Uncategorized

ಗಣೇಶ

Ganesha

ಜಗದ್ಗುರು ಶ್ರೀ ಮಧ್ವಾಚಾರ್ಯರು ಬಣ್ಣಿಸಿದಂತೆ ”ಮೋನಯಾ
ದಾಸಾ ಪ್ರಪ್ರಕ್ಸಿ ”-ಈ ನಾಮಾಂಕಿತವನ್ನು ತಿರುವು ಮುರುವು
ಮಾಡಿದರೆ ”ಕ್ಷಿಪ್ರ ಪ್ರಸಾದಾಯ ನಮೋ ” ಎಂದಾಗುತ್ತದೆ. ಇದುವೇ
ಈ ಮಂತ್ರದ ವಿಶೇಷತೆ. ಅತಿ ಶೀಘ್ರ ದಲ್ಲಿಯೇ ಫಲವನ್ನು ನೀಡುವ
ಸಾಮರ್ಥ್ಯವುಳ್ಳವನು ಕ್ಷಿಪ್ರ ಪ್ರಸಾದ ಗಣಪತಿ ಎಂಬುದು ಇದರರ್ಥ.
ಜೀವ ಮಾನವರು ಕ್ಷಿಪ್ರ ಗಣಪನ ಚಿಂತನೆ ಧ್ಯಾನ ಮಾಡಿದರೆ
ಒಳ ಹೊರಗಿನ ಸಮಸ್ಯೆ, ರೋಗ ಬಾಧೆ ಹಾಗೂ ಮನಸ್ಸಿನ ಉನ್ಮಾದಗಳಿಗೆ
ಪರಿಹಾರ ಸಿಗುವುದು. ಗಣಪತಿ ವಿಶ್ವಂಭರ. ವಿಶ್ವ ವ್ಯಾಪಿ. ಇವನಿಗೆ
ಅಗ್ರಪೂಜೆ. ಮಕ್ಕಳ ವಿದ್ಯಾರಂಭದ ಶ್ರೀಕಾರ ಬಳ್ಳಿಯಲ್ಲೂ ಇವನ
ನಾಮಾಂಕಿತ ಮುದ್ರೆ ಇದೆ.
ಧೃತ ಪಾಶಾಂಕುಶ ಕಲ್ಪಲತಾ ಸ್ವದಂತಶ್ಚ ಬೀಜ ಪೂರಯುತ।
(ಪಾಶ,ಅಂಕುಶ, ಕಲ್ಪಲತೆ, ಸ್ವದಂತ, ದಾಳಿಂಬ ಫಲ ಮತ್ತು ಕಮಲ
ಗಳನ್ನು ತನ್ನ ಆರು ಕರಗಳಲ್ಲಿ ಧರಿಸಿರುವವನು )
ಶಶಿಕಲ ಕಲಿತ ಮೌಲಿ ತ್ರಿಲೋಚನೋರುಣಶ್ಚಗಜವದನಃ।
(ಮಸ್ತಕದಲ್ಲಿ ಚಂದ್ರನುಳ್ಳವನು, ತ್ರಿನೇತ್ರಧಾರಿಯು, ಅರುಣ ವರ್ಣದವನು
ಆನೆಯ ಮುಖದವನು )
ಭಾಸುರ ಭೂಷಣ ದೀಪ್ತ ಬೃಹದುದರ ಪದ್ಮವಿಷ್ಟರೋಲ್ಲಸಿತ।
(ಹೊಳೆಯುತ್ತಿರುವ ಅಲಂಕಾರಗಳಿಂದ ಬೆಳಗುತ್ತಲಿರುವವನು,ದೊಡ್ಡ
ಹೊಟ್ಟೆಯವನು, ಪದ್ಮಸಿಂಹಾಸನದಲ್ಲಿ ಕುಳಿತಿರುವವನು )
ವಿಘ್ನ ಪಯೋಧರಪವನ ಕರಧೃತಕಮಲ ಸದಾಸ್ತುಮೇ ಭೂತ್ಯೆ
(ವಿಘ್ನಗಳೆಂಬ ಮೋಡಗಳಿಗೆ ಬಿರುಗಾಳಿಯಾಗಿರುವವನೂ ಆದ
ಆದ ಕ್ಷಿಪ್ರ ಪ್ರಸಾದ ಗಣಪತಿಯು ನಮಗೆ ಸದಾ ಐಶ್ವರ್ಯ ದಾಯಕನಾಗಲಿ)
ಮುದ್ಗಲ ಪುರಾಣೋಕ್ತ ಕ್ಷಿಪ್ರ ಪ್ರಸಾದ ಗಣಪತಿಯ ಧ್ಯಾನ ಶ್ಲೋಕ.
ಮೂಲ:ಸಂಗ್ರಹ.

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s