Uncategorized

ಕಲೆ ಸಾಹಿತ್ಯ.

ಎಂಥವರೂ ಬಲೆಗೆ ಹೋಗಿ ಬೀಳುವ ಸಂದರ್ಭ ಇಂದು.
ಎಲ್ಲರೂ ಪ್ರತ್ಯಕ್ಷ ಯಾ ಅಪ್ರತ್ಯಕ್ಷವಾಗಿ ಬಲೆಯತ್ತ ಸರಿಯುತ್ತಿದ್ದು,
ಇಂತಹ ಹೊತ್ತಿನಲ್ಲಿ ಬಲೆಗೆ ಒಪ್ಪಿಸಿ ಕೊಳ್ಳದೇ ಕಲೆಗೆ
ಅರ್ಪಿಸಿಕೊಳ್ಳಬೇಕು.
ಆಧುನಿಕ ಪ್ರಪಂಚದಲ್ಲಿ ಎಲ್ಲರೂ ಏಕತಾನತೆಗೆ ಒಳಗಾಗಿದ್ದು
ಅದರಿಂದ ಬಿಡಿಸಿಕೊಳ್ಳಬೇಕಾದರೆ ಸಾಂಸ್ಕೃತಿಕ ಪರಿಸರ ನಿರ್ಮಾಣ
ಮಾಡಿಕೊಳ್ಳಬೇಕು.
ಯಾವುದೇ ದೇಶದ ಘನತೆ, ಮಾನ್ಯತೆ ಹೆಚ್ಚುವುದು ಅಲ್ಲಿ
ಕೋಟ್ಯಾಧೀಶರು ಎಷ್ಟು ಸಂಖ್ಯೆಯಲ್ಲಿದ್ದಾರೆಂಬ ಲೆಕ್ಕದಲ್ಲಿ ಅಲ್ಲ.
ಆ ದೇಶದಲ್ಲಿ ಕಲಾವಿದರು, ಸಾಹಿತಿಗಳು,ರಂಗ ತಜ್ಞರು ಎಷ್ಟಿದ್ದಾರೆಂಬ
ಲೆಕ್ಕದಲ್ಲಿ.
ಮನುಷ್ಯ, ವಾಹನ ಎಲ್ಲವೂ ಹಳತಾಗುತ್ತಿದ್ದಂತೆ ಬೆಲೆ ಕಳೆದು
ಕೊಳ್ಳುತ್ತವೆ. ಆದರೆ ಕಲಾಕೃತಿ ಹಳತಾಗುತ್ತಿದ್ದಂತೆ ಅದಕ್ಕಿದ್ದ ಮೌಲ್ಯ
ಹೆಚ್ಚುತ್ತಾ ಹೋಗುತ್ತದೆ.
ಸಾಹಿತ್ಯ ಅಮಂಗಳ ನಿವಾರಣೆ ಮಾಡುತ್ತದೆ. ಮನಸ್ಸು-ಮನಸ್ಸು
ಗಳನ್ನು ಬೆಸೆಯುವ, ಹೃದಯ –ಹೃದಯಗಳನ್ನು ಹೊಸೆಯುವ ಸಾಹಿತ್ಯವೇ
ಸಂತಸ ನೀಡುವ ಮೌಲ್ಯಯುತ ಸಾಹಿತ್ಯ.
ಸಾಹಿತ್ಯ ಎಂದರೆ ಹಿತದಿಂದ ಕೂಡಿದ್ದು. ಸಾಹಿತ್ಯ ಭಾಷೆಗೆ ಒಂದು
ಚೌಕಟ್ಟಿದೆ. ಆದರೆ ಕಲೆಗೆ ಚೌಕಟ್ಟಿಲ್ಲ. ಅದು ವಿಶ್ವವ್ಯಾಪಿ. ಮನಸ್ಸಿಗೆ
ನಿಲುಕದ ಅಲೌಕಿಕ ವಿಚಾರವಾದ ಕಲೆಯು ಕಲಾವಿದನ ಅಂತರಂಗದ
ಭಾಷೆಯಾಗಿದೆ.
ಮುಗ್ಧತೆ ಮರೆಯಾದಂತೆ ಉಗ್ರತೆ ತಲೆಯೆತ್ತುತ್ತದೆ. ಇದನ್ನು ನಿಗ್ರಹಿಸಲು
ಜನಾರಣ್ಯದಲ್ಲಿ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಪ್ರೀತಿಸುವ ತಪಸ್ಸು
ಅಗತ್ಯ.
ಸಾಹಿತ್ಯ, ಅಕ್ಷರ ಸಿರಿವಂತರ ಆಸ್ತಿ. ಸಾಮಾನ್ಯರಿಗೆ ಗಂಭೀರ ಸಾಹಿತ್ಯವನ್ನು
ಅರಗಿಸಿಕೊಳ್ಳುವ ಸಾಮರ್ಥ್ಯವಿಲ್ಲ. ಆಸಕ್ತಿಯೂ ಇಲ್ಲ.
ಸಾಹಿತ್ಯದಲ್ಲಿ ”ಬಿಟ್ಟ ಪದ” ಗಳಿರಬೇಕು. ಆಗ ಅದು ಹೆಚ್ಚು ಧ್ವನಿಸುತ್ತದೆ.
ಅಂದರೆ space ಗಳು ಇದ್ದಷ್ಟೂ ಸಾಹಿತ್ಯದ ಶಕ್ತಿ ಹೆಚ್ಚು. ಅವೇ ಅನೂಹ್ಯ ನೆಲೆಗಳು.
ಸಾಹಿತ್ಯಕ್ಕೆ ನವ ನವೋನ್ಮೇಷ ಶಾಲಿಯಾದ ಗುಣ ಒದಗಿಸುವುದು ಇವೇ ಅಮೂರ್ತ,
ಅನೂಹ್ಯ ನೆಲೆಗಳು. ರೂಢಿಗತ ಕೌಶಲ ಗಳಾಚೆ ನಮ್ಮನ್ನು ಮಾಂತ್ರಿಕ ನೆಲೆಗಳಿಗೆ
ಅವು ಕರೆದೊಯ್ಯುತ್ತವೆ. ಆ thrill ಗಾಗಿಯೇ ನಾವು ಸಾಹಿತ್ಯ ಓದುತ್ತಿರುತ್ತೇವೆ.
ಕನ್ನಡದ ಮೊದಲ ನವೋದಯ ಕಾಲದ ಕವಯಿತ್ರಿ –ಬೆಳಗೆರೆ ಜಾನಕಮ್ಮ.
ಕನ್ನಡದ ಅಚ್ಚು ಮೊಳೆ ಗಳನ್ನು ರೂಪಿಸಿದವರು -ಅತ್ತಾವರದ ಅನಂತಾಚಾರಿ.
ಮೂಲ:ಸಂಗ್ರಹ.

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s