Uncategorized

ಕನ್ನಡ ಸೌರಭ.

೧.ಪ್ರ :ಅಮಾವಾಸ್ಯೆ ೧೨ ಗಂಟೆ. ಒಂದೂ ಬೀದಿ ದೀಪವಿಲ್ಲ.
ಆ ಹೊತ್ತಿನಲ್ಲಿ ೨ ಲಾರಿಗಳು ಒಂದು ಸೇತುವೆಯ ಮೇಲೆ
ದೀಪವಿಲ್ಲದೆ ಎದುರು ಬದುರಾಗಿ ಹೋದವು. ಆದರೆ ಡಿಕ್ಕಿ
ಹೊಡೆಯಲಿಲ್ಲ. ಹೇಗೆ ?
ಉ:ಮಧ್ಯಾಹ್ನ ೧೨ ಘಂಟೆಯಾದ್ದರಿಂದ.
೨. ಗೌರಿಗೇನು ಗೊತ್ತು ಗಂಡಸಿನ ದುಃಖ ?
ಹಿಮಗಿರಿಯ ಮಗಳು ಗೌರಿಗೂ ಗೊತ್ತಾಗಲಿಲ್ಲ ಗಂಡಸಿನ
ದುಃಖ. ಇಲ್ಲದಿದ್ದರೆ ಗಂಡನ ಮಾತು ಮೀರಿ ಅಪ್ಪನ ಮನೆಗೆ
ಹೋಗಿ, ಬೆಂಕಿಗೆ ಹಾರಿ ಅಷ್ಟೊಂದು ರಾದ್ಧಾಂತ ಮಾಡುತ್ತಿದ್ದಾಳಾ ?
೩. ಜಗತ್ಪ್ರಸಿಧ್ಧ, ಪ್ರತಿಭಾವಂತ, ಜನಪ್ರಿಯ ತಂದೆಯ
ಮಗನಾಗಿರುವುದೇ ದುರದೃಷ್ಟಕರ. -Austin ೦ Malley.
೪. ಕುಡುಕನ ಆಕಾರವೂ ಬಾಟಲಿಯಂತೆಯೇ ಆಗುತ್ತದೆ–ಆ
ಕುತ್ತಿಗೆ ಮತ್ತು ಹೊಟ್ಟೆ ನೋಡಿ.
೫. ಪಂಗ –ನಾಮ (=ಜೋಡಿ /ಕವಲು /ನಾಮ )-ತೆಲುಗು ಶಬ್ದ.
ಎಲ್ಲ ಕಿತ್ತುಕೊಂಡು ಹಣೆಗೆ ನಾಮಹಾಕಿ ಕಳುಹಿಸುವುದು ಎಂದರ್ಥ.
೬. ಮಳೆ ಬಿಲ್ಲಲ್ಲಿ ಏಳೇ ಬಣ್ಣ. ಇಂದ್ರ ಧನುಷ್ ನಲ್ಲಿ ಸಾವಿರ ಬಣ್ಣ.
೭. ಬಡವನಿಗೆ ಆಸೆ ತೋರಿಸಬಾರದು.
ಶ್ರೀಮಂತನಿಗೆ ಭಾಷೆ ಕೊಡಬಾರದು.
೮. ಪ್ರ: ”ಉದ್ಯೋಗಂ ಪುರುಷ ಲಕ್ಷಣಂ”-ಅಂತಾರೆ. ಆದರೆ ಸ್ತ್ರೀಗೆ ?
ಉ: ಸ್ತ್ರೀಗೆ ಊದ್ಯೋಗಸ್ಥ ಪುರುಷ ಲಕ್ಷಣಂ.
೯. ದೇವರು ಎಂದರೆ ಏನು ಎನ್ನುವುದೇ ಯಾರಿಗೂ ಗೊತ್ತಿಲ್ಲದೇ
ಇರುವಾಗ, ದೇವರ ವಿರೋಧಿ ನಾಸ್ತಿಕ ಅನ್ನುವುದಕ್ಕೆ ಅರ್ಥ ಇಲ್ಲ.
ನಾನು ದೇವರ ವಿರೋಧಿ ಅಲ್ಲ. ಆದರೆ ದೇವರು ಮತ್ತು ಧರ್ಮದ
ಹೆಸರಿನಲ್ಲಿ ಜನರ ಮೌಢ್ಯವನ್ನು ಬಂಡವಾಳವಾಗಿಟ್ಟುಕೊಂಡು
ಜನರನ್ನು ಮೋಸ ಮಾಡುವುದನ್ನು,ಶೋಷಣೆಮಾಡುವುದನ್ನು
ಕಟುವಾಗಿ ವಿರೋಧಿಸುತ್ತೇನೆ. ಎಲ್ಲಿ ಜಾತಿ ಪದ್ಧತಿ ಇದೆಯೋ
ಅಲ್ಲಿ ಧರ್ಮವಿಲ್ಲ. ಏಕೆಂದರೆ ಜಾತಿ ಪದ್ಧತಿಯೇ ಅಧರ್ಮ.
-H. ನರಸಿಂಹಯ್ಯ.
೧೦.”ತತ್ ” ಎಂದರೆ ”ಅದು” ಎಂದರ್ಥ. ಉಪನಿಷತ್ ಗಳ ಪ್ರಕಾರ
ಈ ಸೃಷ್ಟಿಯ ಆದಿಯಲ್ಲಿ ಏನೂ ಅಲ್ಲದ, ಆದರೆ ಎಲ್ಲವೂ ಆಗಿರುವ
”ತತ್ವ” ಒಂದಿತ್ತು. ಅದು ಅನಂತವಾದ ಶೂನ್ಯಮಾತ್ರ ವಾಗಿರುವುದರಿಂದ
ಋಷಿಗಳು ಅದನ್ನು ”ತತ್ ” ಎಂದಷ್ಟೇ ಕರೆದರು.
೧೧. ತತ್ ತ್ವ :”ತತ್ ”(ಅದು )ಗೆ ಅದರದ್ದೇ ಆದ ಗುಣ (ತ್ವ)ಇರುವುದರಿಂದ
ಅದನ್ನು ”ತತ್ ತ್ವ” ಎಂದು ಕರೆಯಲಾಯಿತು.
೧೨. ಕಾತ್ಯಾಯಿನಿ–ನೃತ್ಯದ ಅಧಿದೇವತೆ.
ಮಂದಾಕಿನಿ –ಸೌಂದರ್ಯದ ಅಧಿದೇವತೆ.
೧೩. ಅಕ್ಕ ಮಹಾದೇವಿ,ಸಂಗೊಳ್ಳಿ ರಾಯಣ್ಣ,ಕುವೆಂಪು,ಕಿತ್ತೂರು ಚೆನ್ನಮ್ಮ
ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ.
೧೪. ಎಲ್ಲ ಧರ್ಮಗಳದ್ದೂ ”ಕೂಡಿ ಬಾಳಬೇಕು” ಎನ್ನುವ ಬೋಧನೆ.
ಆದರೆ ಜಗತ್ತಿನಲ್ಲಿ ಕಾಣುವುದು ಅದರ ತದ್ವಿರುದ್ಧದ ಆಚರಣೆ.
೧೫. ಭಾರತೀಯ ಸಂಗೀತದ ಮೂಲ ವೇದಗಳೇ ಆಗಿವೆ.
ಚತುರ್ವೇದಗಳಲ್ಲಿ ಒಂದಾದ ಸಾಮವೇದವು ಸಂಗೀತವೇ ಆಗಿದೆ.
ಪುರಾಣ, ಶಾಸ್ತ್ರ ಗಳ ಪ್ರಕಾರ ಎಲ್ಲ ಸ್ವರಗಳ ಮೂಲ ”ಓಂ ”
ಎನ್ನುವ ಪ್ರಣವ ಶಬ್ದ. ಇದರಲ್ಲಿ ಅ, ಉ ಮತ್ತು ಮ್ ಎನ್ನುವ
ಬೀಜಶಬ್ದಗಳಿದ್ದು, ಈ ೩ ಬೀಜ ಸ್ವರಗಳಿಂದ ಸಂಗೀತದ
ಸಪ್ತ ಸ್ವರಗಳು ಹೇಗೆ ಉದಿಸಿ ಬಂದವು ಎನ್ನುವುದನ್ನು
”ಋಕ್ ಪ್ರತಿ ಸಕ್ಯ ”ಎನ್ನುವ ಗ್ರಂಥದಲ್ಲಿ ವಿವರಿಸಲಾಗಿದೆ.
ಸರಿ ಸುಮಾರು ೧,೫೦೦ ವರ್ಷ ಗಳ ಹಿಂದಿನ ”ಬೃಹದ್ದೇಸಿ ”
ಎಂಬ ಗ್ರಂಥದಲ್ಲಿ ರಾಗಗಳ ಬಗ್ಗೆ ಮಾಹಿತಿ ದೊರೆಯುತ್ತದೆ.
–ತೀರ್ಥರಾಮ ವಳಲಂಬೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s