Uncategorized

ಕವಿತಾ ಸಂಗ್ರಹ.

೧. ಸೊನ್ನೆ ನಿನಗೆ ಬೆಲೆಯೆ ಇಲ್ಲ ಎಂದು ಬರಿದೆ ಬೈವರೆಲ್ಲ ।
ನಿನ್ನ ಹಿಂದೆ ‘ಒಂದು ‘ ನಿಲ್ಲಲು ನಿನಗೆ ಬೆಲೆಯು ಬರುವುದು ।
‘ಒಂದು’ ಬೆಂಬಲವಿರೆ ಸೊನ್ನೆ ಕೋಟಿಗಳನು ತರುವುದು ।
-ಕುವೆಂಪು.
೨. ಬಡವನಾರ್ ।ಮಡದಿಯೊಲವಿನ ಸವಿಯ ಅರಿಯದವ ಬಡವ।
ಹುಡುಗರಾಟದಿ ಬೆರೆತು ನಗಲರಿಯದವ ಬಡವ।
ಉಡುರಾಜನೋಲಗದಿ ಕುಳಿತು ಮೈ ಮರೆಯದವ ಬಡವ।
ಬಡ ಮನಸೇ ಬಡತನವೋ ಮರುಳು ಮುನಿಯ।
–ಡಿ. ವಿ. ಜಿ.
೩.ಮರದೊಳು ಮಂದಾಗ್ನಿಯ ಉರಿಯದಂತಿರಿಸಿದೆ।
ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ।
ಶರಧಿಯ ಮೇಲೆ ಧರೆಯ ಕರಗದಂತಿರಿಸಿದೆ।
ಶರೀರದೊಳಗಾತ್ಮವನು ಆರೂ ಅರಿಯದಂತಿರಿಸಿದೆ।
ನೀ ಬೆರೆಸಿದ ಬೆರಕೆಗೆ ಬೆರಗಾದೆನಯ್ಯಾ ರಾಮನಾಥ ।
೪. ಜಳಕವಾದರೆ ಸಾಕೆ, ಶುಭ್ರತೆಯ ಪಡೆಯಲ್ಕೆ ?
ಬಳಿದುಕೊಂಡರೆ ಗಂಧ, ಚಾರಿತ್ರ್ಯ ಘಮವೆ ?
ಮಿಳಿತವಾದರೆ ಸ್ವಾರ್ಥ ಜಗವೆಲ್ಲ ಕೊಳೆಗುಂಡಿ।
ಕಳೆ ಮನದ ಕೊಳೆ ನೀನು ಮಂಕುದಿಣ್ಣೆ ।
೫. ಒಡಲ ದಂಡಿಸಿ ಮುಕ್ತಿ ಪಡೆವೆನೆಂಬುವ ಹೆಡ್ಡ ।
ಬಡಿಗೆಯಲಿ ಹುತ್ತ ಹೊಡೆಯಲಡಗಿಹ ಸರ್ಪ ।
ಮಡಿಯುವುದೆ ಹೇಳು ?-ಸರ್ವಜ್ಞ.
೬. ಕರಿ ಘನ ಅಂಕುಶ ಕಿರಿದೆನ್ನಬಹುದೆ ?ಬಾರದಯ್ಯ।
ಗಿರಿ ಘನ, ವಜ್ರ ಕಿರಿದೆನ್ನಬಹುದೆ ?ಬಾರದಯ್ಯ ।
ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ ?ಬಾರದಯ್ಯ।
ಮರಹು (=ಅಜ್ಞಾನ )ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ?
ಬಾರದಯ್ಯಾ ಕೂಡಲ ಸಂಗಮದೇವಾ–ಬಸವಣ್ಣ.
೭. ಏರುವನು ರವಿ ಏರುವನು ।
ಬಾನೊಳು ಸಣ್ಣಗೆ ತೋರುವನು ।
ಏರಿದವನು ಚಿಕ್ಕವನಿರಬೇಕಲೆ ।
ಎಂಬಾ ಮಾತನು ಸಾರುವನು ।
–ಪಂಜೆ ಮಂಗೇಶ ರಾಯರು.
೮. ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಂ
ಇಹ ಸಂಸಾರೇ ಬಲು ದುಸ್ಸಾರೆ
ಕೃಪಯಾ ಪಾರೇ ಪಾಹಿ ಮುರಾರೆ
-ಆದಿ ಶಂಕರಾಚಾರ್ಯ.
೯. ಮೃಗರಾಜ ಪಟ್ಟವನು ಗಾರ್ದಭಕೆ ಕಟ್ಟುವರೆ ?
ಕಾಕ ಪಡೆಯಲು ಬಹುದೆ ಕೋಗಿಲೆಯ ಪಟ್ಟ ?
ಸೊಕ್ಕು ಠಕ್ಕಲಿ ಮೆರೆವ ಮನುಜ ಪೀಠವನೇರೆ,
ತುಕ್ಕು ಕಬ್ಬಿಣ ಸಮವು ಮಂಕುದಿಣ್ಣೆ.
೧೦. ಬಡಿಗೆಯೊಂದಿಗೆ ಬಡಿದಾಡಬಾರದು ಗಡಿಗೆ
ಹೊಲಸು ಗುಂಡಿಗೆ ಇರುವವರೊಂದಿಗೆ ಬೆಳೆಸಬಾರದು ಸಲುಗೆ .
–ಶ್ರೀ ಕೃಷ್ಣಯ್ಯ ಅನಂತಪುರ.
೧೧.ಎಲೆಗಳು ನೂರಾರು ಭಾವದ ಎಳೆಗಳು ನೂರಾರು
ಎಲೆಗಳ ಬಣ್ಣ ಒಂದೇ ಹಸಿರು
ಜಾತಿ, ಭಾಷೆ,ಪಂಥ ಹಲವು
ಅವುಗಳ ಹಿಂದೆ ಮಾತ್ರ ಒಂದೇ ಒಲವು.
-H. S . ವೆಂಕಟೇಶ ಮೂರ್ತಿ.
೧೨. ನಾವು ಆಡುವ ಮಾತು ಹೀಗಿರಲಿ ಗೆಳೆಯ
ಮೃದು ವಚನ ಮೂಲೋಕ ಗೆಲ್ಲುವುದು ತಿಳಿಯ
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಘಳಿಗೆಯ ಬಾಳು ಮಗಮಗಿಸುತಿರಲಿ
-ಚೆನ್ನ ವೀರ ಕಣವಿ.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s