Uncategorized

ಕನ್ನಡ ಸೌರಭ.

೧. ಸ್ನೇಹ ಚಿಗುರುವುದಕ್ಕೆ ೪ ಆಯಾಮಗಳು ಬಹಳ ಮುಖ್ಯ.
ಮೊದಲನೆಯದು ಅಂತಃಕರಣ(Affection)
ಎರಡನೆಯದು ಅನುಮತ (Acceptation)
ಮೂರನೆಯದು ಅನುಸರಿಸುವಿಕೆ(Adjustment)
ನಾಲ್ಕನೆಯದು ಮೆಚ್ಚಿಕೆ ( Appreciation)
೨. ಅಕ್ಷಯ ತೃತೀಯ
ಹಾಲಿನ ಸಮುದ್ರದಿಂದ ಲಕ್ಷ್ಮಿ ಹುಟ್ಟಿದ ದಿನ.
ಬಸವಣ್ಣನವರ ಜನ್ಮದಿನ. ದೇವನದಿ ಗಂಗಾನದಿ ಭೂಮಿಗೆ
ಬಂದದ್ದು ಇದೇ ದಿನ. ಪರಶುರಾಮನು(ವಿಷ್ಣುವಿನ ೬ನೇ ಅವತಾರ )
ಭೂಮಿಯಲ್ಲಿ ಅವತರಿಸಿದ ದಿನ.
ಕೃತಯುಗ ಮತ್ತು ತ್ರೇತಾಯುಗ ಪ್ರಾರಂಭವಾದ ದಿನ.
ವೇದವ್ಯಾಸರು ಹೇಳಿದ ಮಹಾಭಾರತದ ಕಥೆಯನ್ನು ಗಣಪತಿ
ಬರೆಯಲು ಆರಂಭಿಸಿದ ದಿನ. ಮಹಾಲಕ್ಷ್ಮಿಯನ್ನು ಭಕ್ತರು
ಶ್ರದ್ಧೆ, ಭಕ್ತಿಯಿಂದ ಪೂಜಿಸುವ ದಿನ.
ಅಷ್ಟ ದಿಕ್ಪಾಲಕರಲ್ಲಿ ಒಬ್ಬನಾದ ಕುಬೇರನು ಲಕ್ಷ್ಮಿ ಕೃಪೆಯನ್ನು
ಪಡೆಯಲು ಇದೇ ದಿನ ಪೂಜೆಮಾಡಿ ಶಾಶ್ವತ ಸಿರಿಸಂಪತ್ತು ಗಳಿಸಿದ.
ಅಕ್ಷಯ ಎಂದರೆ ನಾಶವಾಗದ್ದು, ಅವಿನಾಶಿ. ಪ್ರತಿ ವರ್ಷ ವೈಶಾಖ
ಮಾಸದ ಶುಕ್ಲ ಪಕ್ಷದ ತದಿಗೆ -ಅಕ್ಷಯ ತೃತೀಯ.
ಅಂದು ಗೃಹ ಪ್ರವೇಶ, ಮದುವೆ, ನಾಮಕರಣ,ಹೊಸ ಅಂಗಡಿ , ವ್ಯಾಪಾರ
ಏನೇ ಶುಭಕಾರ್ಯ ಇದ್ದರೂ ವಾರ, ತಿಥಿ, ನಕ್ಷತ್ರ ನೋಡದೆ ಮಾಡಿದರೂ
ಶುಭವಾಗುತ್ತದೆ ಎನ್ನಲಾಗಿದೆ.
೩. ಕಲ್ಲೊಳಗೆ ಹೊನ್ನುಂಟು. ಉದಕದೊಳಗೆ ಅಗ್ನಿಯುಂಟು.
ಹಾಲೊಳಗೆ ತುಪ್ಪ ವುಂಟು. ಅಂತರ್ಯಾಮಿಯಲ್ಲಿ ಶಿವನಿಹನು.
೪. ನೀರು ಪೂಜೆಗೆ ಬಳಸಿದರೆ ತೀರ್ಥ. ಶೌಚಕ್ಕೆ ಬಳಸಿದರೆ ಕೊಳಕು ನೀರು.
(ಜಲವೊಂದೇ ಶೌಚಾಚಮನಕ್ಕೆ)
೫. ಸನ್ಯಾಸವೆನ್ನುವುದು ಪ್ರದರ್ಶನವಲ್ಲ;ನಿದರ್ಶನ.
ಮೂಢ ನಂಬಿಕೆ ದೂರವಾಗಲಿ; ಮೂಲನಂಬಿಕೆ ಬೆಳೆಯಲಿ.
ಸದ್ವಿಚಾರದ ಸಾಧಕರಿಗೆ ಸಹಕರಿಸೋಣ. ಸದಾಶಯಕ್ಕೆ ತಲೆ ಬಾಗೋಣ.

ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s