Uncategorized

ನಿಮಗೆ ಗೊತ್ತೇ ?

ಪ್ರಸಿದ್ಧ ವ್ಯಕ್ತಿ ಗಳು —————————-ತಾಯಿ.
೧. ಬಸವಣ್ಣ ——————————ಮಾದಲಾಂಬೆ.
೨. ಅಕ್ಕ ಮಹಾದೇವಿ ——————-ಸುಮತಿ.
೩. ಹೇಮರೆಡ್ಡಿ ಮಲ್ಲಮ್ಮ ————-ಗೌರಮ್ಮ.
೪. ಸ್ವಾಮಿ ವಿವೇಕಾನಂದ ————ಭುವನೇಶ್ವರಿ.
೫. ರಾಜಾರಾಮ ಮೋಹನ್ ರಾಯ್— ತರಣಿ ದೇವಿ.
೬. ಶಿವಾಜಿ ———————————-ಜೀಜಾ ಬಾಯಿ.
೭. ಸುಭಾಶ್ಚಂದ್ರ ಬೋಸ್———— ಪ್ರಭಾವತಿ ದೇವಿ.
೮.ಗಾಂಧೀಜಿ————————– ಪುತಲೀ ಬಾಯಿ.
೯. ಜವಾಹರಲಾಲ ನೆಹರು———– ಸ್ವರೂಪ ರಾಣಿ.
೧೦. ಸರೋಜಿನಿ ನಾಯ್ಡು ———–ವರದಾ ಸುಂದರಿ.
೧೧. ಮಹಾವೀರ —————ತ್ರಿಶಲಾ.
೨. ಕಾಸರಗೋಡು ಅಂದರೆ ೨ ಸಂಸ್ಕೃತ ಪದಗಳ ಕೂಡುವಿಕೆ.
ಅವುಗಳೆಂದರೆ ”ಕಾಸರ ”(ಹೊಳೆ ) ಮತ್ತು ”ಕ್ರೋಡ”(ನಿಧಿ).
ಅಂದರೆ ಹೊಳೆ,ಕೆರೆ ಗಳಿಂದ ತುಂಬಿದ ನಾಡು.
ಇನ್ನೊಂದು ಮೂಲದ ಪ್ರಕಾರ ಕಾಸರಕ (ಕಾಯರ್ ) ಮರಗಳು
ಹೇರಳವಾಗಿ ಇಲ್ಲಿರುವುದರಿಂದ ಈ ನಾಡನ್ನು ‘ಕಾಸರ ಗೋಡು’
ಎಂದು ಕರೆಯಲಾಯಿತು.
೩. GOD IS NOWHERE ಎಂದು ಭಾವಿಸದೆ GOD IS NOW HERE
(ಹೃದಯ ಮಂದಿರದಲ್ಲೇ ಭಗವಂತನಿದ್ದು watches and catches
ಎಂದು ಅರಿತು ಕೊಂಡಾಗ ಕೀಳರಿಮೆ ಹೇಳ ಹೆಸರಿಲ್ಲದಂತೆ
ಕಾಲುಕೀಳಲೇ ಬೇಕು.)
೪.ಮಹಾಭಾರತದ ಭೀಷ್ಮ ಪರ್ವದ ೨೫ ರಿಂದ ೪೨ ನೇ ಅಧ್ಯಾಯದ
ವರೆಗಿನ ಭಾಗ ಗಳನ್ನೇ ಭಗವದ್ಗೀತೆ ಎಂದು ಕರೆಯುತ್ತಿರುವುದು.
ಮಹಾಭಾರತವು ೧೮ ಪರ್ವಗಳಲ್ಲಿ ೧ ಲಕ್ಷಕ್ಕೂ ಮೀರಿದ ಶ್ಲೋಕ
ಗಳಲ್ಲಿ ಹರಡಿಕೊಂಡಿದ್ದರೆ ಭಗವದ್ಗೀತೆಯು ೧೮ ಅಧ್ಯಾಯಗಳಲ್ಲಿ
೭೦೦ ಶ್ಲೋಕಗಳಲ್ಲಿ ಅಡಕವಾಗಿದೆ.
೫. ಭಗವಂತನು ಎಲ್ಲೆಲ್ಲೂ ಇರುವ. ಬಿಂದುವಿನಲ್ಲಿ,ಸಿಂಧುವಿನಲ್ಲಿ,
ತೆರೆಯಲ್ಲಿ, ಮರೆಯಲ್ಲಿ, ಒಳಿತಿನಲ್ಲಿ, ಕೆಡುಕಿನಲ್ಲಿ,ನೋವಿನಲ್ಲಿ,
ನಲಿವಿನಲ್ಲಿ -ಎಲ್ಲೆಲ್ಲೂ ಎಂದೆಂದೂ ಇರುವ. ಆದರೆ ನೋಡುವ
ಕಣ್ಣುಗಳಿದ್ದರೆ ಮಾತ್ರ ಕಾಣಸಿಗುವ. ಕಾಣುವ ಕಣ್ಣಿಗೊಂದು
ಅಳತೆಯಿದೆ.ನೋಡುವ ನೋಟಕ್ಕೂ ಮಿತಿ ಇದೆ. ಆದರೆ ಭಗವಂತನಿಗೆ
ಮಿತಿ ಇಲ್ಲ. ರೂಪವಿಲ್ಲ, ಆಕಾರವೂ ಇಲ್ಲ. ರೂಪವಿಲ್ಲದ, ಆಕಾರವಿಲ್ಲದ,
ಅಳತೆಗೆ ನಿಲುಕದ ಅನಂತ ಭಗವಂತನನ್ನು ಪರಿಮಿತಿಗೆ ಒಳಪಟ್ಟ
ನಮ್ಮ ಬರಿಗಣ್ಣು ನೋಡುವುದೆಂತು ?
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s