Uncategorized

ಕನ್ನಡ ಸೌರಭ.

೧. ಸಾವಿಗೂ-ಹುಟ್ಟಿಗೂ ನಡುವೆ ಒಂದು ಪುಟ್ಟ ಜೀವನ ಇಟ್ಟು,

ಹೊರಲಾರದಷ್ಟು ಜವಾಬ್ದಾರಿ ಕೊಟ್ಟು ,
ಮರೆಯಲಾರದಷ್ಟು ಬಂಧನಗಳನ್ನು ಕೊಟ್ಟು,
ಚಂಚಲ ಮನಸ್ಸಿಗೆ ಮನುಷ್ಯನನ್ನುಜೊತೆಯಾಗಿಟ್ಟು,
ಅದೆಷ್ಟು ಆಟಗಳನ್ನು ಆಡುತ್ತಿದ್ದಾನೋ ಆ ಭಗವಂತ … !
೨. ಇಷ್ಟವಿಲ್ಲದ ”ಪ್ರೀತಿ ”ಅಥವಾ ”ಸ್ನೇಹ”ಬೊಗಸೆ ಕೈಯಲ್ಲಿ
ತುಂಬಿರೋ ನೀರಿನಂತೆ …! ಎಷ್ಟೇ ಜೋಪಾನವಾಗಿ ಹಿಡಿದರೂ
ಸೋರಿ ಹೋಗುತ್ತದೆ.
೩.ನಿದ್ದೆಯಲ್ಲಿರುವಾಗ ಕಾಣುವಂತಹದು ಕನಸಲ್ಲ. ಬದಲಾಗಿ
ನಿಮಗೆ ನಿದ್ದೆ ಮಾಡಲು ಬಿಡದೇ ಇರುವಂತಹುದೇ ಕನಸು.
೪. ದೇಶವೊಂದು ಭ್ರಷ್ಟಾಚಾರ ಮುಕ್ತವಾಗಿ ಸುಂದರ ಮನಸ್ಸುಗಳ
ರಾಷ್ಟ್ರವಾಗಬೇಕಾದರೆ ಅದು ಸಮಾಜದ ಮೂರು ಮುಖ್ಯ ಪ್ರಮುಖರಿಂದ
ಸಾಧ್ಯ. ಅವರೇ ತಾಯಿ,ತಂದೆ ಮತ್ತು ಶಿಕ್ಷಕರು.
೫. ಒಬ್ಬರ ಮನ ನೋಯಿಸುವುದು ಸಮುದ್ರದಲ್ಲಿ ಕಲ್ಲು ಎಸೆದಷ್ಟೇ
ಸುಲಭ ;ಆದರೆ ಆ ಕಲ್ಲು ಎಷ್ಟು ಆಳಕ್ಕೆ ಹೋಗಬಲ್ಲುದು ಎನ್ನುವುದು
ಎಸೆದವನಿಗೆ ತಿಳಿದಿರುವುದಿಲ್ಲ.
೬.ಉರಿದು ಬೂದಿಯಾಗುವ ಬದಲು ಉರಿದು ಬೆಳಕಾಗಿ ಬಾಳೋಣ.
೭. ಒಂಟಿತನವೆಂಬ ಭಾವ ನಮ್ಮೊಡನೆ ಯಾರೂ ಇಲ್ಲ ಎಂಬ ನೋವನ್ನು
ನೀಡಿದರೆ ಏಕಾಂತವೆಂಬ ಭಾವ ನಮ್ಮೊಳಗಿನ ನಮ್ಮನ್ನು ಅರ್ಥೈಸಿ
ಕೊಳ್ಳಲು ಸಹಾಯ ಮಾಡುತ್ತದೆ.
೮.ಈ ಮನಸ್ಸು ಎಷ್ಟು ವಿಚಿತ್ರ ಅಲ್ವಾ ?ನಮ್ಮನ್ನು ಸಾವಿರಸಲ ಖುಷಿ
ಪಡಿಸಿದವರಿಗಿಂತ ಒಮ್ಮೆ ನೋವು ಕೊಟ್ಟವರನ್ನೇ ಪದೇ ಪದೇ
ನೆನಪಿಸಿಕೊಳ್ಳುತ್ತೆ.
೯. ದೇಹದ ಮೇಲೆ ಬೀಳುವ ಪೆಟ್ಟಿಗಿಂತ ನಂಬಿಕೆಯ ಮೇಲೆ ಬೀಳುವ
ಪೆಟ್ಟು ಹೆಚ್ಚು ನೋವು ಕೊಡುತ್ತೆ.
೧೦. ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು
ಮೇಲು.
ಮೂಲ:ಸಂಗ್ರಹ.
.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s