ್ಳಬಾರದು.
ಬದುಕಿನಲ್ಲಿ ನಡೆಯಬಹುದಾದ ವಿವಿಧ ಬಗೆಯ ವಂಚನೆಗಳ ಅರಿವು
ನಮಗಿರಬೇಕಾಗುತ್ತದೆ. ವೃತ್ತಪತ್ರಿಕೆಗಳಲ್ಲಿ ಬರುವ ಸುದ್ದಿಗಳು, ಸುತ್ತು
ಮುತ್ತಲಿನ ಆಗುಹೋಗುಗಳು ನಮ್ಮ ಬದುಕಿನಲ್ಲೂ ಘಟಿಸಬಹುದೆಂಬ
ಎಚ್ಚರವಿರಬೇಕು. ಅಂತ ಅರಿವು ಮೂಡದಿದ್ದರೆ ಪೃಕೃತಿಯೂ ನಮ್ಮ
ಕೈ ಬಿಡುತ್ತದೆ.
-ತೀರ್ಥರಾಮ ವಳಲಂಬೆ.
ಮೂಲ:ಸಂಗ್ರಹ.

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s