Uncategorized

ಕನ್ನಡ ಸೌರಭ.

೧.ವ್ಯಕ್ತಿತ್ವ ಶೋಭಿಸುವುದು ಚಿನ್ನ- ರನ್ನದ ಆಭರಣ ಗಳಿಂದಲ್ಲ.
ಮಧುರ ಮಾತಿನ ಮೋಡಿಯಿಂದ. ಸುಭಾಷಿತ ಸರ್ವ ರಸಗಳಲ್ಲೂ
ಹೆಚ್ಚಿನದು. ಸುಭಾಷಿತದ ರಸದ ಮುಂದೆ ದ್ರಾಕ್ಷಿ ಬಾಡಿ ಹೋಯಿತಂತೆ.
ಸಕ್ಕರೆ ಕಲ್ಲಾಯಿತಂತೆ. ಅಮೃತವು ಸ್ವರ್ಗಕ್ಕೆ ಹೊರಟು ಹೋಯಿತಂತೆ.
ಚೆನ್ನುಡಿಯ ರಸವನ್ನು ಮೊಗೆ ಮೊಗೆದು ಕುಡಿದಂತೆ ಆನಂದ ವರ್ಧಿಸುತ್ತದೆ.
ಜ್ಯೋತಿಷಿಯೊಬ್ಬ ಅರಸನ ಜಾತಕವನ್ನು ಪರಿಶೀಲಿಸಿ, ”ನಿಮ್ಮ ಪತ್ನಿ,
ಪುತ್ರರು ನಿಮ್ಮ ಕಣ್ಣು ಮುಂದೆಯೇ ಸಾಯುತ್ತಾರೆ ” ಎಂದನಂತೆ.
ಅಸಮಾಧಾನಗೊಂಡ ರಾಜ ಆತನನ್ನು ಸಮ್ಮಾನಿಸಲಿಲ್ಲ. ಇನ್ನೊಬ್ಬ
ಜ್ಯೋತಿಷಿಯನ್ನು ಕರೆಸಿದ ರಾಜ, ಗ್ರಹ ಗತಿಯನ್ನು ಅವನಲ್ಲಿ ಕೇಳಿದ.
ಆತ, ”ನಿಮ್ಮ ಪತ್ನಿ-ಪುತ್ರರಿಗಿಂತ ನೀವೇ ದೀರ್ಘಾಯುಷಿಗಳಾಗಲಿದ್ದೀರಿ”.
ಅಂದನಂತೆ. ರಾಜನಿಗೆ ಸಂತಸವಾಯಿತು. ಆ ಜ್ಯೋತಿಷಿಗೆ ರಾಜ
ಸಮ್ಮಾನವಾಯಿತು. ಹೀಗಾಗಿ, ”ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ
ನರಕ”.
ನಿರಂತರವಾದ ಬೆಳವಣಿಗೆಯೇ ಜೀವಂತಿಕೆಯ ಲಕ್ಷಣ. –ಡಿ. ವಿ. ಜಿ.
೨. ಜೀವರುಗಳಾದ ನಾವು ಪಾಪ ಮಾಡುತ್ತೇವೆ. ಮೈ ಬೆವರಿದಂತೆ,
ಬಟ್ಟೆಯಲ್ಲಿ ಕೊಳೆಯಾದಂತೆ, ನಾವು ನಿತ್ಯವೂ ಸ್ನಾನಮಾಡಿ ಶುಚಿಯಾದ
ಬಟ್ಟೆಗಳನ್ನುಡುವಂತೆ, ಅಧ್ಯಾತ್ಮ ಸಾಧನೆಯಿಂದ, ಪುಣ್ಯ ಕಾರ್ಯದಿಂದ
ನಾವು ನಿತ್ಯ ನಿರ್ಮಲರಾದರೆ, ದೇವರನ್ನು ಕಾಣಲು ಬೇರೆ ಪ್ರಯತ್ನವೇ
ಬೇಕಾಗಿಲ್ಲ. ದೇವರೆಂದರೆ ಸಕಲ ಒಳಿತುಗಳ ಮೂರ್ತರೂಪ. ಅವನು
ಮೆಚ್ಚುವಂಥ ಕೆಲಸಗಳನ್ನು ಮಾಡಬೇಕು.
–ಶುಕ.
ಮೂಲ:ಸಂಗ್ರಹ.

3 thoughts on “ಕನ್ನಡ ಸೌರಭ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s