Uncategorized

ಕನ್ನಡ ಸುಭಾಷಿತಗಳು.

೧. ಮುಳ್ಳೊoದು ಕೈಗೆ ಚುಚ್ಚಿದಾಗ ರಕ್ತ ಹರಿಯುತ್ತದೆ. ಆದರೆ
ನಮ್ಮ ಮನಸ್ಸಿನಲ್ಲಿ ದುರಹಂಕಾರ,ದ್ವೇಷ,ಲೋಭ, ಮೋಹ,
ಮದ, ಮತ್ಸರ ಜೊತೆಗೆ ಅನೇಕ ಮುಳ್ಳುಗಳು ಚುಚ್ಚಿ ಕೊಂಡಿರುವಾಗ
ನಮಗೆಲ್ಲಿಯ ಶಾಂತಿ?—ಡಾ. ವೀರೇಂದ್ರ ಹೆಗ್ಗಡೆ.
೨. ಕ್ಷೋಭೆ, ಅಶಾಂತಿ ತಣಿಸುವ ಶಕ್ತಿ ಕಲೆಗಿದೆ.
ಯಾವುದೇ ಒಂದು ಕಲೆ ಉಳಿಯಬೇಕಾದರೆ ಪ್ರೋತ್ಸಾಹ ಅಗತ್ಯ.
೩. ಸೂರ್ಯನಿಲ್ಲದ ಆಕಾಶ,ನೀರಿಲ್ಲದ ನದಿ, ಸತ್ಯವಿಲ್ಲದ ಮಾತು
ನಿಷ್ಪ್ರಯೋಜಕ.
೪. ಮನಸ್ಸು ಮೃದುವಾಗಿರಬೇಕು. ಹೃದಯ ಅರಳುತ್ತಾ ಹೋಗಬೇಕು.
ಅದೇ ಸಂಸ್ಕೃತಿ. —–ರಸ್ಕಿನ್.
೫. ಹೆಚ್ಚು ಬರೆದವನಲ್ಲ। ನಿಚ್ಚ ಬರೆದವನಲ್ಲ
ಮೆಚ್ಚಿಸಲು ಬರೆದಭ್ಯಾಸವಿಲ್ಲ ।
ಇಚ್ಛೆಗೆದೆಯೊಪ್ಪಿ, ಬಗೆ ಬಿಚ್ಚಿದರೆ, ಕಣ್ಗೆ ಮಯ್ ।
ಎಚ್ಚುವಂದದಿ ತಿದ್ದಿ ತೀಡಿ ಬರೆವೆ ।–ಸೇಡಿಯಾಪು ಕೃಷ್ಣ ಭಟ್ಟ.
೬. ಅಡಗೀಯ ಮನೆಯಲ್ಲಿ ಮಡದೀಯ ಸುಳಿವಿಲ್ಲ
ಅಡಿಗೆ ಬಾಯಿಗೆ ರುಚಿಯಿಲ್ಲ,ಹಡೆದವ್ವ
ಮಡದಿ ತವರೀಗೆ ಹೋಗ್ಯಾಳ.
೭. ವಿವಾಹ ಎಂಬ ಪುಸ್ತಕದ ಮೊದಲ ಪುಟಗಳೆಲ್ಲ ಕಾವ್ಯ.
ಆ ಮೇಲಿನದು ವ್ಯಾಕರಣ. –ನಿಕೋಲಸ್ ಬಿವರ್ಲೆ.
೮. ಕವಿಗಳು ಬುದ್ಧಿವಂತಿಕೆಯ ಅನೇಕ ಭಾರಿ ಭಾರಿ ವಿಷಯಗಳನ್ನು
ಬರೆದರೂ ಅವರಿಗೇ ಅದರ ಅರ್ಥ ಆಗಿರುವುದಿಲ್ಲ. –ಪ್ಲೇಟೊ
೯. ಕಡಲ ಕಿಚ್ಚನು ಆರಿಸಬಹುದು, ಒಡಲಕಿಚ್ಚನು ಆರಿಸಲಹುದೇ ?
ಬಿಡದೆ ಅರ್ಚಿಸಿ ದೇವನನೊಲಿಸಬಹುದು, ಜಗವ ಮೆಚ್ಚಿಸ ಬಹುದು;
ಜನರ ಮೆಚ್ಚಿಸಲಹುದೇ ?
೧೦. ಒಪ್ಪು -ತಪ್ಪುಗಳ ನಿರಂತರ ಸಂಘರ್ಷ ಈ ದೇಹದ ಒಳಗೂ
ಹೊರಗೂ ನಡೆಯುತ್ತಲೇ ಇರುತ್ತದೆ. ಒಳಗಿನದಕ್ಕೆ ಆತ್ಮ ಸಾಕ್ಷಿ,
ಹೊರಗಿನದಕ್ಕೆ ದೈವ ಸಾಕ್ಷಿಗಳ ತೀರ್ಪೆ ಅಂತಿಮ. ಎಂದೆಂದಿಗೂ
ಒಪ್ಪಿನದೇ ಉಳಿವು, ತಪ್ಪಿನದೇ ಅಳಿವು, ಇದೇ ಸೃಷ್ಟಿಯ ಸತ್ಯ.
ಮೂಲ:ಸಂಗ್ರಹ.

4 thoughts on “ಕನ್ನಡ ಸುಭಾಷಿತಗಳು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s