Uncategorized

ನಿಮಗೆ ಗೊತ್ತೇ ?

೧. ಜಾಂಬವಂತನಿಗೆ ಸರ್ಜರಿ ನಡೆಸಿ ತಾರುಣ್ಯವನ್ನು ಕರುಣಿಸಿದ
ಶ್ರೀ ಕೃಷ್ಣ ಪರಮಾತ್ಮ ಮೊದಲ ವೈದ್ಯ ಹಾಗೂ ಸರ್ಜನ್ ಆಗಿದ್ದಾನೆ.
-ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು.
೨. ಕ್ಷಯರೋಗಿಗಳು ನಿಯಮಿತವಾಗಿ ಒಣ ದ್ರಾಕ್ಷಿಯನ್ನು ತಿನ್ನುವುದರಿಂದ
ರಕ್ತ ಸಂಚಾರ ಸರಾಗವಾಗಿ ಆಗುತ್ತದೆ.
೩. ಅನ್ನ, ಆಸರೆ,ಅರಿವೆ, ಆರೋಗ್ಯ ಮತ್ತು ಅರಿವು -ಈ ಐದು ”ಅ”ಗಳು
ಮಾನವನ ಜನ್ಮಸಿದ್ಧ ಹಕ್ಕು .
೪. ಪಾಂಡವರು ಶ್ರೀ ಕೃಷ್ಣನ ಪರಮ ಭಕ್ತರಾಗಿದ್ದರೂ ಜೂಜಿನಂತಹ
ದುಶ್ಚಟಗಳಲ್ಲಿ ಸೋಲಾದ್ದರಿಂದ ಯಾವ ದೈವವೂ ದುರ್ವ್ಯಸನಿಗಳಿಗೆ
ನೆರವಾಗದು ಎಂಬ ಪಾಠ ಇಲ್ಲಿ ಗಮನಾರ್ಹ.
೫. ೧ ೨ ೩ ೪ ೫ ೬ ೭ ೯ X ೮=೯ ೮ ೭ ೬ ೫ ೪ ೩ ೨
೬. ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದುದು ಲಂಕಾ ದಹನಕ್ಕೆ ಕಾರಣ
ವಾದಾಗ ಲಂಕೇಶ ರಾವಣ ತನ್ನ ಹತ್ತು ಕಂಠಗಳಲ್ಲಿ ಹಾಡಿದನಂತೆ. ರಾವಣ
ದುಃಖ, ಕೋಪಗಳ ಉದ್ವೇಗದಿಂದ ಹಾಡಿದ ರಾಗವೇ ಲಂಕಾ ದಹನ ಸಾರಂಗ.
(ಸರೋದ್ ಪಂಡಿತ ಅಲಿ ಅಕ್ಬರ್ ಖಾನ್ ರಚಿಸಿ ನುಡಿಸಿದ ರೆಕಾರ್ಡ್ ಇದು )
೭.ಶಿವ ವೃಷಭ ವಾಹನ, ಸರ್ಪಧರ. ಪಾರ್ವತಿ ಸಿಂಹವಾಹಿನಿ.
ಗಣಪತಿಯ ವಾಹನ ಇಲಿ. ಷಣ್ಮುಖ ನವಿಲೇರಿ ಸಂಚರಿಸುವವನು.
ಇದು ಶಿವನ ಸಂಸಾರ. ಇಲ್ಲಿ ಪರಸ್ಪರ ವೈರಿಗಳಾದ
ಪ್ರಾಣಿಗಳ ಸಂಗಮವೇ ಇದೆ. ಆದರೆ ಇಲ್ಲಿ ಕಲಹವಿಲ್ಲ. ಸೌಹಾರ್ದವಿದೆ.
ಏಕೆಂದರೆ ಇಲ್ಲಿ ಎಲ್ಲವನ್ನೂ, ಎಲ್ಲರನ್ನೂ ಸಮಭಾವದಿಂದ ಕಾಣುವ
ಜಗದ ತಂದೆಯಾದ ಮಹಾದೇವನ ಸನ್ನಿಧಾನವಿದೆ. ಅಷ್ಟೇ ಅಲ್ಲ,ಗಣಗಳು ,
ಶಿವಭಕ್ತರು, ಯೋಗಿಗಳು, ಕೈಲಾಸವಾಸಿಗಳು, ಸಾಧಕರು ಶಿವನ ಪರಿವಾರ
ವಾಗಿದ್ದಾರೆ. ಇಲ್ಲಿ ಇಡೀ ಜಗತ್ತಿನ ಕಲ್ಪನೆಯಿದೆ.ಹೀಗೆ ಜನಮಾನಸಕ್ಕೆ
ಸಮೀಪದಲ್ಲಿದ್ದು, ಜನಸಾಮಾನ್ಯರಂತಿರುವ ಶಿವನು ಮನುಕುಲದ
ಪರಮಾಪ್ತನಾಗಿದ್ದಾನೆ.
೮. ಭಾರತೀಯ ಸಂಕೇತ ಶಾಸ್ತ್ರ ಪ್ರಕಾರ ತ್ರಿಭುಜ (Triangle)ಎಂಬುದು
ಮೃತ್ಯು ಸಂಕೇತ.
೯. ಮುಖ ಗಂಟು ಹಾಕಿಕೊಳ್ಳಲು ಬೇಕಾಗುವಷ್ಟು ಸ್ನಾಯುಗಳು ಮುಖ
ಅರಳಿಸಲು ಬೇಕಾಗುವುದಿಲ್ಲವಂತೆ.
೧೦. ತಮಿಳ್ನಾಡಿನ ವೆಲ್ಲೂರು ಸಮೀಪ ಶ್ರೀಪುರಂ ಎಂಬಲ್ಲಿ ಸುಮಾರು
೧೫,೦೦೦ KG ಬಂಗಾರದಿಂದ ನಿರ್ಮಿಸಲಾದ ಸ್ವರ್ಣ ಮಂದಿರವಿದೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s