Uncategorized

ಸ್ಥಳ ಪುರಾಣ.

ಧಾರವಾಡ –ಕನ್ನಡ ನಾಡಿನ ಸಾಂಸ್ಕೃತಿಕ ರಾಜಧಾನಿ. ವರಕವಿ ದ. ರಾ. ಬೇಂದ್ರೆ ,
ವಿ. ಕೃ. ಗೋಕಾಕ, ಶಿಶುನಾಳ ಶರೀಫ, ಗಂಗೂ ಬಾಯಿ ಹಾನಗಲ್, ಸವಾಯಿ ಗಂಧರ್ವ,
ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು,ಚನ್ನವೀರ ಕಣವಿ,ಕೀರ್ತಿನಾಥ
ಕುರ್ತುಕೋಟಿ, ಜಡ ಭರತ,ಪಾಟೀಲ ಪುಟ್ಟಪ್ಪ,ರಾ. ಯ. ಧಾರಾವಾಡಕರ ಮೊದಲಾದ
ದಿಗ್ಗಜರು ಇಲ್ಲಿನವರು.
ಹಾವೇರಿ –ವಿಶ್ವ ವಿಖ್ಯಾತ ಬ್ಯಾಡಗಿ ಮೆಣಸಿನಕಾಯಿ ಘಾಟಿನ ಜಿಲ್ಲೆ ಹಾವೇರಿ. ಸಂತ
ಕನಕದಾಸ, ತ್ರಿಪದಿ ಕವಿ ಸರ್ವಜ್ಞ,ಕಾದಂಬರಿ ಪಿತಾಮಹ ಗಳಗನಾಥ, ಗಾನಯೋಗಿ
ಪಂಚಾಕ್ಷರಿ ಮತ್ತು ಪುಟ್ಟರಾಜ ಗವಾಯಿ, ಡಾ. ವಿ. ಕೃ. ಗೋಕಾಕ,ಕುಮಾರವ್ಯಾಸ ರಂತಹ
ಮಹಾ ಪುರುಷರ ನಾಡು. ಈ ಕ್ಷೇತ್ರದಲ್ಲಿ ಗದುಗಿನ ವೀರನಾರಾಯಣ ದೇವಾಲಯ,
ಕಾಗಿನೆಲೆ ಸೇರಿದಂತೆ ಅನೇಕ ಐತಿಹಾಸಿಕ ಸ್ಥಳಗಳಿವೆ.
ಬಳ್ಳಾರಿ–ಹಂಪಿಯಂಥ ಪ್ರವಾಸಿತಾಣ, ವಾಸ್ತು ಶಿಲ್ಪ ಜಗದ್ವಿಖ್ಯಾತ ಬಳ್ಳಾರಿಯನ್ನು
Steel City ಎಂದು ಕರೆಯಲಾಗುತ್ತದೆ. ಗುಣಮಟ್ಟದ ಕಬ್ಬಿಣದ ಅದಿರನ್ನು ಹೊಂದಿದ್ದು
ಗಣಿಗಾರಿಕೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ.
ತೀರ್ಥಹಳ್ಳಿ –ದಕ್ಷಿಣ ಗಂಗೆ ಎಂದು ಹೆಸರುಪಡೆದ ತುಂಗಾನದಿ ಹರಿಯುತ್ತದೆ.
ರಾಮೇಶ್ವರ ದೇವಾಲಯವಿದೆ. ಪ್ರಸಿದ್ಧ ”ರಾಮತೀರ್ಥ”ವಿದೆ.
ಕಲಹರಿ -ಕಲಿಯುಗದಲ್ಲಿ ಹರಿಯು ಅವತರಿಸುವ ಸ್ಥಳ. ಶ್ರೀರಂಗ ಕ್ಷೇತ್ರಕ್ಕೆ ಒಂದು
ಗಾವುದ ದೂರದಲ್ಲಿದೆ.
ಎತ್ತಿನ ಭುಜ ಶಿಖರ -ಧರ್ಮಸ್ಥಳದ ಶಿಶಿಲ ಗ್ರಾಮದ ಬಳಿ ಈ ಪರ್ವತವಿದೆ.
ಭಾರತದ ದಕ್ಷಿಣ ತುದಿಗೆ ಇಂದಿರಾ Point ಎಂದು ಹೆಸರಿಡಲಾಗಿದೆ.
Gateway of India (Mumbai)-ಅರಬ್ಬೀ ಸಮುದ್ರಕ್ಕೆ ಅಭಿಮುಖವಾಗಿರುವ
ಈ ಸ್ಥಳವನ್ನು ಹಿಂದೆ ಬೋರಿ ಬಂದರ್ ಎಂದು ಕರೆಯಲಾಗುತ್ತಿತ್ತು.
ಫಳ್ನೀರ್-ಈ ಪರಿಸರ ತಗ್ಗು ಪ್ರದೇಶವನ್ನೊಳಗೊಂಡಿದ್ದು, ಒಂದಿಷ್ಟು ಮಳೆ
ಬಂದರೂ ಭಾರೀ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿತ್ತು. ಹೀಗಾಗಿ
ತುಳುವಿನಲ್ಲಿ ”ಪರಪುನ ನೀರ್ ” ಎಂಬ ಹೆಸರನ್ನು ಪಡೆಯಿತು. ಕಾಲ ಕ್ರಮೇಣ
”ಪರ ನೀರು”ಎಂದಾಗಿ ಮುಂದೆ ”ಫಳ್ನೀರು” ಎಂದಾಯಿತು.
ಮೂಲ -ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s