Uncategorized

ಸ್ಥಳನಾಮಗಳು.

೧೬-೧೮ನೇ ಶತಮಾನದಲ್ಲಿ ಜನರು ಒಂದು ದೇಶದಿಂದ
ಇನ್ನೊಂದು ದೇಶಕ್ಕೆ ಬಹಳ ಸಂಖ್ಯೆಯಲ್ಲಿ ಹೋಗಿ ನೆಲಸುತ್ತಿದ್ದರು.
ಹೀಗೆ ಹೋದವರು ತಮ್ಮ ತಾಯ್ನಾಡಿನ ನೆನಪಿಗಾಗಿ ತಾವು
ನೆಲೆಸಿದ ಹೊಸ ಸ್ಥಳಕ್ಕೆ ಅಲ್ಲಿನ (ತಾಯ್ನಾಡಿನ) ಒಂದು ಸ್ಥಳದ
ಹೆಸರನ್ನಿಡುತ್ತಿದ್ದರು. ಈ ರೀತಿ ಸ್ಥಳನಾಮಗಳ ವರ್ಗಾವಣೆ
ನಡೆಯಿತು. ಈ ಸ್ಥಳ ನಾಮಗಳ ಅಧ್ಯಯನ ಕುತೂಹಲಕರವಾದುದು.
Australia ದಲ್ಲಿ ೨ ಮಂಗಳೂರು ಗಳಿವೆ. ಒಂದು ಉಳ್ಳಾಲವೂ
ಇದೆ. ಒಂದು ಮಂಗಳೂರು Victoria ರಾಜ್ಯದಲ್ಲಿದೆ ಎರಡನೇ ಮಂಗಳೂರು
Queens Land ರಾಜ್ಯದಲ್ಲಿದೆ. ಈ ಮಂಗಳೂರು Brisbane ನಿಂದ ಸುಮಾರು
೫೦೦ ಮೈಲು ಗಳಷ್ಟು ಪೂರ್ವಕ್ಕಿದೆ. ಇದರ ಬಳಿ ಇರುವ ಪ್ರಮುಖ ಪಟ್ಟಣ
Charlesville. ಅದರ ಹತ್ತಿರದಲ್ಲಿ ಉಳ್ಳಾಲವೂ ಇದೆ. ಆದರೆ ಈ ಉಳ್ಳಾಲವನ್ನು
Wallal ಎಂದು ಬರೆಯುತ್ತಾರೆ. ಪ್ರಸಿದ್ಧ Darling ನದಿಯ ಉಪನದಿ Warrego
ನದಿಯ ದಡದಲ್ಲಿ ಈ ಎರಡೂ ಹಳ್ಳಿಗಳಿವೆ. ಆಸ್ಟ್ರೇಲಿಯಾ ದ ೨ ಮಂಗಳೂರುಗಳೂ
ಬಹಳ ಚಿಕ್ಕ ಹಳ್ಳಿಗಳು.
ಭಾರತದಲ್ಲಿ ನಮ್ಮ ಮಂಗಳೂರನ್ನು ಸೇರಿಸಿ ಮೂರು ಮಂಗಳೂರುಗಳಿವೆ.
ಒಂದು ಮಂಗಳೂರು ರಾಯಚೂರು ಜಿಲ್ಲೆಯ ಯಲಬುರ್ಗ ತಾಲೂಕಿನಲ್ಲಿದೆ.
ಯಲಬುರ್ಗ ಮತ್ತು ಕೊಪ್ಪಳ ಎಂಬ ಸ್ಥಳಗಳ ನಡುವೆ ಇದೆ. ಮೂರನೇ
ಮಂಗಳೂರು ರೂರ್ಕಿಯಿಂದ(ಉತ್ತರ ಪ್ರದೇಶ)ಸುಮಾರು ಹತ್ತು ಮೈಲಿ
ದಕ್ಸಿಣಕ್ಕಿದೆ. ಈ ಸ್ಥಳ ಹಿಂದಿನ ಅಹಿಚ್ಛತ್ರ ವಾಗಿತ್ತು.
ಆಂಧ್ರ ಪ್ರದೇಶದಲ್ಲೊಂದು
ಹಾಗೂ ಶ್ರೀ ಲಂಕಾದ ಜಾಫ್ನಾದ ಬಳಿಯೊಂದು ಹೀಗೆ ಎರಡು ಪುತ್ತೂರು ಗಳಿವೆ.
New Zealand ನಲ್ಲಿ ”ರಾಮರಾಮಾ” ಎಂಬ ಒಂದು ಪಟ್ಟಣವಿದೆ.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s