Uncategorized

ಚಿಂತನ.

೧. ವಿವಿಧ ಧರ್ಮ,ಮತ ಗಳು ವಿವಿಧ ದೀಪಗಳಿದ್ದಂತೆ.
ಬೆಳಕು ಒಂದೇ.
೨. ಸೇವೆ ಗುರುತಿಸುವಿಕೆಗಾಗಿ ಸಲ್ಲದು. ಹೃದಯ ಶ್ರೀಮಂತಿಕೆಯಿಂದ
ಮಾಡಬೇಕು.
೩. ಗುಬ್ಬಿ ನಮ್ಮ ದೇಶದ ಪುಟ್ಟ ಇರುವಿಕೆಯ, ಕ್ಷೀಣ ಧ್ವನಿಯವರ
ಪ್ರತಿನಿಧಿ ಎನ್ನ ಬಹುದು.
೪. ”ಮಣ್ಣು ತಿಂದು ಹಣ್ಣು ಕೊಡುವ ಮರ” ಪರೋಪಕಾರಿ. ಪಣೋಲಿ
ಮರ ಹೂ ಬಿಟ್ಟರೆ ಅದು ದುರ್ಭಿಕ್ಷೆಯ ಸಂಕೇತವೆಂದು ಭಾವಿಸಿ ಅದನ್ನು
ಕಡಿದುರುಳಿಸುತ್ತಾರೆ. ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಹೂ ಬಿಡುವ
ಪಣೋಲಿಮರ ತಾನಾಗಿ ಸತ್ತರೆ ಒಳ್ಳೆಯದಲ್ಲ ಎನ್ನುತ್ತಾರೆ. ”ಮಗ ಹುಟ್ಟಿ
ತಾಯಿಯನ್ನು ಕೊಂದ” ಎಂದು ಬಾಳೆಗಿಡ ಗೊನೆಹಾಕಿದಾಗ ಕಡಿಯುವುದಕ್ಕೆ
ಹೇಳುವ ಗಾದೆ, ಪಣೋಲಿ ಮರಕ್ಕೂ ಅನ್ವಯಿಸುತ್ತದೆ. ಹೂವು ಪಣೋಲಿ
ಮರಕ್ಕೆ ಸಾವಾಗಿ ಕಾಡುತ್ತದೆ. ಇದರ ಎಲೆಯ ಮೇಲೆ ಬರೆದ ಗ್ರಂಥಗಳು
ತಾಳೆಗರಿ ಗ್ರಂಥಗಳೆಂದೇ ಪ್ರಸಿದ್ಧಿ.
೫. ಪ್ರತಿಯೊಬ್ಬರೂ ತಮ್ಮ ಭಾವನೆಗಳಿಗೆ, ಆಸಕ್ತಿ ಗಳಿಗೆ ಹಾಗೂ ಮೌಲ್ಯ
ಚಿಂತನೆಗೆ ಅನುಸಾರವಾಗಿ ವಸ್ತುವನ್ನು ಗ್ರಹಿಸುತ್ತಾರೆ. ಬೀಗವನ್ನು ಕಳ್ಳ
ಅಡಚಣೆಯಾಗಿ ಗ್ರಹಿಸಿದರೆ, ಮಾಲಕನು ಸುರಕ್ಷತೆಯ ಸಾಧನ ಎಂದು
ಗ್ರಹಿಸುತ್ತಾನೆ.
-ಫಾ. ಪ್ರಶಾಂತ್ ಮಾಡ್ತಾ.
೬. ಭಜನೆಯಿಂದ ಭಗವಂತನನ್ನು ಸುಲಭದಲ್ಲಿ ಒಲಿಸಬಹುದು.
ಭಜನೆಯಿದ್ದಲ್ಲಿ ಸಮಾಜದ ವಿಭಜನೆ ಇರುವುದಿಲ್ಲ.
೭. ಪತ್ರಿಕೆಗಳು ಸಮಾಜಮುಖಿ ಚಿಂತನೆ ನಡೆಸಬೇಕು. ಜನರ ಸಮಸ್ಯೆಗಳನ್ನು
ಸಂಬಂಧಿಸಿದ ಅಧಿಕಾರಿಗಳು ಗಮನಿಸುವಂತೆ ಹಾಗೂ ಪರಿಹಾರಕ್ಕೆ
ಪ್ರಯತ್ನಿಸುವಂತೆ ಕರೆ ನೀಡಬೇಕು.
೮. ಮಕ್ಕಳು ಮರದ ರೆಂಬೆಗಳಂತೆ. ಬೆಳೆದಂತೆಲ್ಲ ದೂರ ದೂರವೇ
ಆಗಿಬಿಡುತ್ತಾರೆ.
-ರಮೇಶ ಚಂದ್ರ.
೯. ನಮ್ಮನ್ನು ಅರ್ಥ ಮಾಡಿಕೊಳ್ಳಲು ಒಮ್ಮೆಯೂ ಪ್ರಯತ್ನಿಸದವರ
ಜೊತೆಗೆ ಇರುವುದಕ್ಕಿಂತ ಒಂಟಿತನವೇ ಲೇಸು.
೧೦. ಒಂದು ಪ್ರಾಣಿ ಅದೇ ಜಾತಿಯ ಪ್ರಾಣಿಯನ್ನು ಕೊಲ್ಲುವುದಿಲ್ಲ.
ಮನುಷ್ಯ ಮಾತ್ರ ಮನುಷ್ಯನನ್ನೇ ಕೊಲ್ಲುತ್ತಾನೆ. ಇದು ಮೃಗತ್ವ
ಮತ್ತು ಮಾನವತ್ವಕ್ಕೆ ಇರುವ ವ್ಯತ್ಯಾಸ.
-ವಲೇರಿಯನ್ ಸಲ್ಡಾನ.
ಮೂಲ:ಸಂಗ್ರಹ .

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s