Uncategorized

ದೂರುವವರು ದೇವರಿಂದ ದೂರವೇ ಉಳಿಯುತ್ತಾರೆ.

”ತುಂಬೆ ಹೂವಿನ ಮೇಲೆ ಶಿವನಿಗೇಕೆ ಒಲವು ?” ಎಂಬ
ಬಗ್ಗೆ ಕಥೆ ಇಂತಿದೆ:
ಒಮ್ಮೆ ಪರಮೇಶ್ವರ ಆಕಾಶದಲ್ಲಿ ಹೋಗುತ್ತಿದ್ದಾಗ ಎತ್ತರದ
ತೆಂಗಿನ ಮರ ಕಣ್ಣಿಗೆ ಬಿತ್ತು . ದೇವರು ”ಹೇಗಿದ್ದೀಯ” ಎಂದಾಗ
ತೆಂಗಿನ ಮರ ”ನೀನು ನನ್ನನ್ನು ಎತ್ತರವಾಗಿ ಸೃಷ್ಟಿಸಿದ್ಧೀಯಾ !
ಹಾಗೇ ಸಮಸ್ಯೆಗಳನ್ನೂ ಕೊಟ್ಟಿದ್ದೀಯ !ಎತ್ತರದಲ್ಲಿರುವ ಕೊಂಬೆಗಳಿಗೆ
ಕೆಳಗಿರುವ ಬೇರುಗಳಿಂದ ನೀರು ಹೊರುವುದು ಕಷ್ಟ. ನಾನ್ಯಾರಿಗೂ
ನೆರಳನ್ನು ಕೊಡಲಾರೆ. ಸಿಡಿಲು ಬಡಿದರೆ ಮೊದಲು ತಗಲುವುದು
ನನಗೇ ” ಎಂದು ಕಷ್ಟಗಳ ಪಟ್ಟಿಯನ್ನು ಮುಂದಿಟ್ಟಿತು.
ಮುಂದೆ ಕಾಣಿಸಿದ ಮಾವಿನ ಮರ ಹೀಗೆಂದಿತು ”ನೀನು ಕರುಣಿಸಿರುವ
ಒಳ್ಳೆಯ ಗುಣಗಳೇ ನನಗೆ ಪ್ರಾಣಾಂತಿಕವಾಗಿವೆ. ತಳಿರು ತೋರಣಕ್ಕಾಗಿ
ನಿಷ್ಕರುಣೆಯಿಂದ ನನ್ನ ಎಲೆಗಳನ್ನು ಕೀಳುತ್ತಾರೆ. ಹಣ್ಣು ಬಿಡುವಾಗ
ನಾನು ತಿನ್ನುವ ಕಲ್ಲೇಟಿಗೆ ಲೆಕ್ಕವಿಲ್ಲ” ಎಂದು ಗೋಳಿಟ್ಟಿತು. ಬೇವಿನಮರ
”ತನ್ನ ಎಲೆ ಕಹಿ, ಎಣ್ಣೆಯೂ ಕಹಿ,ತನ್ನನ್ನು ಕಂಡರೆ ಎಲ್ಲರಿಗೂ ಅನಾದರ”.
ಎಂದು ತನ್ನ ನೋವನ್ನು ನಿವೇದಿಸಿತು. ದೇವರು, ”ದೊಡ್ಡ ಮರಗಳ ದೂರು
ಗಳೂ ದೊಡ್ಡದಿರುತ್ತವೆ. ಸಣ್ಣ ಗಿಡಗಳನ್ನು ಮಾತನಾಡಿಸೋಣ” ಎಂದು
ಗುಲಾಬಿಯ ಗಿಡವನ್ನು ಮಾತನಾಡಿಸಿದರು. ಅದು, ”ನನ್ನ ಹೂವುಗಳ
ಸೌಂದರ್ಯಕ್ಕೆ ಸರಿ ಹೊಂದುವ ಸುವಾಸನೆಯಿಲ್ಲ. ಮೈಯೆಲ್ಲಾ ಮುಳ್ಳುಗಳು.
ಬಳಿ ಬಂದವರನ್ನು ಚುಚ್ಚುತ್ತವೆ. ”ಎಂದು ದುಃಖಿಸಿತು. ಮುಂದೆ ಮಲ್ಲಿಗೆ,
ಸೇವಂತಿಗೆ ಗಿಡಗಳೂ ತಮ್ಮ ಅಲ್ಪ ಜೀವಾವಧಿಯ, ಕುಬ್ಜಾಕಾರದ ಬಗ್ಗೆ
ಕೊರಗಿದವು. ಬರೀ ದೂರುಗಳ ಸುರಿಮಳೆಯನ್ನು ಎದುರಿಸಿದ ದೇವರು
ಇನ್ನು ಯಾವ ಮರಗಿಡಗಳನ್ನೂ ಮಾತನಾಡಿಸಬಾರದು ಎಂದು
ಕೊಳ್ಳುತ್ತಿರುವಾಗ ಎದುರಿಗೊಂದು ತುಂಬೆಗಿಡ ಕಂಡಿತು. ತನ್ನ ಬಿಳಿಯ
ಹೂಗಳನ್ನು ಉಪಯೋಗಿಸಿ ಪರಮೇಶ್ವರನಿಗೆ ನಮಸ್ಕರಿಸಿತು. ಮುಗುಳ್ನಕ್ಕಿತು.
ದೇವರು ಆಶ್ಚರ್ಯದಿಂದ ”ನಿನ್ನದೇನೂ ದೂರಿಲ್ಲವೇ” ಎಂದಾಗ ”ನಾನೇಕೆ
ದೂರಬೇಕು ?ನಾನು ಎತ್ತರದವನಲ್ಲ. ಯಾವ ಬಿರುಗಾಳಿಯೂ ನನ್ನನ್ನು
ಉರುಳಿಸದು. ನನಗೆ ವಿಶೇಷವಾದ ನೀರು, ಗೊಬ್ಬರ ಬೇಕಿಲ್ಲ. ಎಲ್ಲಾ ಕಡೆ
ಬೆಳೆಯಬಲ್ಲೆ. ಒಂದಿಷ್ಟು ನೀರಿದ್ದರೆ ಸಾಕು. ಅಚ್ಚ ಬಿಳಿಬಣ್ಣದ ನನ್ನ
ಹೂಗಳು ಒಂದೆರಡು ದಿನವಿದ್ದು ಉದುರಿ ಹೋಗುತ್ತವೆ. ಆದರೆ ಇರುವಷ್ಟು
ಸಮಯ ಬಳಿ ಬಂದವರನ್ನು ನೋಡಿ ಮುಗುಳ್ನಗುತ್ತವೆ. ಒಂದೆರಡು ತಿಂಗಳು
ಬಾಳಿ ಬಿಳಿಯ ಹೂಗಳನ್ನು ಬಿಡುತ್ತ, ಇರುವಷ್ಟು ಕಾಲವೂ ನಗು ನಗುತ್ತ
ಆನಂದವಾಗಿದ್ದೇನೆ. ನನಗೆ ಇದಕ್ಕಿಂತ ಮತ್ತೇನು ಬೇಕು?” ಎಂದಿತು. ಯಾವ
ದೂರನ್ನೂ ಹೇಳದೆ ಇರುವಷ್ಟು ಕಾಲ ಆನಂದವಾಗಿರುವ ತುಂಬೆಗಿಡವನ್ನು
ಮೆಚ್ಚಿದ ಪರಮೇಶ್ವರ, ಅಂದೇ ”ತುಂಬೆ ಹೂಗಳು ನನ್ನ ಪೂಜೆಗೆ ಪ್ರಿಯವಾದ
ಹೂಗಳು” ಎಂದು ಘೋಷಿಸಿದನಂತೆ. ದೇವರು ನಮ್ಮನ್ನು ಕೇಳಿದರೆ
ದೂರುಪಟ್ಟಿ ಸಲ್ಲಿಸುತ್ತೇವೋ ಅಥವಾ ದೇವರು ಕರುಣಿಸಿರುವ ಪ್ರಸಾದಗಳಿಗೆ
ವಂದನೆ ಸಲ್ಲಿಸುತ್ತೇವೆಯೋ ?
ಮೂಲ:ಸಂಗ್ರಹ.

2 thoughts on “ದೂರುವವರು ದೇವರಿಂದ ದೂರವೇ ಉಳಿಯುತ್ತಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s