Uncategorized

ಸ್ಥಳ ಪುರಾಣ.

ಧಾರವಾಡ --ಕನ್ನಡ ನಾಡಿನ ಸಾಂಸ್ಕೃತಿಕ ರಾಜಧಾನಿ. ವರಕವಿ ದ. ರಾ. ಬೇಂದ್ರೆ , ವಿ. ಕೃ. ಗೋಕಾಕ, ಶಿಶುನಾಳ ಶರೀಫ, ಗಂಗೂ ಬಾಯಿ ಹಾನಗಲ್, ಸವಾಯಿ ಗಂಧರ್ವ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು,ಚನ್ನವೀರ ಕಣವಿ,ಕೀರ್ತಿನಾಥ ಕುರ್ತುಕೋಟಿ, ಜಡ ಭರತ,ಪಾಟೀಲ ಪುಟ್ಟಪ್ಪ,ರಾ. ಯ. ಧಾರಾವಾಡಕರ ಮೊದಲಾದ ದಿಗ್ಗಜರು ಇಲ್ಲಿನವರು. ಹಾವೇರಿ --ವಿಶ್ವ ವಿಖ್ಯಾತ ಬ್ಯಾಡಗಿ ಮೆಣಸಿನಕಾಯಿ ಘಾಟಿನ ಜಿಲ್ಲೆ ಹಾವೇರಿ. ಸಂತ ಕನಕದಾಸ, ತ್ರಿಪದಿ ಕವಿ ಸರ್ವಜ್ಞ,ಕಾದಂಬರಿ ಪಿತಾಮಹ ಗಳಗನಾಥ, ಗಾನಯೋಗಿ ಪಂಚಾಕ್ಷರಿ ಮತ್ತು ಪುಟ್ಟರಾಜ ಗವಾಯಿ, ಡಾ.… Continue reading ಸ್ಥಳ ಪುರಾಣ.

Advertisements
Uncategorized

ಪುರಾಣದಲ್ಲಿ ಪ್ರಾಣಿ ಪಕ್ಷಿಗಳ ಪಾತ್ರ.

ರಾಮಾಯಣ ಸೃಷ್ಟಿಸಲು ವಾಲ್ಮೀಕಿಗೆ ಸ್ಪೂರ್ತಿ ಇತ್ತಿದ್ದು ಬೇಡನ ಬಾಣಕ್ಕೆ ತುತ್ತಾದ ಕ್ರೌ೦ಚ ಪಕ್ಷಿ. ರಾಮ -ರಾವಣರ ಯುದ್ಧಕ್ಕೆ ಮುಖ್ಯ ಕಾರಣ --ಸೀತೆಯ ಮುಂದೆ ಸುಳಿದಾಡಿದ ಆ ಬಂಗಾರದ ಜಿಂಕೆ. ಸೀತಾಪಹರಣ ಸನ್ನಿವೇಶದಲ್ಲಿ ರಾವಣನೊಡನೆ ಹೋರಾಡಿ ರಾಮನಿಗೆ ಸೀತೆಯ ಬಗ್ಗೆ ಸುದ್ದಿ ಕೊಟ್ಟದ್ದು -ಹದ್ದು ಜಟಾಯು. ಲಂಕೆಗೆ ಸೇತುವೆ ಕಟ್ಟಲು ರಾಮನಿಗೆ ಸಹಾಯ ಮಾಡಿದ್ದು - ಕೋತಿ, ಅಳಿಲುಗಳು. ಲಂಕೆಯ ಅಶೋಕ ವನದಲ್ಲಿ ವಿರಹ ವೇದನೆಯಿಂದ ತವಕ ಪಡುತ್ತಿದ್ದ ಸೀತೆಗೆ ರಾಮನ ಮುದ್ರೆ ಉಂಗುರ ಕೊಟ್ಟು ಸಮಾಧಾನ ಪಡಿಸಿದ್ದು… Continue reading ಪುರಾಣದಲ್ಲಿ ಪ್ರಾಣಿ ಪಕ್ಷಿಗಳ ಪಾತ್ರ.

Uncategorized

ಕನ್ನಡ ಸೌರಭ.

ನಗೆ ಹನಿ. ೧. ಗುರುವೇ ಶ್ರೇಷ್ಠ. ಶಾಲೆಯಲ್ಲಿ ತಾಯಿ ಹೆಚ್ಚೋ ಗುರು ಹೆಚ್ಚೋ ಎಂಬ ಬಗ್ಗೆ ಚರ್ಚೆಯಾಯಿತು. ವಿದ್ಯಾರ್ಥಿಯೊಬ್ಬ ಹೇಳಿದ -''ತಾಯಿಗಿಂತ ಗುರುವೇ ದೊಡ್ಡವರು. ಏಕೆಂದರೆ ತಾಯಿಗೆ ನನ್ನನ್ನು ಮಲಗಿಸಲು ೨೦ ನಿಮಿಷ ಜೋಗುಳ ಹಾಡ ಬೇಕಾಗುತ್ತದೆ. ಆದರೆ ಮೇಷ್ಟ್ರು ೨೦ ನಿಮಿಷ ಪಾಠ ಮಾಡಿದರೆ ಸಾಕು. ಕ್ಲಾಸಿನ ಎಲ್ಲಾ ಮಕ್ಕಳು ಮಲಗುತ್ತಾರೆ. ೨.ಪ್ರ : ಹೆಂಗಸರ ಅಳುವಿಗೂ ಗಂಡಸರ ಅಳುವಿಗೂ ವ್ಯತ್ಯಾಸವೇನು ? ಉ:ಗಂಡಸರ ಅಳುವಿಗೆ ಹೆಂಗಸರೇ ಕಾರಣ. ಹೆಂಗಸರಿಗೆ ಕಾರಣ ಬೇಕಿಲ್ಲ. ನಿಮಗೆ ಗೊತ್ತೇ… Continue reading ಕನ್ನಡ ಸೌರಭ.