Uncategorized

ಶ್ರೀ ಕೃಷ್ಣ.

krishna

ಬಹು ತೆರನಾದ, ಬೆರಗು ಗೊಳಿಸುವ, ವಿಭಿನ್ನ ನಿಲುವುಗಳ ವ್ಯಕ್ತಿತ್ವದ
ಭಗವದವತಾರಿ ಶ್ರೀ ಕೃಷ್ಣನನ್ನು ಪರಿಚಯಿಸುವಲ್ಲಿ ಭಾಗವತಾದಿ
ಹಲವು ಪುರಾಣಗಳು, ಮಹಾಭಾರತ ಮತ್ತು ಹರಿವಂಶ ಪ್ರಮುಖವಾಗಿವೆ.
ಶ್ರೀ ಕೃಷ್ಣ ಗಾನಮೂರ್ತಿ,ವೇಣುಗಾನಲೋಲ,ತ್ರಿಭುವನಪಾಲ,
ನವನೀತ ಚೋರ, ನರ ಮಿತ್ರ ಧೀರ, ನರ ಸಿಂಹ ಶೂರ, ಸಾಮಜ ವರ
ಗಮನ, ಮೋಹನ ಮಯ ತವ ಮುರಳೀಗಾನ,ಸಾಮವೇದದಿಂದ ಜನಿಸಿದ
ಅಮೃತಮಯವಾದ ಸಂಗೀತದಲ್ಲಿ ಪರಿಣತ, ವೇಣುನಾದ ಪ್ರಿಯ,ವಾದನ
ವೈಖರಿಯಿಂದ ಲೋಕವನ್ನು ಆಕರ್ಷಿಸುವವನು, ದೇವತೆಗಳಿಂದ
ಪೂಜಿಸಲ್ಪಡುವವನು.
. ಶ್ರೀ ಕೃಷ್ಣನನ್ನು ಸಂಗೀತದ ಮೂಲಕ ಸುಲಭದಲ್ಲಿ ಒಲಿಸಿಕೊಳ್ಳಬಹುದು.
ಮಲಗಿ ಹಾಡಿದರೆ ಕುಳಿತು ಕೇಳುವ,ಕುಳಿತು ಹಾಡಿದರೆ ನಿಂತು ಕೇಳುವ,
ನಿಂತು ಹಾಡಿದರೆ ನಲಿದು ಕೇಳುವ ಹರಿ, ನಲಿದರೆ ಸುಲಭದಲ್ಲಿ
ಒಲಿಯುವನಂತೆ.
ಶ್ರೀ ಕೃಷ್ಣನ ವ್ಯಕ್ತಿತ್ವದ ಅತಿ ರಂಜನೀಯ ಅಂಶವೇ ಸಂಗೀತ,
ನೃತ್ಯದ ಮೇಲಿರುವ ಆತನ ಪ್ರಭುತ್ವ. ಗೀತಾಚಾರ್ಯನಾದ ಶ್ರೀಕೃಷ್ಣ,
ವೇದಗಳಲ್ಲಿ ತಾನು ಸಂಗೀತ ಪ್ರಧಾನವಾದ ಸಾಮವೇದ ಎಂದಿರುತ್ತಾನೆ.
”ವೇದಾನಾo ಸಾಮ ವೇದೋಸ್ಮಿ”. ದೇವತಾಂಶದೊಂದಿಗೆ ಪೋಣಿಸಲ್ಪಟ್ಟ
ಈ ಕಲಾ ಶ್ರೀಮಂತಿಕೆ ಆತನ ವ್ಯಕ್ತಿತ್ವಕ್ಕೆ ವಿಶೇಷ ಮೆರುಗನ್ನು ನೀಡಿದೆ.
ಭಾರತೀಯ ಕಲಾಕಾರರಿಗೆ ಶ್ರೀ ಕೃಷ್ಣ ಅತ್ಯಂತ ಪ್ರಿಯನು.
”ರಂಗ ಕೊಳಲನೂದಲು ಮಂಗಳವಾಯ್ತು ಧರೆ”
”ನಾಮ ಸಂಕೀರ್ತನೆ ಅನುದಿನ ಮಾಳ್ವಗೆ ನರಕ ಭಯವಿಲ್ಲ”
”ಕೀರ್ತನೆ ಮಾತ್ರದಿ ಕಲಿಯುಗದಲಿ ಮುಕುತಿಯನೀವ ಪುರಂದರ ವಿಠಲ”
ಶ್ರೀ ಕೃಷ್ಣನ ಅಷ್ಟ ಮಹಿಷಿಯರು –ರುಕ್ಮಿಣಿ (ಭೀಷ್ಮಕ ರಾಜನ ಮಗಳು)
ಸತ್ಯಭಾಮೆ (ಸತ್ರಾಜಿತ ರಾಜನ ಮಗಳು), ನೀಲಾ ದೇವಿ(ನಗ್ನಜಿತ್ ರಾಜನ ಮಗಳು)
ಭದ್ರಾದೇವಿ(ಸೋದರತ್ತೆಶ್ರುತಕೀರ್ತಿ ಮಗಳು), ಮಿತ್ರವಿಂದಾ (ಮತ್ತೊಬ್ಬ ಸೋದರತ್ತೆ
ರಾಜಾದೇವಿ ಮಗಳು), ಕೇಳಿಂದಿ(ಸೂರ್ಯ ಪುತ್ರಿ ಯಮುನೆಯ ಸೋದರಿ),
ಲಕ್ಷಣಾ (ಮದ್ರಾಧಿಪತಿ ಮಗಳು ), ಜಾ೦ಬವತಿ(ಜಾ೦ಬವಂತನ ಮಗಳು )
. ಅಣ್ಣ -ಬಲರಾಮ. ಸಾರಥಿ –ದಾರುಕ. ಶಂಖ –ಪಾಂಚಜನ್ಯ.
ರಥದ ಕುದುರೆಗಳು–ಶೈಭ್ಯ,ಸುಗ್ರೀವ,ಮೇಘ ಪುಷ್ಪ, ಬಿಲಾಹಕ.
ಗುರುಕುಲದಲ್ಲಿ ಗುರು ಮತ್ತು ಪುರೋಹಿತ –ಸಾಂದೀಪನಿ ಆಚಾರ್ಯ.
ಮಿತ್ರ –ಕುಚೇಲ. ಸೇನಾಪತಿ –ಅನಾದೃಷ್ಟಿ. ಮುಖ್ಯಮಂತ್ರಿ –ವಿಕದ್ರು.
ದಶ ಮಂತ್ರಿಗಳು -ಉದ್ಧವ, ವಸುದೇವ,ಕಂಕ , ವಿಪ್ರಥು, ಶ್ವಫಲ್ಕ,
ಚಿತ್ರಾ೦ಗದ,ಸತ್ಯಕ, ಬಲ, ಭದ್ರ,ಪೃಥ.
ಯೋಧರಲ್ಲಿ ಪ್ರಮುಖ -ಸಾತ್ಯಕಿ.
ಸಮುದ್ರದಲ್ಲಿ ನಿರ್ಮಿಸಿದ ಪಟ್ಟಣ -ದ್ವಾರಕ.
ತನ್ನ ಅವಸಾನ ಕಾಲದಲ್ಲಿ ಅರಮನೆ ಹೊರತಾಗಿ ಇಡೀ
ನಗರವನ್ನು ಸಮುದ್ರ ಹಾಳುಮಾಡುವಂತೆ ಆದೇಶಿಸಿದನು.
ಕ್ರಿಸ್ತ ಪೂರ್ವ ೩೧೧೩ರಲ್ಲಿ ಶ್ರೀ ಕೃಷ್ಣನ ಅವತಾರ ಸಮಾಪ್ತಿ
ಯಾಯಿತೆಂಬುದು ಇತಿಹಾಸಕಾರರ ಉಲ್ಲೇಖ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s