Uncategorized

ಕನ್ನಡ ಸೌರಭ.

೧. ಹುಸಿ ನಗುತ ಬಂದೇವ,ನಸು ನಗುತ ಬಾಳೋಣ;
ತುಸು ನಗುತ ತೆರಳೋಣ , ಬಡ ನೂರು ವರುಷಾನ
ಹರುಷಾದಿ ಕಳೆಯೋಣ,ಯಾಕಾರ ಕೆರಳೋಣ —ಬೇಂದ್ರೆ.
೨. ಭೂತಕಾಲವು ನಮ್ಮ ಪಾಠಶಾಲೆಯಾಗಬೇಕೇ ಹೊರತು
ಬಂದೀಖಾನೆ ಆಗ ಬಾರದು.
೩. ನಾವು ಗಾಜಿನ ಚೆಂಡಿನಂತಾಗಬಾರದು; ಬದಲಿಗೆ ಪುಟಿದೇಳುವ
ಚೆಂಡಿನಂತಿರಬೇಕು.
೪. ಬದುಕಿನಲ್ಲಿ ನೆನಪು ಇರಲಿ; ನೆನಪಿನೊಳಗೆ ಬದುಕುವುದು ಬೇಡ;
ನೀರಿನಲ್ಲಿ ದೋಣಿಯಲ್ಲದೆ, ದೋಣಿಯಲ್ಲಿ ನೀರಿರಬಾರದು.
೫. ಮಾತಿನಿಂದ ಎರಡು ಉಪಯೋಗಗಳಿವೆ: ಒಂದು-ಅರಿಯುವುದು,
ಇನ್ನೊಂದು ಇರಿಯುವುದು.
೬. ಮರವು ಹಣ್ಣಿನಿಂದ ಹೇಗೆ ಗುರುತಿಸಲ್ಪಡುತ್ತದೆಯೋ ,ಮಾನವನು
ಕೂಡ ತನ್ನ ಉತ್ತಮ ಕೆಲಸಗಳಿಂದ ಪರಿಚಿತನಾಗುತ್ತಾನೆ.
೭. ಸಂಸ್ಕಾರ, ಸಂಸ್ಕೃತಿ ಇದ್ದರೆ ಮಾತ್ರ ನಮ್ಮ ಜೀವನ ಪಾವನವಾಗುತ್ತದೆ.
ಬದುಕು ಎಂಬುದು ಒಂದು ಚಿತ್ರವಿದ್ದಂತೆ. ಬಣ್ಣಗಳ ಲೇಪನ ವಿದ್ದರೆ ಮಾತ್ರ
ಚಿತ್ರ ಸುಂದರವಾಗಿ ಕಾಣುತ್ತದೆ.
೮. ಸಿಟ್ಟು ಬಂದಾಗ ಕಿರಿಚಾಟ ಮಾಡುವುದಕ್ಕೆ ಬಲ ಬೇಡ. ಆದರೆ
ಸಿಟ್ಟು ಬಂದಾಗ ಸುಮ್ಮನಿರಲು ಬಹಳ ಬಲ ಬೇಕಾಗುತ್ತದೆ.
೯. ಜೀವನವೆಂದರೆ ಹಿಮ್ಮುಖವಾಗಿ ಸಾಗಲಾರದ ಪಯಣ.
ಇಂದಿನ ಕ್ಷಣಗಳೆಲ್ಲ ನಾಳೆ ನೆನಪುಗಳು. ಸುಂದರ ನೆನಪುಗಳನ್ನು
ನಮ್ಮದಾಗಿಸಿಕೊಳ್ಳೋಣ.
೧೦. ಪ್ರಜಾಸಮೂಹ ಟೊಳ್ಳಾದ ಬಿದಿರಿನಂತಿರುತ್ತದೆ. ಅದನ್ನು
ಬಳಸಿಕೊಂಡು ಸುಮಧುರವಾದ ಸಂಗೀತವನ್ನು ನುಡಿಸುವುದೋ
ಅಥವಾ ರಣ ಕಹಳೆಯನ್ನು ಊದುವುದೋ ರಾಜನ
ಸಾಮರ್ಥ್ಯಕ್ಕೆ ಬಿಟ್ಟದ್ದು . –ಲಾವೋತ್ಸೆ (ಚೀನಾದ ಸಂತ )
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s