Uncategorized

ಪೌರಾಣಿಕ ಮಾಹಿತಿ.

೧. ವೇದವತಿ–ಬೃಹಸ್ಪತಿಯ ಮಗನಾದ ಶುಕಧ್ವಜನ ಮಗಳು.
ವಿಷ್ಣು ಮೂರ್ತಿಯನ್ನೇ ತನ್ನ ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂಬ
ಹಂಬಲ ಹೊತ್ತ ಇವನನ್ನು ದಂಡನೆಂಬ ಒಬ್ಬ ರಾಕ್ಷಸನು ಕೊಲ್ಲಲು,
ತಾಯಿಯೂ ಸಹಗಮನ ಮಾಡಿಕೊಳ್ಳಲು ,ತಂದೆಯ ಕೋರಿಕೆಯನ್ನು
ನೆರವೇರಿಸಲು ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಿ ಕೊಂಡಿರುವಾಗ
ಗರ್ವಿಷ್ಟ ರಾವಣನು ಬಂದು ಆಕೆಯನ್ನು ಕೆಣಕಿ, ಅವಳ ಜುಟ್ಟು ಹಿಡಿದು
ಎಳೆದನು. ಅವಮಾನವನ್ನು ಸಹಿಸದೆ, ಉರಿವ ಬೆಂಕಿಯಲ್ಲಿ ತನ್ನನ್ನು
ಸುಟ್ಟುಕೊಂಡಳು. ರಾವಣನನ್ನು ಕೊಲ್ಲಲೆಂದು ಅಯೋನಿಜೆಯಾಗಿ,
ಭೂಮಿಯಲ್ಲಿ ಸೀತೆಯಾಗಿ ಹುಟ್ಟಿ ಜನಕನ ಮನೆಯಲ್ಲಿ ಬೆಳೆದು ವಿಷ್ಣುವಿನ
ಅವತಾರವಾದ ರಾಮನ ಪತ್ನಿಯಾಗಿ, ರಾಮನ ಕೈಯಲ್ಲಿ ರಾವಣನನ್ನು
ಕೊಲ್ಲಿಸಿದಳು.
೨. ಕುಬೇರನ ಅಣ್ಣ ರಾವಣ (ದಶಗ್ರೀವ ). ಶರವಣ ಪರ್ವತ ರಾವಣನ
ಪುಷ್ಪಕ ವಿಮಾನ ಯಾನಕ್ಕೆ ಭಂಗ ಉಂಟುಮಾಡಲು, ಕೊಪಾಂಧನಾದ
ರಾವಣನು ತನ್ನ ಕೈಗಳನ್ನು ಪರ್ವತದ ಕೆಳಗೆ ತೂರಿಸಿ ಪರ್ವತವನ್ನೆತ್ತಲು
ಅದು ಕದಲಿತು. ಶಿವನು ನಸುಗೋಪದಿಂದ, ತನ್ನ ಉಂಗುಷ್ಠದಿಂದ
ಪರ್ವತವನ್ನೊತ್ತಿದನು. ರಾವಣನ ಕೈಗಳು ಜಜ್ಜಿಹೋಗಿ ನೋವಿನಿಂದ
ಆಕ್ರಂದನ ಮಾಡುತ್ತಾ ಶಿವನನ್ನು ಸ್ತುತಿಸಲು, ಶಂಕರನ ಕೋಪವು
ತಣಿಯಿತು. ಕೈಗಳನ್ನು ಜಜ್ಜಿದಾಗ ಆತ ಮಾಡಿದ ದಾರುಣವಾದ
ಶಬ್ದದಿಂದ ಅವನ ‘ರಾವಣ’ ನಾಮ ಸಾರ್ಥಕವಾಗಿ ಚಿರಕಾಲ ಅದೇ ಹೆಸರು
ನೆಲಸಿತು. ಶಿವನು ಚಂದ್ರಹಾಸವೆಂಬ ಖಡ್ಗವನ್ನು ರಾವಣನಿಗಿತ್ತು
”ಯಾವದಿನ ಇದಕ್ಕೆ ಅವಮಾನವಾಗುವುದೋ ಅದೇ ದಿನ ನಿನ್ನನ್ನು
ಬಿಟ್ಟು ತಿರುಗಿ ನನ್ನ ಬಳಿಗೆಬಂದು ಬಿಡುತ್ತದೆ”ಎಂದು ಎಚ್ಚರಿಸಿದನು.
ಮೂಲ :ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s