Uncategorized

ನಕ್ಕು ಬಿಡಿ.

೧. Q. ಪಾಠ ಶಾಲೆಗೂ ಪಾಕ ಶಾಲೆಗೂ ಏನು ವ್ಯತ್ಯಾಸ ?
Ans:ತಲೆಗೂ ಹೊಟ್ಟೆಗೂ ಇರುವಷ್ಟೇ. ಎರಡೂ ನಿದ್ರೆಗೆ
ಮುಖ್ಯ ಕಾರಣಗಳು.
೨. Q . ರಾಜಕಾರಣಿಗಳಲ್ಲಿ ಮಾನವಂತರೇ ಕಡಿಮೆಯಾಗುತ್ತಿದ್ದಾರಲ್ಲಾ?
Ans:ಹಾಗೇನಿಲ್ಲ. ಅವರೆಲ್ಲ ”ವರಮಾನವಂತರು”.
೩. Q. ಲಂಚ ಎಂಬುದು ಹಣ್ಣು, ತರಕಾರಿ,ದವಸ, ಧಾನ್ಯ ಇವ್ಯಾವುವೂ
ಅಲ್ಲ. ಆದ್ರೂ ”ಲಂಚ ತಿಂದ” ಅನ್ನೋದ್ಯಾಕೆ ?
Ans:ಮತ್ತೆ ತಲೆನೂ ಅಷ್ಟೇ ;ಆದ್ರೂ ತಿಂತಾರಲ್ಲ?
೪. ರೋಗಿ:ನನಗೆ ದೂರದಲ್ಲಿರುವ ವಸ್ತುಗಳು ಕಾಣಿಸುತ್ತಿಲ್ಲ ಡಾಕ್ಟರ್.
Doctor:ಅಷ್ಟೇನಾ?ದೂರದಲ್ಲಿರುವ ವಸ್ತುಗಳನ್ನು ಹತ್ತಿರ ಹೋಗಿ ನೋಡು.
೫. Q. ವಯಸ್ಸಾದಂತೆ ಅನಿವಾರ್ಯವಾಗಿ ಅನೇಕ ತೊಂದರೆಗಳಾಗುತ್ತವೆ.
ಮುಖ್ಯವಾಗಿ ಮರೆವು. ಅದಕ್ಕೇನು ಮಾಡಬೇಕು?
Ans:ಅಯ್ಯೋ, ಎಷ್ಟೆಲ್ಲಾ ಉಪಾಯಗಳಿವೆ. ಒಂದೂ ನೆನಪಾಗುತ್ತಿಲ್ಲ.
೬. ರಾಮು:ಮೂರ್ಖತನಕ್ಕೆ ಒಂದು ಉದಾಹರಣೆ ಕೊಡು.
ಶ್ಯಾಮು:ಇಬ್ಬರು ಬೋಳು ತಲೆಯವರು ಒಂದು ಹಣಿಗೆ (ಬಾಚಣಿಗೆ)ಗಾಗಿ
ಹೊಡೆದಾಡುವುದು.
೭. ಮೇಷ್ಟ್ರು -ನಿನಗೆ ತುಂಬಾ ಇಷ್ಟವಾದ ೨ Books ಯಾವುದು ?
ಮಂಕ:ಒಂದು Pass Book ಇನ್ನೊಂದು Face Book.
೮. H M T =ಹೆಗಲ ಮೇಲಿನ Towel.
೯. Q . ಆಯುರ್ವೇದದಲ್ಲಿ ”ಅನುಭವಿಸಿ ಆಹಾರ ತಿನ್ನಬೇಕು ”ಅಂತಾರಲ್ಲಾ ಯಾಕೆ?
Ans:ಹಾಗೆ ಮಾಡದಿದ್ದರೆ ತಿಂದ ಮೇಲೆ ಅನುಭವಿಸ ಬೇಕಾಗುತ್ತದೆ.
೧೦. Q :ದುರಾಲೋಚನೆಗೂ ದೂರಾಲೋಚನೆಗೂ ವ್ಯತ್ಯಾಸವೇನು ?
Ans:ಕಳವು ಮಾಡಬೇಕೆಂಬುದು ದುರಾಲೋಚನೆ. ಸಿಕ್ಕಿ ಬೀಳದಂತೆ
ಎಚ್ಚರಿಕೆಯಿಂದ ಮಾಡುವುದು ದೂರಾಲೋಚನೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s