Uncategorized

ಕನ್ನಡ ಸುಭಾಷಿತಗಳು.

೧.ಜೀವನದಲ್ಲಿ ಸಮಸ್ಯೆಗಳು ಮಳೆಯ ಹನಿಗಳಿದ್ದಂತೆ.
ಅದು ನಿಧಾನವಾಗಿ ಬರಲಿ ಅಥವಾ ರಭಸದಿಂದ ಬರಲಿ
ಆತ್ಮ ವಿಶ್ವಾಸವೆಂಬ ಕೊಡೆ ನಮ್ಮಲ್ಲಿ ಇರಬೇಕು ಅಷ್ಟೆ.
೨. ಕುದಿಯುವ ನೀರಿನಲ್ಲಿ ಪ್ರತಿಬಿಂಬ ನೋಡಲು ಸಾಧ್ಯವಿಲ್ಲ.
ಹಾಗೆಯೇ ಮನಸ್ಸು ಸಿಟ್ಟಿನಿಂದ ಕುದಿಯುತ್ತಿರುವಾಗ ಸರಿಯಾಗಿ
ಯೋಚಿಸಲು ಆಗುವುದಿಲ್ಲ. ಆದ್ದರಿಂದ ಮನಸ್ಸನ್ನು ತಿಳಿನೀರಿನಂತೆ
ತಿಳಿಯಾಗಿಸಿ ಸಮಾಧಾನದಿಂದ ಇಟ್ಟುಕೊಳ್ಳಬೇಕು.
೩. ಯಾರ ಎದುರು ಮನಃ ಸ್ಫೂರ್ತಿ ನಗ್ತಿರೋ ಅವರ ಜೊತೆ ಇಡೀ
ದಿನ ಕಳೆಯಬಹುದು. ಹಾಗೆಯೇ ಯಾರ ಜೊತೆ ಮನಸ್ಸು ಬಿಚ್ಚಿ
ಅಳ್ತಿರೋ ಅವರ ಜೊತೆ ಇಡೀ ಜೀವನವನ್ನೇ ಕಳೆಯ ಬಹುದು.
೪. ದೇವರು ವರಗಳನ್ನು ಕೊಡುವುದಿಲ್ಲ. ಶಾಪಗಳನ್ನು ಸಹ
ಕೊಡುವುದಿಲ್ಲ. ಅವಕಾಶಗಳನ್ನು ಮಾತ್ರ ಕೊಡುತ್ತಾನೆ. ಅವುಗಳನ್ನು
ವರಗಳಾಗಿ ಮಾಡಿಕೊಳ್ಳುವುದು ಅಥವಾ ಶಾಪಗಳಾಗಿ ಮಾಡಿಕೊಳ್ಳುವುದು
ನಮ್ಮ ಕೈಯಲ್ಲಿದೆ.
೫. ಮರೆಯಲಾಗದ ಕಲ್ಪನೆ ಪ್ರೀತಿ. ಬರೆಯಲಾಗದ ಭಾವನೆ ನಗು.
ಅಳಿಸಲಾಗದ ಚಿತ್ರ ನೆನಪು. ಬಿಡಿಸಲಾಗದ ಬಂಧನ ಸ್ನೇಹ.
ತ್ಯಾಗ, ಪ್ರೀತಿಗಿಂತ ದೊಡ್ಡದು. ನಡತೆ ಸೌಂದರ್ಯಕ್ಕಿಂತ ದೊಡ್ಡದು.
ಮಾನವೀಯತೆ ಸಂಪತ್ತಿಗಿಂತ ದೊಡ್ಡದು. ನಂಬಿಕೆ ಇವೆಲ್ಲಕ್ಕಿಂತ ದೊಡ್ಡದು.
೬. ಬೆಟ್ಟ ಎಂದಿಗೂ ನಮ್ಮ ಮುಂದೆ ಬಾಗುವುದಿಲ್ಲ. ಆದರೆ ಕಷ್ಟಪಟ್ಟು
ಏರಿದರೆ ಅದು ನಿಮ್ಮ ಪಾದದ ಕೆಳಗೆ ಇರುತ್ತದೆ.
೭. ಆಕಾಶ ಎಷ್ಟೇ ವಿಶಾಲವಾಗಿದ್ದರೂ ನಕ್ಷತ್ರಕ್ಕಿರೋ ಬೆಲೆ ಆಕಾಶಕ್ಕಿಲ್ಲ.
ಹಾಗೇ ವ್ಯಕ್ತಿ ಎಷ್ಟೇ ಶ್ರೀಮಂತನಾಗಿದ್ದರೂ ಅವನ ಒಳ್ಳೆಯ ಗುಣಕ್ಕೆ ಇರುವ
ಬೆಲೆ, ಅವನ ಹಣಕ್ಕೆ ಇಲ್ಲ.
೮. ಜೇನು ಹುಳ ಕೂಡಿಟ್ಟ ತುಪ್ಪ, ಇರುವೆ ಕೂಡಿಟ್ಟ ಸಕ್ಕರೆ, ಜಿಪುಣ
ಕೂಡಿಟ್ಟ ಹಣ ಯಾವತ್ತೂ ಪರರ ಪಾಲಾಗುತ್ತದೆ.
೯. ಗುಲಾಬಿ ಗಿಡದಲ್ಲಿ ಎಷ್ಟೇ ಮುಳ್ಳುಗಳಿದ್ದರೂ ಅರಳುವುದನ್ನು
ನಿಲ್ಲಿಸುವುದಿಲ್ಲ. ಹಾಗೆಯೇ ನಮ್ಮ ಮನಸ್ಸಿನಲ್ಲಿ ಎಷ್ಟೇ ನೋವುಗಳಿದ್ದರೂ
ನಗುವುದನ್ನು ನಿಲ್ಲಿಸಬಾರದು.
೧೦. ದಾರಿಯಲ್ಲಿ ಎಲ್ಲರೂ ನಡೆಯುತ್ತಾರೆ. ಅದರಲ್ಲಿ ಹೆಜ್ಜೆ ಗುರುತು
ಗಳಿರುವುದು ಕೆಲವರದ್ದು ಮಾತ್ರ.
ಮೂಲ:Face book quotes.

2 thoughts on “ಕನ್ನಡ ಸುಭಾಷಿತಗಳು.

Leave a Reply to kvvenkataramana Cancel reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s