Uncategorized

ಕನ್ನಡ ಸುಭಾಷಿತಗಳು.

೧. ಹೆಚ್ಚು -ಕಡಿಮೆಗಳ ಮಿಶ್ರಣವೇ ಜೀವನ. ಹೆಚ್ಚು ಹೊಂದಾಣಿಕೆ,
ಕಡಿಮೆ ಆವಶ್ಯಕತೆಗಳೇ ಸುಖ ಜೀವನದ ಸರಕುಗಳು.
೨. ಹುಡುಕುವ ಪ್ರೀತಿಗಿಂತ ಜೊತೆಗಿರುವ ಸ್ನೇಹ ಚಂದ. ಕಾಣುವ
ಕನಸಿಗಿಂತ ಕಾಣದಿರುವ ಕಲ್ಪನೆ ಚಂದ. ಬರೆಯುವ ಬರಹಕ್ಕಿಂತ
ಅಳಿಸಲಾಗದ ನೆನಪು ಚಂದ.
೩. ಆಡಿ ಕೊಳ್ಳುವ ಜಗತ್ತೇ ಹಾಗೆ. ನೀ ಏನು ಮಾಡಿದರೂ ಆಡಿ
ಕೊಳ್ಳುತ್ತೆ.ಆಡಿಕೊಳ್ಳುವವರು ಬೇಡಿಕೊಳ್ಳುವ ಹಾಗೆ ಮಾಡುವುದೇ
ನಿನ್ನ ಸಾಧನೆ.
೪.ಬೇರೆಯವರನ್ನು ಸಂತೈಸಿದಷ್ಟು ಸುಲಭವಲ್ಲ ನಮ್ಮನ್ನು ನಾವೇ
ಸಂತೈಸಿಕೊಳ್ಳೋದು.
೫. ಎಲ್ಲಾ ಇದ್ದು ಬದುಕೋದು ದೊಡ್ಡದಲ್ಲ. ಏನಿಲ್ಲದಿದ್ದರೂ
ಬದುಕಿ ತೋರಿಸ್ತೀವಲ್ಲ, ಅದೇ ಜೀವನ.
೬. ನಾಯಕನಿಗಾಗಿ ಕಾಯಬೇಡ. ಜವಾಬ್ದಾರಿಯನ್ನು ತೆಗೆದು
ಕೊಂಡರೆ ನೀನೇ ನಾಯಕನಾಗುತ್ತೀಯ.
೭. ಬಡತನವು ಬದುಕಲು ಬಲವನ್ನು ನೀಡಿದರೆ, ಸಿರಿತನವು
ಸಕಲವನ್ನೂ ಕೊಟ್ಟು ಶಕ್ತಿಹೀನನನ್ನಾಗಿಸುತ್ತದೆ.
೮. ಮನುಷ್ಯನಿಗೂ ಮನುಷ್ಯತ್ವಕ್ಕೂ ಇರೋ ವ್ಯತ್ಯಾಸ ಏನೆಂದರೆ
ಮನುಷ್ಯತ್ತ್ವ ಇರೋ ಎಲ್ಲಾ ಕಡೆ ಮನುಷ್ಯ ಇರುತ್ತಾನೆ. ಆದರೆ
ಮನುಷ್ಯ ಇರೋ ಎಲ್ಲಾ ಕಡೆ ಮನುಷ್ಯತ್ತ್ವ ಇರೋಲ್ಲ.
೯. ಇನ್ನೊಬ್ಬರ ಬದುಕನ್ನು ಇಣುಕಿನೋಡುವುದನ್ನು ಬಿಟ್ಟಾಗಲೇ
ನಿಮ್ಮ ಬದುಕು ನಿಮಗೆ ಸುಂದರವಾಗಿ ಕಾಣಲು ಸಾಧ್ಯ.
೧೦. ಬೇಕು, ಬೇಕು ಎನ್ನೋದೆಲ್ಲಾ ಜೀವನದಲ್ಲಿ ಸಿಗೋಲ್ಲ.
ಬೇಡ, ಬೇಡ ಅನ್ನೋದೆಲ್ಲಾ ನಮ್ಮನ್ನು ಕಾಡದೆ ಬಿಡೋಲ್ಲ.
೧೧. ನಿಮ್ಮ ಒಳ್ಳೆತನ ನಿಮ್ಮ ಬಲವಾಗಬೇಕೆ ವಿನಃ
ಬಲಹೀನತೆಯಾಗಬಾರದು.ನಿಮ್ಮ ಒಳ್ಳೆಮನಸ್ಸು ನೀವು
ಉಪಯೋಗಿಸುವಂತೆ ಇರಬೇಕೆ ವಿನಃ ಬೇರೆಯವರು
ದುರುಪಯೋಗಿಸುವಂತಿರಬಾರದು.
೧೨.ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ
ಗೊತ್ತಾದಮೇಲೆ ಯಾವತ್ತೂ ಅವರಿಂದ ದೂರ ಆಗ್ಬೇಡಿ,
ಯಾಕೆಂದರೆ ಕಲ್ಲಿನಲ್ಲಿ ಬರೆದ ಹೆಸರು ಯಾವತ್ತೂ ಅಳಿಸೋಲ್ಲ.
೧೩. ತಾಳ್ಮೆ ಹಾಗೂ ಮೌನಕ್ಕೆ ತುಂಬಾ ಶಕ್ತಿಯಿದೆ.
ತಾಳ್ಮೆ ಮಾನಸಿಕವಾಗಿ, ಮೌನ ಭಾವನಾತ್ಮಕವಾಗಿ
ವ್ಯಕ್ತಿಯನ್ನು ಗಟ್ಟಿಗೊಳಿಸುತ್ತವೆ.
೧೪. ಎಲ್ಲಿ ವಿಶ್ವಾಸ ಇರುತ್ತೋ ಅಲ್ಲಿ ಪ್ರೀತಿಯೆಂದೂ
ಸಾಯುವುದಿಲ್ಲ. ಹಾಗೆಯೇ ಎಲ್ಲಿ ವಿಶ್ವಾಸ ಇರುವುದಿಲ್ಲವೋ
ಅಲ್ಲಿ ಪ್ರೀತಿ ಎಂದೂ ಶಾಶ್ವತವಾಗಿ ಉಳಿಯುವುದಿಲ್ಲ.
೧೫. ಕಣ್ಣಿಗೆ ಕಣ್ಣೀರೆಂದೂ ಭಾರವೆನಿಸುವುದಿಲ್ಲ. ಆದರೆ
ಆ ನೀರು ಹೊರಬರುವಾಗ ಹೃದಯಕ್ಕೆ ತುಂಬಾ ಭಾರವೆನಿಸುತ್ತದೆ.
೧೬. ನೊಂದ ಸಮಾಜಕ್ಕೆ, ದಣಿದ ಮನಕ್ಕೆ ಸಾಂತ್ವನ ನೀಡುವುದು
ಕಾವ್ಯ , ಸಾಹಿತ್ಯದ ಜವಾಬ್ದಾರಿ. ಕಾವ್ಯವೆಂದರೆ ಅಮೃತಕ್ಕೆ
ಹಾರುವ ಗರುಡ.
೧೭. ಜೀವನದಲ್ಲಿ ನಮಗೆ ಎರಡು ಆಯ್ಕೆಗಳಿವೆ. -೧)ಒಪ್ಪಿಗೆ
೨)ಬದಲಾವಣೆ. ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲವೋ
ಅದನ್ನು ಒಪ್ಪಿಕೊಳ್ಳಬೇಕು. ಯಾವುದನ್ನು ಒಪ್ಪಲು ಸಾಧ್ಯವಿಲ್ಲವೋ
ಅದನ್ನು ಬದಲಾಯಿಸಬೇಕು.
೧೮.ಗಡಿಯಾರವನ್ನು ನೋಡಿ ಕೆಲಸಮಾಡುವವನು ಕೊನೆಯವರೆಗೂ
ಕಾರ್ಮಿಕನಾಗಿಯೇ ಇರುತ್ತಾನೆ. ಗಡಿಯಾರವನ್ನು ನೋಡದೇ
ದುಡಿಯುವವನು ಮಾಲೀಕನಾಗಿ ಬೆಳೆಯುತ್ತಾನೆ.
೧೯. ನೀರು ಇಲ್ಲದ ಬಾವಿ ಹತ್ತಿರ, ದುಡ್ಡು ಇಲ್ಲದ ಮನುಷ್ಯನ
ಹತ್ತಿರ ಯಾರೂ ಬರಲ್ಲ.
೨೦. ನಮ್ಮ ಕಾಳಜಿ ಇನ್ನೊಬ್ಬರಿಗೆ ತೊಂದರೆ ಎನಿಸಿದಾಗ
ಸಿಗುವ ನೋವು ಬಹಳ ಆಳವಾದದ್ದು.
ಮೂಲ:Face Book Quotes.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s