Uncategorized

ಕನ್ನಡ ಸುಭಾಷಿತಗಳು.

೧. ಪಾತ್ರೆಯಾಕಾರದ ಕುರಿತು ಏಕೆ ಜಗಳ ?
ನಮಗೆ ಬೇಕಾದ್ದು ದಾಹ ಪರಿಹಾರ. -G.S.Shivarudrappa.
೨. ಪೃಕೃತಿ ನಮಗೆ ಎರಡು ಕೈ ಕೊಟ್ಟಿದೆ. ಒಂದು, ನಮ್ಮ ಕೆಲಸಗಳನ್ನು
ಮಾಡುವುದಕ್ಕೆ, ಇನ್ನೊಂದು ಇತರರಿಗೆ ಸಹಾಯ ಮಾಡೋದಕ್ಕೆ.
೩, ಅಳಿಲು ಏರಿದರೆ ಅರಳೀ ಮರ ಅಲ್ಲಾಡೀತೇ?
೪. ಸೃಷ್ಟಿಯೂ, ಸೃಷ್ಟಿಕರ್ತನೂ ಬೇರೆಯಲ್ಲ. ಸೃಷ್ಟಿಕರ್ತನೇ ಸೃಷ್ಟಿಯಾಗಿ
ಪ್ರಕಟವಾಗಿದ್ದಾನೆ. –ಮಾತಾ ಅಮೃತಾನಂದಮಯಿ.
೫.ಜನ್ಮಾಂತರವನ್ನು ನಂಬಿದರೆ ನಾವು ನಡೆಯದ ಜಾಗವಿಲ್ಲ!
ನುಡಿಯದ ಭಾಷೆಯಿಲ್ಲ!ತಿನ್ನದ ವಸ್ತುವಿಲ್ಲ!ಎತ್ತಿದ ಜನುಮಗಳಿಗೆ
ಮಿತಿಯಿಲ್ಲ !
೬. ಚಿಂತ್ಯಾಕೆ ಮಾಡುತ್ತಿದ್ದಿ, ಚಿನ್ಮಯನಿದ್ದಾನೆ.
೭. ಎಲ್ಲ ಬಾಗಿಲು ಮುಚ್ಚಿರುವಾಗ ಬಾಗಿಲು ತೆರೆವವನೇ ಭಗವಂತ.
೮. ಕಂಡೋರ ಮಾತುಗಳಿಗೆ ಕಿವಿಯಾನಿಸುವುದ ಬಿಡು ,
ನಿನ್ನ ಮನದ ಮಾತಿಗೆ ಕಿವಿಯಾಗು.
೯. ನಾವು ಹುಟ್ಟಿರುವುದು ಉಳಿಸಲಿಕ್ಕಾಗಿಯೇ ಹೊರತು ಅಳಿಸಲಿಕ್ಕಲ್ಲ.
ಈ ಕ್ಷಣ ಮಾತ್ರ ನಮ್ಮದು. ನಾಳೆ ಎಂಬುದು ಖಾಲಿಹಾಳೆ.
೧೦. ಭಗವದ್ಗೀತೆ ವಿಷಾದವನ್ನು ಪ್ರಸಾದವನ್ನಾಗಿಸುತ್ತದೆ.
ಜೀವನದಲ್ಲಿ ಬೇಸತ್ತವನನ್ನು ಮತ್ತೆ ಜೀವನ್ಮುಖಿಯಾಗಿಸುತ್ತದೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s