Uncategorized

ನಿಮಗೆ ಗೊತ್ತೇ ?

೧. ನಮ್ಮ ತುಳುನಾಡು ಉತ್ತರದಲ್ಲಿ ಸುವರ್ಣಾ ನದಿ,
ದಕ್ಷಿಣದಲ್ಲಿ ಚಂದ್ರಗಿರಿ ನದಿ,ಪೂರ್ವದಲ್ಲಿ ಸಹ್ಯಾದ್ರಿ
ಹಾಗೂ ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ ಆವೃತ
ವಾಗಿದೆ. ಈ ತುಳುನಾಡಿಗೆ ಹಿಂದೆ ಆಳ್ವಖೇಡಾ ಎಂಬ
ಹೆಸರಿತ್ತಂತೆ.
ದೈವಾರಾಧನೆ ತುಳುನಾಡಿನ ವಿಶಿಷ್ಟ ಆಚರಣೆ. ದೈವಗಳು
ಭೂತಗಳಲ್ಲ. ದೇವರು ಅವರ ಗಣಗಳನ್ನುದೈವದ ರೂಪಕೊಟ್ಟು
ಭೂಮಿಗೆ ಕಳುಹಿಸುತ್ತಾರೆ. ಈ ದೈವಗಳು ತುಳುನಾಡಿನಲ್ಲಿ
ನೆಲೆ ನಿಂತಿವೆ. ದೈವಗಳಲ್ಲಿ ಲೌಕಿಕ ಶಕ್ತಿ ಮತ್ತು ಅಲೌಕಿಕ
ಶಕ್ತಿಎಂಬ ೨ ಪ್ರಕಾರಗಳಿವೆ. ಅಲೌಕಿಕ ಶಕ್ತಿಗಳೆಂದರೆ ಒಂದು
ನಿಗದಿತ ಕಾರ್ಯಕ್ಕಾಗಿ ದೇವರಿಂದ ಸೃಷ್ಟಿಸಲ್ಪಟ್ಟ ದೈವಗಳು.
ಉದಾಹರಣೆಗೆ ಜಾರಂದಾಯ, ಕೊಡಮಣಿತ್ತಾಯ, ಜುಮಾದಿ
ಇತ್ಯಾದಿ ಶಕ್ತಿಗಳು.
೨.ಈಗಿನ ತಿರುಮಲೆಗೆ ತ್ರೇತಾಯುಗದಲ್ಲಿ ಅಂಜನಾದ್ರಿ ಎಂದು
ಕರೆಯುತ್ತಿದ್ದರು. ಕಾರಣ ಅಂಜನೆ (ಆಂಜನೇಯನ ತಾಯಿ )
ತಪಸ್ಸಿಗೆ ಕುಳಿತದ್ದು ಅಲ್ಲಿ. ಅಲ್ಲೇ ಆಕೆಗೆ ವರಪ್ರಾಪ್ತಿ. ರಾಮಾಯಣದ
ಪ್ರಕಾರ ಆಂಜನೇಯನ ಊರು -ಪರ್ವತ ಮೇರುಗಿರಿ. ಸೂರ್ಯನಿಂದ
ವರ ಪಡೆದ ಪರ್ವತ ಸುಮೇರುಗಿರಿ. ಮಾರುತಿಯ ತಂದೆ ಕೇಸರಿ
ಅಲ್ಲಿನ ರಾಜ್ಯಕ್ಕೆ ರಾಜ. ಕೇಸರಿ ಪುತ್ರ ಆಂಜನೇಯನ ಜನ್ಮ ಜಾಗ
-ಹೇಮಾದ್ರಿ (ಸುಮೇರುಗಿರಿ).
೩. ತಮ್ಮ ಕಾಲದಲ್ಲಿ ಹತ್ತು ಹಲವು ಕಡೆ ಚೆಲ್ಲಿ ಹೋಗಿದ್ದ ಎಲ್ಲ
ವೇದ ಮಂತ್ರಗಳನ್ನು ಸಂಗ್ರಹಿಸಿ ಅವನ್ನು ವ್ಯವಸ್ಥಿತವಾದ ರೀತಿಯಲ್ಲಿ
ವಿಂಗಡಿಸಿ ತನ್ಮೂಲಕ ವೈದಿಕ ಸಂಪ್ರದಾಯವನ್ನು ರಕ್ಷಿಸಿದ ಕೀರ್ತಿ
ಕೃಷ್ಣ ದ್ವೈಪಾಯನ ಮಹರ್ಷಿ (ವ್ಯಾಸ ಮುನಿ )ಗಳಿಗೆ ಸಲ್ಲುತ್ತದೆ.
ಆದುದರಿಂದಲೇ ಅವರಿಗೆ ವೇದ ವ್ಯಾಸರೆಂಬ ಬಿರುದು ಬಂದಿತು.
ಅವರ ಜನ್ಮದಿನವನ್ನು ವ್ಯಾಸ /ಗುರು ಪೂರ್ಣಿಮೆ ಎಂದು
ಆಚರಿಸುತ್ತೇವೆ. ಯತಿಗಳ ಸಂಪ್ರದಾಯದಲ್ಲಿ ಚಾತುರ್ಮಾಸ್ಯ
ವ್ರತವು ಇಂದಿನಿಂದ ಪ್ರಾರಂಭವಾಗುತ್ತದೆ.
೪. ಗುರುವಿಲ್ಲದೆ ಭಗವಂತನನ್ನು ಕಾಣಲು ಯತ್ನಿಸಿದವರಿಗೆ
ಸಿಕ್ಕುವುದು ಭಗವಂತನ ಬದಲು ಬರೀ ಬಳಲಿಕೆ ಮಾತ್ರ.
೫.ಗಣಪತಿ ಏಕದಂತ. ಒಂದೇ ದಂತವುಳ್ಳವನು. ಪರಶುರಾಮ
ನೊಡನೆ ಯುದ್ಧ ಮಾಡುವಾಗ ಒಂದು ದಂತ ಮುರಿದು
ಹೋಯಿತಂತೆ. ವ್ಯಾಸರ ಮಹಾಭಾರತವನ್ನು ಬರೆಯುವಾಗ
ಈ ಮುರಿದ ದಂತವನ್ನೇ ಲೇಖನಿಯಂತೆ ಉಪಯೋಗಿಸಿ
ಕೊಂಡನಂತೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s