Uncategorized

ಅಧ್ಯಾತ್ಮ ಸೌರಭ.

೧. ಯೋಗೀಶ್ವರನಾದ ಶ್ರೀ ಕೃಷ್ಣ ದೈವಬಲಕ್ಕೆ ಸಂಕೇತ .
ಅರ್ಜುನ ಮನುಷ್ಯ ಪ್ರಯತ್ನಕ್ಕೆ ಸಂಕೇತ.
ಒಂದು ರಥಕ್ಕೆ ಎರಡು ಗಾಲಿ ಹೇಗೆ ಅಗತ್ಯವೋ ,
ಒಂದು ಉದ್ದಿಮೆ ಯಶಸ್ವಿಯಾಗಲು ದೈವ ಬಲ ಹಾಗೂ
ಮನುಷ್ಯ ಪ್ರಯತ್ನ ಅಗತ್ಯ.
೨.ಟೀಕಿಸುವವನಲ್ಲಿ ಅರ್ಹತೆ ಪ್ರಾಮಾಣಿಕತೆ ಇದ್ದರೆ
ವಿಮರ್ಶೆಯನ್ನು ತಳ್ಳಿಹಾಕುವಂತಿಲ್ಲ. ಕುಹಕ ಟೀಕೆಗಳಿಗೆ
ಕಿವಿಗೊಡಬಾರದು. ಅಸತ್ಯ ಟೀಕೆಗಳನ್ನು ಎದುರಿಸಿ
ಉತ್ತರಿಸಬೇಕು. ಮೌನವೂ ಟೀಕೆಗೆ ಪರಿಣಾಮಕಾರಿಯಾದ
ಉತ್ತರವಾಗುತ್ತದೆ.
೩. ಮಹಾಭಾರತದ ಕಥೆಯಲ್ಲಿ ಕರ್ಣನ ಬೆನ್ನನ್ನು ನೋಡಿದ
ಅರ್ಜುನ ಯುದ್ಧ ವಿಮುಖನಾಗಿ ಶ್ರೀ ಕೃಷ್ಣನಲ್ಲಿ ”ಆತ ನನ್ನ
ಬಂಧುವಿನಂತೆ ಕಾಣುತ್ತಾನೆ;ಆತನ ಮೇಲೆ ಬಾಣ ಪ್ರಯೋಗ
ಮಾಡಲಾರೆ ” ಎನ್ನುತ್ತಾನೆ. ಈ ಮಾತಿನಲ್ಲಿ ಒಂದು ಸಂದೇಶವಿದೆ.
ವೈರಿಯಾದರೂ ಆತನ ಬೆನ್ನು ನೋಡಿದರೆ ವೈರತ್ವ ಕಡಿಮೆಯಾಗಿ
ಬಂಧುತ್ವ ಮೂಡುತ್ತದೆ. ಇದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ
ಒಳಗಿನ ಸತ್ಯ ಮನಕ್ಕೆ ಮುಟ್ಟುತ್ತದೆ. ಬಂಧುತ್ವವೇ ಸಮಾಜ ವ್ಯವಸ್ಥೆಯ
ಅಡಿಗಲ್ಲು. ಮನುಷ್ಯತ್ತ್ವ ಮತ್ತು ಬಂಧುತ್ತ್ವವು ಜಾತಿ -ಮತಗಳ
ಎಲ್ಲೆಗಳನ್ನು ಮೀರಿ ನಿಂತವುಗಳು. ಪರಸ್ಪರ ಬಡಿದಾಡುವ
ಜೀವನಕ್ಕಿಂತ ಸಹಕಾರ -ಪ್ರೀತಿಯ ಜೀವನವೇ ಶ್ರೇಷ್ಠ.
೪. ಯಾರು ಸುಖಿಗಳು?ಶ್ರೀ ಮನ್ಮಹಾಭಾರತವು ”ಯಾರಿಗೆ ರೋಗವಿಲ್ಲವೋ
ಸಾಲ ಸೋಲಗಳು ಯಾರಿಗೆ ಇಲ್ಲವೋ, ಯಾರು ಸಜ್ಜನರ ಸಹವಾಸದಲ್ಲಿರುತ್ತಾರೋ
ಸ್ವಾವಲಂಬಿಗಳಾಗಿ ಯಾರು ಜೀವನ ಸಾಗಿಸುತ್ತಾರೋ ಅವರೇ ಸುಖಿಗಳು”
ಎಂದು ಹೇಳುತ್ತದೆ.
೫. ನೀತಿಗಾಗಿ, ಪ್ರಜೆಗಳ ಒಳಿತಿಗಾಗಿ ಪಕ್ಷಾಂತರವಾದರೆ ಒಳಿತು.
ವಿಭೀಷಣನ ಪಕ್ಷಾಂತರದಲ್ಲಿ ಸ್ವಾರ್ಥ, ಜಾತಿ ಪ್ರೇಮ ಅಡಗಿರಲಿಲ್ಲ.
ನ್ಯಾಯ, ಧರ್ಮ, ತತ್ತ್ವ ,ಸಿದ್ಧಾಂತಗಳಷ್ಟೇ ಆತನಿಗೆ ಮುಖ್ಯವಾಗಿತ್ತು.
ಇಂದಿನ ಪಕ್ಷಾಂತರಗಳ ಹಿನ್ನೆಲೆ ಸ್ವಾರ್ಥ.
೬. ಪ್ರಪಂಚ ಶಕ್ತಿಯನ್ನು ಪೂಜಿಸುತ್ತದೆ. ದುರ್ಬಲತೆಯನ್ನಲ್ಲ.
ಶಕ್ತನಾದರೆ ನೆಂಟರೆಲ್ಲ ಹಿತವರು. ಅಶಕ್ತನಾದರೆ ಆಪ್ತ ಜನರೇ ವೈರಿಗಳು.
ಎಂದು ಪುರಂದರದಾಸರು ಹೇಳಿದ್ದಾರೆ. ಶಕ್ತಿಯೇ ಜೀವನ ದುರ್ಬಲತೆಯೇ
ಮರಣ. ನಿರ್ವೀರ್ಯ-ದುರ್ಬಲನಾಗಬೇಡ ಎಂದು ಅರ್ಜುನನಿಗೆ ಶ್ರೀ ಕೃಷ್ಣ
ಬೋಧಿಸಿದ್ದಾನೆ.
೭. ಹಣ್ಣುಗಳಿಂದ ಮರ ಗುರುತಿಸಲ್ಪಡುತ್ತದೆ. ಶಿಷ್ಯರಿಂದ ಗುರು ಗುರುತಿಸಲ್ಪಡುತ್ತಾನೆ.
೮. ನಿದ್ದೆಯಲ್ಲಿ ನೀವು ಕಾಣುವುದು ಕನಸಲ್ಲ. ಯಾವ ಸಂಗತಿ ನಿಮಗೆ
ನಿದ್ರಿಸಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು.
೯. ಹಲವು ಕಾಲ ಹಂಸೆಯ ಸಂಗದಲ್ಲಿದ್ದರೆ ಬಕನು ಶುಚಿಯಾಗಬಲ್ಲನೆ ?
೧೦. ಮನುಷ್ಯರೆಲ್ಲರಿಗೂ ಒಂದಲ್ಲ ಒಂದು ರೀತಿಯ ಕೊರತೆಗಳು ಇದ್ದೇ
ಇರುತ್ತವೆ. ಈ ಒಂದೊಂದು ಕೊರತೆಗಳ ಕಾರಣದಿಂದ ನಮ್ಮ ಅಪೇಕ್ಷೆಯಂತೆ
ಲೋಕ ನಡೆಯುವುದಿಲ್ಲ. ನಿಸರ್ಗ ನಮ್ಮಲ್ಲಿ ಇರಿಸಿರುವ ಕೊರತೆಗಿಂತ
ಮನುಕುಲದ ಸಾಮರಸ್ಯದ ಕೊರತೆ ಅಪಾಯಕಾರಿ.
ಮೂಲ:ಸಂಗ್ರಹ.

2 thoughts on “ಅಧ್ಯಾತ್ಮ ಸೌರಭ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s