Uncategorized

ಮಹಾಶಿವರಾತ್ರಿ.

shiv

ಮಾಘ ಬಹುಳ ಚತುರ್ದಶಿ -ಶಿವರಾತ್ರಿ.
ಶಿವನು ಸ್ವಯಂಭೂವಾಗಿ ಲಿಂಗ ರೂಪದಲ್ಲಿ ಉಧ್ಭವಿಸಿದ ದಿನ.
ಹಾಲಾಹಲ ವಿಷಪಾನ ಮಾಡಿದ ಸಂದರ್ಭ.
ವಿಷದಿಂದ ಜರ್ಜರಿತನಾದ ಶಿವನ ಶಕ್ತಿಯನ್ನು ಇಮ್ಮಡಿ
ಗೊಳಿಸಲು ಅಂದು ಇಡೀ ರಾತ್ರಿ ಯಾರೂ ಮಲಗದೇ
ಎಲ್ಲ ದೇವತೆಗಳು ಶಿವನನ್ನು ಕೊಂಡಾಡುತ್ತ ಶಿವನ
ಶಕ್ತಿಯನ್ನು ಹೆಚ್ಚಿಸಿದರು. ಎಲ್ಲರೂ ಜಾಗರಣೆ ಮಾಡಿದರು.
ಹೀಗೆ ಜಗಕ್ಕೆರಗಿದ ಕಂಟಕವನ್ನು ಶಿವನು ಪರಿಹರಿಸಿದ್ದು
ಮತ್ತು ಅದಕ್ಕಾಗಿ ದೇವತೆಗಳು ಶಿವನೊಂದಿಗೆ ಕಳೆದ
ಮಹಾರಾತ್ರಿಯ ಉತ್ಸವವೇ ಶಿವರಾತ್ರಿ.
ಅಮಂಗಳದಿಂದ ಮಂಗಳದೆಡೆಗೆ ಸಾಗುವುದೇ ಶಿವರಾತ್ರಿ.
ಶಿವ ಎಂದರೆ ಮಂಗಲ, ಶುಭ, ಪವಿತ್ರ.
ಶಿವ ಎಂದರೆ ಈಶ್ವರ, ಚೈತನ್ಯ , ಕಲ್ಯಾಣ ,ಪ್ರಣವ ಸ್ವರೂಪ,
ಅನಿಕೇತನ ಎನ್ನುವ ಅರ್ಥಗಳೂ ಇವೆ.
ಯೋಗದ ಮೂಲ ಆದಿಯೋಗಿ -ಶಿವ.
ಶಿವಸ್ಯ ರಾತ್ರಿ(ಶಿವನ ರಾತ್ರಿ );ಶಿವಾಯ ರಾತ್ರಿ (ಶಿವನಿಗಾಗಿ
ಇರುವ ರಾತ್ರಿ );ಶಿವಾಚ ಸಾ ರಾತ್ರಿ(ಮಂಗಲಕರವಾದ ರಾತ್ರಿ )
ಉಪ ಎಂದರೆ ಸಮೀಪದಲ್ಲಿ ;ವಾಸ ಎಂದರೆ ವಾಸಿಸು.
ಕಾಯಾ ವಾಚಾ ಮನಸಾ ತ್ರಿಕರಣ ಪೂರ್ವಕವಾಗಿ ಶಿವನ
ಸಮೀಪದಲ್ಲೇ ವಾಸವಾಗಿರುವುದಕ್ಕೆ ಉಪವಾಸ ಎಂದು
ಕರೆಯುವರು.
ಶಂಕರ ಎಂಬುದು ಶಿವನ ಹೆಸರು. ”ಶಂ” ಅಂದರೆ ಒಳ್ಳೆಯದು.
”ಕರ” ಅಂದರೆ ಮಾಡುವವನು. ಶಿವ ಸದಾ ಒಳಿತನ್ನೇ
ಮಾಡುತ್ತಾನೆ ಎಂದರ್ಥ.
ಶಿವ -ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು.
ಶಿವ ರುದ್ರ ತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ.
ಭಗೀರಥನ ತಪಸ್ಸಿಗೆ ಮೆಚ್ಚಿ ಶಿವ ಗಂಗೆಯನ್ನು ತನ್ನ ಜಟೆಯಿಂದ
ಹರಿಯ ಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ.
ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ,ಈಶಾನ -ಶಿವನ
ಐದು ಪ್ರಕಾರಗಳು (ಪಂಚ ಲಿಂಗೇಶ್ವರ )
”ನಮಸ್ತೇ ಅಸ್ತು ಭಗವನ್ ವಿಶ್ವೇಶ್ವರಾಯ
ಮಹಾದೇವಾಯ, ತ್ರ್ಯ೦ಬಕಾಯ,
ತ್ರಿಪುರಾಂತಕಾಯ, ನೀಲಕಂಠಾಯ,
ಮೃತ್ಯುಂಜಯಾಯಃ, ಸರ್ವೇಶ್ವರಾಯಃ
ಸದಾಶಿವಾಯ, ಶ್ರೀಮನ್ ಮಹಾದೇವಾಯ ನಮಃ ”
”ಶಿವ ಶಿವ ಎಂದರೆ ಭಯವಿಲ್ಲ; ಶಿವ ನಾಮಕೆ ಸಾಟಿ ಬೇರಿಲ್ಲ ”
”ಬೇರೆ ಹಬ್ಬಗಳಲ್ಲಿ ಸಿಹಿ ತಿಂಡಿ ಪಾಯಸ ।
ಶಿವರಾತ್ರಿಯಂದು ಜಾಗರಣೆ ಉಪವಾಸ ।
ಎಲ್ಲ ದೇವರಿಗೆ ಹೂವಿನ ಹಾರ ।
ಶಿವನಿಗೆ ಮಾತ್ರ ಹಾವಿನ ಹಾರ”-H. Dundiraj.

ಮೂಲ :ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s