Uncategorized

ಪುರಾಣದಲ್ಲಿ ಪ್ರಾಣಿ ಪಕ್ಷಿಗಳ ಪಾತ್ರ.

ರಾಮಾಯಣ ಸೃಷ್ಟಿಸಲು ವಾಲ್ಮೀಕಿಗೆ ಸ್ಪೂರ್ತಿ ಇತ್ತಿದ್ದು
ಬೇಡನ ಬಾಣಕ್ಕೆ ತುತ್ತಾದ ಕ್ರೌ೦ಚ ಪಕ್ಷಿ.
ರಾಮ -ರಾವಣರ ಯುದ್ಧಕ್ಕೆ ಮುಖ್ಯ ಕಾರಣ –ಸೀತೆಯ
ಮುಂದೆ ಸುಳಿದಾಡಿದ ಆ ಬಂಗಾರದ ಜಿಂಕೆ.
ಸೀತಾಪಹರಣ ಸನ್ನಿವೇಶದಲ್ಲಿ ರಾವಣನೊಡನೆ ಹೋರಾಡಿ
ರಾಮನಿಗೆ ಸೀತೆಯ ಬಗ್ಗೆ ಸುದ್ದಿ ಕೊಟ್ಟದ್ದು -ಹದ್ದು ಜಟಾಯು.
ಲಂಕೆಗೆ ಸೇತುವೆ ಕಟ್ಟಲು ರಾಮನಿಗೆ ಸಹಾಯ ಮಾಡಿದ್ದು –
ಕೋತಿ, ಅಳಿಲುಗಳು.
ಲಂಕೆಯ ಅಶೋಕ ವನದಲ್ಲಿ ವಿರಹ ವೇದನೆಯಿಂದ ತವಕ
ಪಡುತ್ತಿದ್ದ ಸೀತೆಗೆ ರಾಮನ ಮುದ್ರೆ ಉಂಗುರ ಕೊಟ್ಟು ಸಮಾಧಾನ
ಪಡಿಸಿದ್ದು ಹನುಮಂತ.
ಲವ -ಕುಶ ಹಾಗೂ ರಾಮನ ಮೊದಲ ಭೇಟಿಗೆ ಕಾರಣ ಅಶ್ವಮೇಧ
ಯಾಗದ ಕುದುರೆ.
ದುಷ್ಯಂತ -ಶಕುಂತಲೆಯರ ಪುನರ್ಮಿಲನಕ್ಕೆ ಕಾರಣ – ಉಂಗುರ
ನುಂಗಿದ ಮೀನು.
ನಳ -ದಮಯಂತಿಯರ ಪ್ರೇಮ ದೂತನಾಗಿ ಅವರನ್ನೊಂದುಗೂಡಿಸಿದ್ದು
–ಹಂಸ.
ಗೌತಮ ಮುನಿಯ ಪತ್ನಿ ಅಹಲ್ಯೆಯ ಮಾನಭಂಗ ಮಾಡಿದ ಇಂದ್ರ
ಓಟ ಕಿತ್ತದ್ದು ಕೋಳಿಯಾಗಿ.
ಶಿಬಿ ಚಕ್ರವರ್ತಿಯ ಸತ್ತ್ವ ಪರೀಕ್ಷೆ ಸಮಯದಲ್ಲಿ ವಿಷ್ಣು ಪಾರಿವಾಳವನ್ನು
ಕಬಳಿಸಲು ಹಾರಿ ಬಂದದ್ದು -ಗಿಡುಗನಾಗಿ.
ಕನಕದಾಸರಿಗೆ ಪರಮಾತ್ಮ ಪ್ರತ್ಯಕ್ಷವಾದದ್ದು ನಾಯಿಯ ರೂಪದಲ್ಲಿ.
ಹಾವಿನ ರೂಪದಲ್ಲಿ.
”ಗಜೇಂದ್ರ ಮೋಕ್ಷ” ದ ಆನೆ,ಮೊಸಳೆ ಗಳನ್ನು ಮರೆಯಲು ಸಾಧ್ಯವೇ ?
ಶ್ರೀಮನ್ನಾರಾಯಣ ಲೋಕ ಕಲ್ಯಾಣಕ್ಕಾಗಿ ಆಮೆಯಾಗಿ, ಹಂದಿಯಾಗಿ,
ಮೀನಾಗಿ ಮತ್ತೇನೇನೋ ಆಗಿ ದಶಾವತಾರ ತಾಳಿದ.
ಸೂರ್ಯ ಏರುವುದು ಕುದುರೆಗಳು ಕಟ್ಟಿದ ರಥವನ್ನು.
ದತ್ತಾತ್ರೇಯನಿರುವುದು ನಾಯಿಗಳ ಸಾನ್ನಿಧ್ಯದಲ್ಲಿ.
ಗೋಪಾಲ ಕೃಷ್ಣನಿರುವುದು ಗೋವುಗಳ ಜತೆ.
ಶ್ರೀ ರಂಗನಾಥ ಪವಡಿಸುವುದು ಹಾವಿನ ಮೇಲೆ.
ವಿನಾಯಕನ ವಾಹನ ಇಲಿ. ಸರಸ್ವತಿಯ ಆಸನ ನವಿಲು.
ವಿಷ್ಣುವಿನ ವಾಹನ ಗರುಡ. ಶನಿ ದೇವರ ವಾಹನ ಕಾಗೆ.
ಯಮನ ವಾಹನ ಕೋಣ. ಶಿವನ ಸದಾನುವರ್ತಿ -ವೃಷಭ.
ಮಹಿಷಾಸುರ ಮರ್ದಿನಿಯ ಪೀಠ -ಸಿಂಹ.
ನಮ್ಮ ರಾಶಿಗಳಿಗೆ ಟಗರು, ಮೊಸಳೆ, ಮೀನು, ಸಿಂಹ,ವೃಷಭ,
ಚೇಳು, ಏಡಿ ಮುಂತಾದ ಪ್ರಾಣಿಗಳ ಹೆಸರನ್ನೇ ಜ್ಯೋತಿಷ್ಯ
ಶಾಸ್ತ್ರಜ್ಞರು ಆರಿಸಿದ್ದಾರೆ.
ಪುರಾಣಗಳಲ್ಲಿ ಕತ್ತೆಯ ಬಗ್ಗೆ ಅಭಿಮಾನವಿಲ್ಲ ಕವಿಗಳೂ
ಕಣ್ಣೆತ್ತಿ ನೋಡಲಿಲ್ಲ ಜ್ಯೋತಿಷ್ಯದಲ್ಲೂ ಇದರ ಸೊಲ್ಲಿಲ್ಲ.
ಈ ಮೂಕ ಪ್ರಾಣಿಯ ಬಗ್ಗೆ ಬೆಳೆದಿರುವ ತಾತ್ಸಾರ ಅಸಾಧಾರಣ.
ಮೂಲ:ಸಂಗ್ರಹ.

2 thoughts on “ಪುರಾಣದಲ್ಲಿ ಪ್ರಾಣಿ ಪಕ್ಷಿಗಳ ಪಾತ್ರ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s