Uncategorized

ಚಿಂತನ.

೧. ನಾವೆಲ್ಲರೂ ಈ ಜಗತ್ತಿಗೆ ”ಜನನ ” ಎಂಬ ಮೂರಕ್ಷರದಿಂದ ಬರುತ್ತೇವೆ.
”ಮರಣ” ಎಂಬ ಮೂರಕ್ಷರದಿಂದ ”ಜಗತ್ತು” ಬಿಟ್ಟು ಹೋಗುತ್ತೇವೆ.
ಇವುಗಳ ನಡುವೆ ”ಜೀವನ” ಎಂಬ ಮೂರಕ್ಷರದಿಂದ ನಾವೆಲ್ಲ ಈ ”ಪ್ರಪಂಚ”
ದಲ್ಲಿ ಜೀವಿಸುತ್ತಿದ್ದೇವೆ. ನಾವು ಹುಟ್ಟಿದಾಗ ”ಉಸಿರು” ಇರುತ್ತದೆಯೇ ಹೊರತು
”ಹೆಸರು” ಇರುವುದಿಲ್ಲ. ”ಅರಿವು” ಉಳ್ಳ ಜನ್ಮದಲ್ಲಿರುವ ಮಾನವನು ತನ್ನ
”ಬದುಕು,” ಸಾರ್ಥಕವಾಗಬೇಕಾದರೆ ”ಸತ್ಕಾರ್ಯ” ಮಾಡಬೇಕು. ಕಾಯವು
ಒಂದು ಕಾರ್ಯವನ್ನು ಮಾಡಲು ಬಂದಿದೆ ಎಂಬುದ್ದನ್ನು ಅರಿತು ”ಸಾಧನೆ”ಯ
ಕಡೆಗೆ ಮುಖ ಮಾಡಬೇಕು. ಕಾಯವು ಒಂದು ದಿನ ಅಳಿದು ಹೋಗುತ್ತದೆ.
ಮಾಡಿದ ಸತ್ಕಾರ್ಯಗಳು ಅಮರವಾಗಿರುತ್ತವೆ. ದೇಹ ಅಳಿದರೂ ಧ್ಯೇಯ
ಉಳಿಯುತ್ತದೆ ಎಂಬುದನ್ನರಿತು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು.
-ಶ್ರೀ ಬಸವ ಪ್ರಭು ಸ್ವಾಮೀಜಿ.
೨. ಹಿಂದೂ ಧರ್ಮ ಬಾಗುತ್ತದೆ. ಆದರೆ ಮುರಿಯುವುದಿಲ್ಲ. ವೈರಿಗಳನ್ನೇ
ತಮ್ಮವರನ್ನಾಗಿ ಮಾಡಿಕೊಳ್ಳುವವರಿಗೆ ಸೋಲೆಲ್ಲಿ?
೩. ನಾವೆಲ್ಲರೂ Tea bag ನಂತೆ. ನಮ್ಮನ್ನು ಬಿಸಿನೀರಿನಲ್ಲಿ ಅದ್ದಿದಾಗಲೇ
ನಮ್ಮ ಶಕ್ತಿ ಹೊರಗೆ ಬರುವುದು.
೪. ತನ್ನ ಸುತ್ತಲೂ ಜನ ಸಾಯುತ್ತಿದ್ದರೂ ತಾನು ಅಮರ ಎಂದುಕೊಳ್ಳುವುದು
ಮನುಷ್ಯ ಸ್ವಭಾವದ ವಿಚಿತ್ರವೆನಿಸುವ ವೈಶಿಷ್ಟ್ಯ.
೫. ಕಥೆಗೆ ಕಾಲಿಲ್ಲವೆಂದರೂ ನಮ್ಮ ತಲೆಗೆ, ಕಲ್ಪನೆಗೆ ಅಗಣಿತ ಪಾದಗಳೂ
ರೆಕ್ಕೆಗಳೂ ಇವೆಯಲ್ಲವೇ ?
೬. ಮೈನಾಕ ಪರ್ವತವು ಚಿರಕಾಲದ ವರೆಗೆ ಸಮುದ್ರದಲ್ಲಿ ಮುಳುಗಿದ್ದರೂ
ಮೃದುತ್ವವನ್ನು ಪಡೆಯದೇ ಕಠಿಣವಾಗಿಯೇ ಇದೆ. ದುಷ್ಟರು ಎಷ್ಟು ಓದಿದರೂ
ಒಳ್ಳೆಯವರಾಗುವುದಿಲ್ಲ. ಸಜ್ಜನರು ಓದದಿದ್ದರೂ ಸದಾ ಒಳ್ಳೆಯವರಾಗಿಯೇ
ಇರುತ್ತಾರೆ.
೭. ಕಲ್ಪನೆಯನ್ನು ಆಧರಿಸಿ ರಚಿಸಲ್ಪಡುವ ಪುರಾಣಗಳು ಸುಳ್ಳಾಗಬಹುದು.
ಆದರೆ ಸಿದ್ಧಾಂತ ಎಂದಿಗೂ ಸುಳ್ಳಾಗುವುದಿಲ್ಲ.
೮. ನಿಷ್ಠೆಯು ನಿಧಿಯಾದರೆ ಚೇಷ್ಟೆಯು ದುರ್ವಿಧಿ. ಸಮೃದ್ಧ ಸಮಾಜದ
ರಚನೆಗೆ ಅಗತ್ಯವಿರುವುದು ಚೇಷ್ಟೆ , ಪ್ರತಿಷ್ಠೆ ಗಳನ್ನು ಕೈಬಿಟ್ಟು ಕಾರ್ಯದಲ್ಲಿ
ನಿಷ್ಠೆ ರೂಢಿಸಿಕೊಂಡವರದ್ದು. ನಿಷ್ಠೆಯು ಆಂತರಿಕ ಸಂಪತ್ತು.
೯. ಸಮುದ್ರದ ನೀರು ತಣಿಸದ ಬಾಯಾರಿಕೆ ಈ ದುರಾಸೆಯೆಂಬ ತಳವಿಲ್ಲದ
ಕಗ್ಗತ್ತಲ ಕೂಪ.
೧೦. ಭಾರತೀಯ ಸಂಸ್ಕೃತಿಯಲ್ಲಿ ಅರ್ಧ ನಾರೀಶ್ವರ ಕಲ್ಪನೆಯಿದೆ.
ಇದರರ್ಥ ಸ್ತ್ರೀ, ಪುರುಷರಿಬ್ಬರೂ ಸಮಾನರು ಎಂದೇ ಆಗಿರುತ್ತದೆ.
ಹಾಗಾಗಿ ಪುರುಷರಲ್ಲಿಯೂ ಸ್ತ್ರೀಗುಣಗಳಿರುತ್ತವೆ ಎಂಬುದನ್ನು ಅದು
ಒತ್ತಿ ಹೇಳುತ್ತದೆ. ಸ್ತ್ರೀ ಪುರುಷರಿಬ್ಬರ ಸಮಾನತೆಯಲ್ಲಿ ಒಳ್ಳೆ ಚಿಂತನೆಯನ್ನು
ಕೊಡುವುದೇ ಈ ಅರ್ಧನಾರೀಶ್ವರ ಕಲ್ಪನೆ. –ಶಾಂತಕ್ಕ, ”ರಾಷ್ಟ್ರ ಸೇವಿಕಾ ಸಮಿತಿ”
ಸಂಚಾಲಕಿ.

2 thoughts on “ಚಿಂತನ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s