Uncategorized

ಕನ್ನಡ ಸೌರಭ.

೧. ”ಜನ ಗಣ ಮನ”ಕ್ಕೆ ಭಕ್ತಿ ಮಂತ್ರದ ವ್ಯಾಖ್ಯಾನ.
ಈ ರಾಷ್ಟ್ರಗೀತೆ ಬರೆದವರು ರಾಷ್ಟ್ರ ಕವಿ ರವೀಂದ್ರನಾಥ
ಟಾಗೋರರು. ಈ ಹಾಡನ್ನು ಬ್ರಿಟಿಷರ ಅವಧಿಯಲ್ಲಿ
George ದೊರೆಗೆ ಬರೆದದ್ದು ಎಂದು ಹೇಳುವುದಿದೆ.
ಉಡುಪಿ ಮೂಲದ ಸೂರ್ಯೋದಯ ಪೆರಂಪಳ್ಳಿಯವರು
”ಜನ ಗಣ ಮನ” ಹಾಡು ಒಂದು ಭಕ್ತಿ ಮಂತ್ರ ಎಂಬುದಾಗಿ
ವಿವರಿಸಿದ್ದಾರೆ. ಹಾಡಿನಲ್ಲಿ ಬರುವ ”ಅಧಿನಾಯಕ ಜಯಹೇ ”
ಎಂಬ ಪದ ಪುಂಜ ಭಗವಂತ (ಈಶ್ವರ, ಅಲ್ಲಾ,ಏಸು )ನ ಕುರಿತು
ಹೇಳುತ್ತದೆ. ”ಭಾರತ ಭಾಗ್ಯ ವಿಧಾತಾ” ಎಂದರೆ ಭಾರತ ಮಾತೆಗೆ
ಭಾಗ್ಯವನ್ನು ಕರುಣಿಸುವ ಅಗೋಚರ ಶಕ್ತಿ(ಭಗವಂತ /ವಿಧಾತ)ಯೇ
ನಿನಗೆ ಜಯವಾಗಲಿ ಎಂದು ಅರ್ಥ.
೨. ನಕ್ಕು ಬಿಡಿ.
ಪ್ರ :ಮಾತು ಕೇಳಲು ಆಸಕ್ತಿ ಇಲ್ಲದಾಗಲೂ ಮಾತು ಮುಂದುವರೆಸುವ
ವ್ಯಕ್ತಿಗೆ ಏನೆನ್ನ ಬೇಕು ?
ಉ :ಮೇಸ್ಟ್ರು.
೩. ”ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇ ?” ಎನ್ನುವ ಗಾದೆ, ಗುಬ್ಬಿ ತುಂಬ
ಪಾಪದ ಹಕ್ಕಿಯೆಂದೂ ದೈಹಿಕವಾಗಿ ದುರ್ಬಲವಾದುದೆಂದೂ
ಹೇಳುತ್ತದೆ. ಈ ಪಕ್ಷಿಗಿರುವ ಸಂಸ್ಕೃತ ಹೆಸರು ”ಕಲಂಕ” ಎಂದು.
ಗಂಡು ಗುಬ್ಬಿಯ ಕಣ್ಣಿನ ಸುತ್ತ ಕಾಡಿಗೆ ಹಚ್ಚಿ ಕೊಂಡಂತಿರುತ್ತದೆ.
ಜೊತೆಗೆ ಗಲ್ಲದಲ್ಲೊಂದು ಕಪ್ಪು ಚುಕ್ಕೆ. ಹೆಣ್ಣಿಗೆ ಈ ವಿಶೇಷ ಯಾವುದೂ
ಇಲ್ಲ. ಪುರಾಣದ ಕಥೆಯೊಂದು ಹೀಗಿದೆ.
ಬ್ರಹ್ಮದತ್ತನೆಂಬ ರಾಜನಿಗೆ ಗುಬ್ಬಿಗಳ ಭಾಷೆ ಅರ್ಥವಾಗುತ್ತಿತ್ತಂತೆ.
ಪೂಜನೀಯೆ ಎಂಬ ಗುಬ್ಬಿ ತನ್ನ ಮರಿಯನ್ನು ರಾಜನ ಬಳಿ ಬಿಟ್ಟು
ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿ ಆವಶ್ಯಕ ಕಾರ್ಯಕ್ಕಾಗಿ
ದೂರ ಹೋಯಿತು. ರಾಜನ ಮಗ ಆಡುತ್ತಾಡುತ್ತಾ ಅಕಸ್ಮತ್ತಾಗಿ
ಗುಬ್ಬಿ ಮರಿಯನ್ನು ಹಿಡಿದು ಹೊಸಕಿ ಬಿಟ್ಟ. ಆ ಪುಟ್ಟ ಜೀವಿಯ
ಪ್ರಾಣ ಹೊರಟೇ ಹೋಯಿತು. ಪೂಜನೀಯೆ ಮರಳಿ ಬಂದಾಗ
ಮರಿ ಇಲ್ಲ. ಅತ್ತಳು;ಜಗಳಾಡಿದಳು;ನ್ಯಾಯ ಬೇಡಿದಳು. ರಾಜನಿಗೆ
ಪುತ್ರ ವ್ಯಾಮೋಹ. ಸುಮ್ಮನಿದ್ದ. ಇಂಥ ಮನುಷ್ಯರ ಸಹವಾಸವೇ
ಬೇಡ ಎಂದು ತೀರ್ಮಾನಿಸಿ ಸಿಟ್ಟಿನಲ್ಲಿ ರಾಜನ ಮಗನ ಕಣ್ಣುಗಳನ್ನು
ಕುಕ್ಕಿ ಅವನನ್ನು ಕುರುಡನನ್ನಾಗಿಸಿ ಹಾರಿ ಹೋದಳು. ಇವತ್ತಿಗೂ
ಗುಬ್ಬಿ ಮನುಷ್ಯರ ಕೈಯಲ್ಲಿ ಮುಟ್ಟಿಸಿ ಕೊಳ್ಳುವುದಿಲ್ಲ. ಮನುಷ್ಯ
ನೇನಾದರೂ ಮುಟ್ಟಿದರೆ ಅದರ ಕುಲ ಬಾಂಧವರೆಲ್ಲ ಬಹಿಷ್ಕಾರ
ಹಾಕುತ್ತಾರೆ.
–ಧರಣೀದೇವಿ ಮಾಲಗತ್ತಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s