Uncategorized

ಚಿಂತನ.

೧.ಸತ್ಯ ಎಂದರೇನು ಎನ್ನುವ ವಿಚಾರದಲ್ಲಿ ಹಲವರಲ್ಲಿ
ಗೊಂದಲವಿದೆ. ಸುಳ್ಳು ಹೇಳದೇ ಇರುವುದನ್ನು ಸತ್ಯ ಎಂದು
ತಿಳಿದವರೇ ಹೆಚ್ಚು. ಆದರೆ ಸತ್ಯ ಎನ್ನುವ ಪದಕ್ಕೆ ವಿಶಾಲ
ಅರ್ಥವಿದೆ. ಈ ಸೃಷ್ಟಿಯ ಮೂಲವನ್ನು ಸತ್ಯ ಎಂದು
ಕರೆಯಲಾಗಿದೆ. ಆದರೆ, ಸೃಷ್ಟಿಯ ಅಂತ್ಯವೂ ಸತ್ಯವೇ ಆಗಿದೆ.
ಸತ್ಯ ಮತ್ತು ಅಸತ್ಯಗಳು ಒಂದೇ ಮೂಲವುಳ್ಳವಾಗಿದ್ದು,ಕೇವಲ
ಸಂದರ್ಭವನ್ನು ಹೊಂದಿಕೊಂಡು ಸತ್ಯ ಅಥವಾ ಸುಳ್ಳು ಎಂದು
ಗುರುತಿಸಲ್ಪಡುತ್ತದೆ. ಕೆಲವು ಸಂದರ್ಭದಲ್ಲಿ ಸತ್ಯವನ್ನಾಡುವುದು
ಅನಾಹುತವೊಂದಕ್ಕೆ ಕಾರಣವಾಗಬಹುದು. ಆಗ ನಿಜವನ್ನು
ಮರೆಮಾಚುವುದೇ ಅರ್ಥಪೂರ್ಣ. ವಸ್ತುಸ್ಥಿತಿಯ ಇತಿಮಿತಿಯಲ್ಲಿ
”ನಾವು ಏನನ್ನು ಅಭಿವ್ಯಕ್ತಿಗೊಳಿಸಬಹುದು” ಎನ್ನುವ ”ಪರಿಜ್ಞಾನವೇ
ಸತ್ಯ ”ವಾಗುತ್ತದೆ.
–ತೀರ್ಥರಾಮ ವಳಲಂಬೆ.
೨.ವಸ್ತ್ರ ಸಂಹಿತೆ.
ಧರಿಸುವ ದಿರಿಸಿನಲ್ಲಿ ಸಂಹಿತೆ (code)ಇರಲಿ. ಸಮಾಜದ ವಿವಿಧ
ಸ್ತರಗಳಲ್ಲಿ ಶಿಸ್ತು ಅಳವಡಿಸಿಕೊಂಡಿರಬೇಕು ಎಂಬ ಉದ್ದೇಶದಿಂದ
Dress Code ಬಳಕೆಗೆ ಬಂದಿತು. ಉದಾ:Police ಇಲಾಖೆ ಸಿಬ್ಬಂದಿ,
ಇತರ ಸರ್ಕಾರಿ ಇಲಾಖೆ ಸಿಬ್ಬಂದಿ ತಮ್ಮ ಇಲಾಖೆಗೆ ಸಂಬಂಧಿಸಿ
ವಿವಿಧ ಬಣ್ಣದ ದಿರಿಸು ಧರಿಸುವುದು ನಿಯಮ ಬದ್ಧವಾಗಿದೆ.
ವಿದ್ಯಾರ್ಥಿಗಳಲ್ಲಿ ಸಮಾನ ಭಾವ ಇರಲಿ, ಶಾಲೆ, ಕಾಲೇಜುಗಳು
Fashion ಸಂಸ್ಥೆಗಳಾಗದಿರಲಿ ಎಂಬ ಕಾರಣದಿಂದ ಶಿಕ್ಷಣ ಸಂಸ್ಥೆಗಳಲ್ಲಿ
ವಸ್ತ್ರ ಸಂಹಿತೆ ಅಳವಡಿಸಲಾಗಿದೆ. ಸಮಾಜದಿಂದ ಸಮಾಜಕ್ಕೆ,
ಸಮುದಾಯದಿಂದ ಸಮುದಾಯಕ್ಕೆ ಹೀಗೆ ಜಾಗತಿಕ ಸ್ತರದಲ್ಲಿ
ಬಟ್ಟೆ ತನ್ನ ಇರವನ್ನು ಬೇರೆ ಬೇರೆ ರೀತಿಯಲ್ಲಿ ಬದಲಾಯಿಸಿಕೊಳ್ಳುತ್ತದೆ.
”ವ್ಯಕ್ತಿ ಧರಿಸುವ ಬಟ್ಟೆಯಿಂದ ಆತನ ಮಾನಸಿಕ ಸ್ಥಿತಿ, ಸಾಮಾಜಿಕ ಸ್ತರ
ಹಾಗೂ ಆತನ ಒಟ್ಟು ಚರ್ಯೆಯನ್ನು ಅಳೆಯಬಹುದು”ಎನ್ನುವುದು
ಅನುಭವಿಗಳ ಮಾತು. ಬಟ್ಟೆಯ ಬಣ್ಣದ ಆಯ್ಕೆಯಿಂದ ವ್ಯಕ್ತಿಯ
ಮಾನಸಿಕ ಸ್ಥಿತಿಯನ್ನು ತಿಳಿದುಕೊಳ್ಳಬಹುದೆಂದು ಮನೋ ವಿಜ್ಞಾನ
ತಿಳಿಸುತ್ತದೆ. ಮುಖ್ಯವಾಗಿ ಧರಿಸುವ ದಿರಿಸು ತನಗೆ ಸರಿ ಹೊಂದುತ್ತದೆಯೇ
ಎನ್ನುವ ಕುರಿತೂ ಚಿಂತಿಸಬೇಕು.
–ರೇಮಾ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s