Uncategorized

ಕನ್ನಡ ಸುಭಾಷಿತಗಳು.

೧. ಹಚ್ಚುವುದಾದರೆ ದೀಪವನ್ನು ಹಚ್ಚು;ಬೆಂಕಿಯನ್ನಲ್ಲ.
ಆರಿಸುವುದಾದರೆ ದುಃಖವನ್ನು ಆರಿಸು, ಸಂತಸವನ್ನಲ್ಲ.
೨. ನೇರವಾಗಿ ಮಾತನಾಡುವವರಿಗೆ ನೋವು ಜಾಸ್ತಿ;
ಬಣ್ಣ ಬಣ್ಣದ ಮಾತನಾಡುವವರಿಗೆ ಬೆಲೆ ಜಾಸ್ತಿ.
೩. ಕ್ಷಮೆ ಮತ್ತು ಧನ್ಯವಾದ ತುಂಬಾ ಚಿಕ್ಕ ಪದಗಳು
ಎನಿಸಿದರೂ ಎಷ್ಟೋ ಸಂಬಂಧಗಳು ಒಡೆಯದಂತೆ
ನೋಡಿ ಕೊಳ್ಳುವಲ್ಲಿ ಅತಿ ದೊಡ್ಡ ಪಾತ್ರ ವಹಿಸಿವೆ.
೪. ನಮ್ಮ ತಪ್ಪನ್ನು ನಮ್ಮ ಹತ್ತಿರ ಹೇಳುವವನು
ನಮ್ಮ ನಿಜವಾದ ಮಿತ್ರ. ನಮ್ಮ ತಪ್ಪನ್ನು ಇತರರ
ಹತ್ತಿರ ಹೇಳಿ ನಮ್ಮನ್ನು ಗೇಲಿ ಮಾಡುವವನು ನಮ್ಮ
ಮಿತ್ರನಾದರೂ ಸಹ ಅವನು ಶತ್ರುವಿಗೆ ಸಮ.
೫. ತೆಂಗಿನ ಮರ ಕಲ್ಪ ವೃಕ್ಷವಾದರೂ ಗಂಧದ ಮರಕ್ಕೆ
ಇರೋ ಬೆಲೆ ಇಲ್ಲ. ಹಣ, ಅಧಿಕಾರ ಇರೋರಿಗೆ ಸಿಗೋ
ಗೌರವ ಒಳ್ಳೆ ವ್ಯಕ್ತಿತ್ವ ಇರೋರಿಗೆ ಸಿಗಲ್ಲ.
೬. ಸಾವಿಗೂ ನೋವಿಗೂ ಒಂದಕ್ಷರದ ವ್ಯತ್ಯಾಸ.
ಆದರೆ ಸಾವು ಒಂದೇ ಸಲ ಕೊಂದರೆ ನೋವು ಪ್ರತಿ ಕ್ಷಣ
ಕೊಲ್ಲುತ್ತೆ.
೭. ನಾವೆಲ್ಲರೂ ಬದುಕಿರುವಾಗ ಸತ್ತಂತಿರುವುದರ ಬದಲು
ಸತ್ತಮೇಲೂ ಬದುಕಿರುವಂತೆ ಬದುಕಬೇಕು.
೮. ಜೀವನದಲ್ಲಿ ಯಾವ ದಿನದ ಬಗ್ಗೆಯೂ ಪಶ್ಚಾತ್ತಾಪ
ಪಡಬೇಡಿ. ಒಳ್ಳೆಯ ದಿನಗಳು ಸಂತೋಷ ಕೊಡುತ್ತವೆ.
ಕೆಟ್ಟ ದಿನಗಳು ಅನುಭವದ ಜೊತೆಗೆ ಪಾಠ ಕಲಿಸುತ್ತವೆ.
೯. ಬೆಲೆ ಕಟ್ಟಲಾಗದ, ಖರೀದಿಸಲೂ ಆಗದ ಆದರೆ
ಧಾರಾಳವಾಗಿ ಉಪಯೋಗಿಸಿ ಕೊಳ್ಳಬಹುದಾದ ಸಂಗತಿ
ಎಂದರೆ ಸಮಯ. ಸದ್ವಿನಿಯೋಗ ಮಾಡಿಕೊಳ್ಳೋಣ.
೧೦. ಕಡು ಕತ್ತಲೆಯ ರಾತ್ರಿಯೇ ಅತ್ಯಂತ ಪ್ರಜ್ವಲ
ನಕ್ಷತ್ರಗಳನ್ನು ಸೃಷ್ಟಿಸುತ್ತದೆ.
೧೧. ದೇಹದ ಆರೋಗ್ಯಕ್ಕೆ ಬೇರೆ ಬೇರೆ ಆಹಾರಗಳಿರುತ್ತವೆ.
ಆದರೆ ಮನಸ್ಸಿಗೆ ಕಲೆಯೇ ಆಹಾರ.
೧೨. ಸೆಗಣಿ ಜತೆಗಿನ ಸ್ನೇಹಕ್ಕಿಂತ ಗಂಧದ ಜೊತೆ ಗುದ್ದಾಟ
ಲೇಸು.
೧೩.ಹೃದಯ ಎಂಬ ಪದದೊಳಗಡೆಯೇ ”ದಯ”ವಿದೆ.
ಇನ್ನು ಹೃದಯದೊಳಗೆ ”ದಯ” ಇರದಿದ್ದರೆ ಹೇಗೆ ?
೧೪. ಈ ಜಗತ್ತಿನ ಜನರ ಸಂತೋಷಗಳಲ್ಲಿ ವೈವಿಧ್ಯವಿದೆ.
ಆದರೆ ದುಃಖಗಳೆಲ್ಲವೂ ಒಂದೇ.
೧೫. ನಿನ್ನನ್ನು ತಿರಸ್ಕರಿಸಿದವರಿಗೆ ಏನೂ ಹೇಳದೆ ”ಸಮಯಕ್ಕೆ”
ಬಿಟ್ಟುಬಿಡು. ಒಂದು ದಿನ ಸಮಯವೇ ನಿನ್ನನ್ನು ತಿರಸ್ಕರಿಸಿದವರಿಗೆ
ತಿರುಗಿ ನೋಡುವಂತೆ ಮಾಡುತ್ತದೆ.
ಮೂಲ:ಸಂಗ್ರಹ.

Advertisements

2 thoughts on “ಕನ್ನಡ ಸುಭಾಷಿತಗಳು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s