Uncategorized

ನುಡಿಮುತ್ತುಗಳು.

೧. ಕಣ್ಣೀರು ಹಾಕಿ ಅಳ್ತೀವಲ್ಲ,ಅದು ನೋವಲ್ಲ. ನಗುಮುಖ ಹಾಕಿ
ಕಣ್ಣೀರು ತಡೀತಿವಲ್ಲಾ , ಅದು ನಿಜವಾದ ನೋವು.
೨. ಮನಸ್ಸೆಂಬುದು ಖಾಲಿ ಕೊಡವಿದ್ದಂತೆ. ಅದರಲ್ಲಿ ಏನು ತುಂಬುತ್ತೀರಿ?
ಕೆಸರು ನೀರನ್ನೋ ?ಸ್ವಚ್ಛ ನೀರನ್ನೋ ನಿಮಗೇ ಬಿಟ್ಟದ್ದು.
೩. ಪೂರ್ತಿ ಸಿಹಿಯಾಗಬೇಡ. ಪ್ರಪಂಚ ನಿನ್ನನ್ನು ನುಂಗಿ ಬಿಡುತ್ತದೆ. ಹಾಗಂತ,
ಕಹಿ ಬೇವಾಗಬೇಡ;ಪ್ರಪಂಚ ನಿನ್ನನ್ನು ಉಗಿದು ಬಿಡುತ್ತದೆ.
೪. ತಂದೆ ಇರುವವರೆಗೂ ಬೆವರಿನ ಬೆಲೆ ತಿಳಿಯುವುದಿಲ್ಲ.
ತಾಯಿ ಇರುವವರೆಗೂ ಹಸಿವಿನ ಕಷ್ಟ ತಿಳಿಯುವುದಿಲ್ಲ.
೫, ಭರತನಂತಹ ಸಹೋದರನಿರಬೇಕು. ಶ್ರವಣ ಕುಮಾರನಂತಹ ಮಗನಿರಬೇಕು.
೬. ಕೆಲವು ಸಂಬಂಧಗಳು ಮುರಿದುಹೋಗಲು ಮುಖ್ಯವಾದ
ಕಾರಣಗಳೆಂದರೆ -ಒಬ್ಬರು ಸರಿಯಾಗಿ ಮಾತನಾಡದಿರುವುದು,
ಇನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು.
೭. ದುಡಿಯೋನಿಗೆ ಗೊತ್ತು ಮಣ್ಣಿನ ಬೆಲೆ. ಹೆತ್ತೋರಿಗೆ ಗೊತ್ತು ಹೆಣ್ಣಿನ ಬೆಲೆ.
ಬಡವರಿಗೆ ಗೊತ್ತು ದುಡ್ಡಿನ ಬೆಲೆ. ಈ ಮೂರು ತಿಳಿದವರಿಗೆ ಗೊತ್ತು ಜೀವನದ ಬೆಲೆ.
೮. ಒಳ್ಳೆಯವರಿಗೆ ಕೆಟ್ಟದ್ದು ಬಯಸಿದರೂ ಅವರಿಗೆ ಒಳ್ಳೆಯದೇ ಆಗುತ್ತದೆ.
೯. ಮಾತು ಸಂಬಂಧಗಳನ್ನು ಸಂಪಾದಿಸಿದರೆ, ಮೌನ ದ್ವೇಷವನ್ನು ಕರಗಿಸುತ್ತದೆ.
೧೦. ನಾವು ನಂಬಿದವರೇ ಜಾಸ್ತಿ ಮೋಸ ಮಾಡೋದು. ಯಾಕೆಂದರೆ ನಮಗೆ
ಯಾರ ಮೇಲೆ ನಂಬಿಕೆ ಇರುವುದಿಲ್ಲವೋ, ಅವರು ನಮಗೆ ಅಮೃತವನ್ನೇ ಕೊಟ್ಟರೂ
ನಾವು ಅನುಮಾನಿಸುತ್ತೇವೆ. ಅದೇ, ನಮಗೆ ಯಾರ ಮೇಲೆ ನಂಬಿಕೆ ಇದೆಯೋ
ಅವರು ನಮಗೆ ವಿಷವನ್ನೇ ಕೊಟ್ಟರೂ ಕಣ್ಣು ಮುಚ್ಚಿಕೊಂಡು ಕುಡಿಯುತ್ತೇವೆ.
ಇದೇ ಜೀವನದ ಕಹಿ ಸತ್ಯ.
೧೧. ಆರೋಗ್ಯವಾಗಿದ್ದಾಗ ಆಸ್ತಿ, ಅಂತಸ್ತು, ಹಣ ಬೇಕು ಎನ್ನುವ ನಾವು ಅನಾರೋಗ್ಯ
ದಲ್ಲಿದ್ದಾಗ ”ಆರೋಗ್ಯವಾದರೆ ಸಾಕು ದೇವರೇ ” ಎಂದು ಬೇಡುತ್ತೇವೆ. ಇಷ್ಟೇ ಜೀವನ.
೧೨. ಸಂತೋಷದಲ್ಲಿರುವವನಿಗೆ ಹಾಡಿನ ಸಂಗೀತ ಇಷ್ಟವಾಗಬಹುದು. ಆದರೆ
ಅದರಲ್ಲಿರುವ ಸಾಹಿತ್ಯ ಅರ್ಥವಾಗುವುದು ನೋವಿನಲ್ಲಿರುವವನಿಗೆ ಮಾತ್ರ.
೧೩. ಪ್ರತಿ ಕಣ್ಣೀರ ಹಿಂದೆ ಒಂದು ಕಥೆಯಿದೆ.ಸಂತೋಷವಾದಾಗ ಕಣ್ಣೀರು ಬರುತ್ತೆ.
ದುಃಖದಿಂದ ಕಣ್ಣೀರು ಬರುತ್ತೆ. ಕಣ್ಣು ಯಾವುದನ್ನೂ ಮುಚ್ಚಿಡುವುದಿಲ್ಲ.
ಅದು ಸಾಗರದ ಅಲೆಯಂತೆ. ಕಲ್ಮಶಗಳನ್ನೆಲ್ಲ ಹೊರ ಹಾಕುತ್ತಲೇ ಇರುತ್ತೆ.
ಆದರೆ ಮನಸ್ಸು … ಎಲ್ಲವನ್ನೂ ತನ್ನಲ್ಲಿ ಮುಚ್ಚಿಟ್ಟು ಕೊರಗುತ್ತ ಇರುತ್ತೆ.
೧೪. ಮಾತಿನ ವರ್ತನೆ ಹೇಳುತ್ತದೆ ಮನುಷ್ಯ ಹೇಗೆ ಅಂತ…
ವಾದಿಸುವ ವರ್ತನೆ ಹೇಳುತ್ತದೆ ಅವನ ಜ್ಞಾನ ಎಷ್ಟು ಅಂತ…
ಅಹಂಕಾರ ಹೇಳುತ್ತದೆ ಅವನ ಬಳಿ ಇರುವ ಧನ ಎಷ್ಟು ಅಂತ….
ಸಂಸ್ಕಾರ ಹೇಳುತ್ತದೆ ಅವನ ಮನೆತನ ಹೇಗಿದೆ ಅಂತ…
೧೫. ಯಾರ ಎದುರು ಮನಸ್ಫೂರ್ತಿ ನಗ್ತೀರೋ, ಅವರ ಜೊತೆ ಇಡೀ ದಿನ ಕಳೆಯ
ಬಹುದು. ಹಾಗೆಯೇ ಯಾರ ಜೊತೆ ಮನಸ್ಸು ಬಿಚ್ಚಿ ಅಳ್ತೀರೋ ಅವರ
ಜೊತೆ ಇಡೀ ಜೀವನವನ್ನೇ ಕಳೆಯಬಹುದು.
ಮೂಲ:Facebook Collection.

8 thoughts on “ನುಡಿಮುತ್ತುಗಳು.

      1. Dear Sanath, Earlier Bunts were mainly warriors and rulers e.i from Alupas and Tuluva dynasty.
        Since Bunts are also a warrior community and also practice snake worship, many people say, Bunts could be descendants
        of Nagavamshi kshatriyas.
        Nowadays some subdivisions of Bunts follow Brahmin customs, they are called Pariwar Bunts.
        Many of the present day Hindu Bunts were earlier thought to be Jains or Buddhists. So actually there is no exact
        caste associated with Bunt community.

  1. Thanks, Vani for the reply. What category do non-brahmin pariwar bunts fall under with regards to the Karnataka State/Central List?

    1. Dear Sanath, Pariwar Bunts in Karavali generally maintain their identity
      independent of the main bunts community and matrimonial relationships are
      restricted with other divisions.As per central governments OBC list Bunts
      community is not OBC whereas in State of Karnataka it is OBC.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s