Uncategorized

ಧನ್ವಂತರಿ.

೧.Prostate ಗ್ರಂಥಿಯನ್ನು ಸಂಕುಚಿತಗೊಳಿಸಲು Lycopene
ಎಂಬ ಪೋಷಕಾಂಶ Tomato ದಲ್ಲಿ ಹೇರಳವಾಗಿದೆ. ಪ್ರತಿನಿತ್ಯ
ತಾಜಾ tomato juice ಕುಡಿಯುತ್ತ ಬಂದಲ್ಲಿ prostate ತೊಂದರೆ
ಕಡಿಮೆಯಾಗುತ್ತದೆ.
೨. ಒಣಹಣ್ಣು (dry fruits )ಮತ್ತು ಬಾದಾಮಿಯಂಥ ಕಾಯಿ (nut )
ಗಳನ್ನು ನಿತ್ಯ ಸೇವನೆ ಮಾಡುವುದರಿಂದ Acidity ಯಂಥ ಸಮಸ್ಯೆಗಳಿಂದ
ನಿರಾಳತೆ ಪಡೆಯಬಹುದು.
೩. ಪ್ರತಿದಿನ ದ್ವಿದಳ ಧಾನ್ಯ (೩೦ gr ಅವರೇಕಾಳು, ಗಜ್ಜರಿ, ಬೀನ್ಸ್ ಮತ್ತು
ಸೋಯಾಬೀನ್ )ಸೇವಿಸಿದರೆ Type -೨ Diabetes ನ ಸಾಧ್ಯತೆಗಳು ಶೇ. ೩೫
ಕಡಿಮೆಯಾಗುತ್ತವೆ.
೪. ತುಳಸಿಯ ಒಂದೆಲೆಗೆ ಸ್ವಲ್ಪ ಉಪ್ಪು ಸೇರಿಸಿ ಐದಾರು ನಿಮಿಷ
ಇಟ್ಟುಕೊಂಡರೆ ಹಲ್ಲು ನೋವು ತಕ್ಷಣ ಉಪಶಮನ .
೫. ಕರಿಬೇವು -ಮೂಳೆಗಳನ್ನು ಗಟ್ಟಿಗೊಳಿಸುವುವು.
ಅಲಸಂಡೆ -ಮಲ ಪ್ರವೃತ್ತಿ ಸರಿಗೊಳಿಸುವಲ್ಲಿ ಪರಿಣಾಮಕಾರಿ.
ಹಿಪ್ಪಲಿ-ದೇಹದ ಎಲ್ಲ ಧಾತುಗಳನ್ನು ಪೋಷಿಸುವುದು.
೬. ತೀರ್ಥವೂ ಔಷಧಿ. ತೀರ್ಥದಲ್ಲಿರುವ ತಣ್ಣೀರು ಮನಸ್ಸಿಗೆ
ಶಾಂತಿ ನೀಡುತ್ತದೆ . ತಣ್ಣೀರಿನಲ್ಲಿರುವ ಅನೇಕ ರೋಗಕಾರಕ
ಸೂಕ್ಷ್ಮ ಕ್ರಿಮಿಗಳನ್ನು ತುಳಸಿ ನಾಶಪಡಿಸುತ್ತದೆ. ತೀರ್ಥಕ್ಕೆ
ತೇಯ್ದ ಶ್ರೀಗಂಧವನ್ನು ಸೇರಿಸಿರುತ್ತಾರೆ. ಶ್ರೀಗಂಧ ರಕ್ತ ಶುದ್ಧಿ
ಗೊಳಿಸುತ್ತದೆ. ತೀರ್ಥಕ್ಕೆ ಮಿಶ್ರಮಾಡಿದ ಪಚ್ಛೆ ಕರ್ಪುರ ಹೃದಯಕ್ಕೆ
ಹಿತವನ್ನುಂಟು ಮಾಡುತ್ತದೆ. ಜೊತೆಯಲ್ಲಿ ಹಾಕಿರುವ ಸುಗಂಧದ
ಹೂಗಳು ಮನಃ ಪ್ರಸನ್ನತೆಯನ್ನುಂಟು ಮಾಡುತ್ತವೆ.
೭. ಅಂಜೂರ -ತೊನ್ನು ಕಡಿಮೆಮಾಡುವ ವಿಶೇಷ ಗುಣವಿದೆ.
೮. ನುಗ್ಗೆಕಾಯಿ -ಕೆಮ್ಮು,ಅಸ್ತಮಾ ಗಳನ್ನು ಗುಣಪಡಿಸಲು ಸಹಕಾರಿ.
೯. ತುಪ್ಪ -ಸ್ವರ ಮಾಧುರ್ಯ ಹೆಚ್ಚಿಸಲು ಉಪಯುಕ್ತ.
೧೦. ನಿಂಬೆಹಣ್ಣು -ರಕ್ತ ಶುದ್ಧಿ ಮಾಡುವುದರಿಂದ ಚರ್ಮ
ರೋಗಗಳಲ್ಲಿ ಸಹಕಾರಿ.
೧೧. ಕೊಬ್ಬರಿ ಎಣ್ಣೆಗೆ ಮೆಂತ್ಯವನ್ನು ಹಾಕಿಟ್ಟು ತಲೆಗೂದಲಿಗೆ
ಹಚ್ಚುವುದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ.
೧೨. ತಾಜಾ ಮೆಂತ್ಯಸೊಪ್ಪನ್ನು ನೀರಲ್ಲಿ ಅರೆದು ಕಣ್ಣುಗಳ
ಕೆಳಭಾಗದಲ್ಲಿ ಹಚ್ಚಿದರೆ ಕ್ರಮೇಣ ಕಪ್ಪು ಛಾಯೆ ನಿವಾರಣೆಯಾಗುತ್ತದೆ.
೧೩. ಕೊಬ್ಬರಿ ಎಣ್ಣೆಯಲ್ಲಿ ಇಂಗಿನ ಪುಡಿಯನ್ನು ಚೆನ್ನಾಗಿ
ಕಲಸಿ ಕೀಲುನೋವು ಇರುವ ಭಾಗದಲ್ಲಿ ಉಜ್ಜುವುದರಿಂದ
ನೋವು ಕಡಿಮೆಯಾಗುತ್ತದೆ.
೧೪. ಕಾಳುಮೆಣಸು -ಕಫ, ಕೆಮ್ಮು ನಿವಾರಕ.
೧೫. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ
ಜೇನುತುಪ್ಪಕ್ಕೆ ೩ ಚಮಚ ಕೊತ್ತಂಬರಿಸೊಪ್ಪಿನ ರಸವನ್ನು ಬೆರೆಸಿ
ಕುಡಿಯುವುದರಿಂದ ರಕ್ತ ಹೀನತೆಯನ್ನು ತಡೆಯ ಬಹುದು.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s