Uncategorized

ಯಕ್ಷಗಾನ ಮತ್ತು ತಾಳಮದ್ದಳೆ.

ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಯಕ್ಷಗಾನ ಕಲೆ
ಮಹತ್ತ್ವದ ಪಾತ್ರ ವಹಿಸಿದೆ. ಪುರಾಣದಲ್ಲಿ ಬರುವ ವ್ಯಕ್ತಿಗಳ ಪ್ರತಿಬಿಂಬವನ್ನು
ತೋರಿಸುವ ಕನ್ನಡಿ ಯಕ್ಷಗಾನ. ಪೌರಾಣಿಕ ವ್ಯಕ್ತಿಗಳ ಪರಿಚಯ ,
ಸಂದೇಶವನ್ನು ಇಂದು ಜನರಿಗೆ ತಲುಪಿಸುವ ಏಕೈಕ ಮಾಧ್ಯಮ -ಯಕ್ಷಗಾನ.
ಸಾಹಿತ್ಯ, ಸಂಗೀತ, ನೃತ್ಯಗಳ ಸಂಗಮವೇ ಯಕ್ಷರಂಗ. ಕರ್ನಾಟಕ ಕರಾವಳಿಯ
ಹೆಮ್ಮೆಯ ಜನಪದ ಕಲೆ . ಯಕ್ಷಗಾನದಿಂದ ಸಂಸ್ಕಾರ, ಸಂಸ್ಕೃತಿಯ ಅರಿವು ಸಾಧ್ಯ.
ಸನಾತನ ಧರ್ಮದ ಉಳಿವಿಗೆ ಯಕ್ಷಗಾನ ಬಹು ದೊಡ್ಡ ಕೊಡುಗೆ ನೀಡಿದೆ.
ನಮ್ಮ ದೇಶದ ಪರಿಪೂರ್ಣ ಕಲೆ ಯಕ್ಷಗಾನ. ಯಕ್ಷಗಾನ ಕಲೆಯು
ರಸಾಸ್ವಾದನೆ ಜೊತೆಗೆ ಸಮಾಜಕ್ಕೆ ಧಾರ್ಮಿಕ ಮತ್ತು ನೈತಿಕ ಸಂದೇಶ ನೀಡುತ್ತದೆ.
ಪುರಾಣ ಜ್ಞಾನ, ಸಾಹಿತ್ಯ ಜ್ಞಾನ , ಮಾತುಗಾರಿಕೆ ಎಲ್ಲವೂ ಯಕ್ಷಗಾನದಲ್ಲಿ
ಅಡಕವಾಗಿದ್ದು ಪ್ರಪಂಚದಲ್ಲೇ ಜೀವಂತಕಲೆ ಎಂಬ ಹೆಗ್ಗಳಿಕೆ ಪಡೆದ ಏಕೈಕ
ಕಲಾಪ್ರಕಾರ -ಯಕ್ಷಗಾನ. ಯಕ್ಷಗಾನದಲ್ಲಿ ಉತ್ತರಾದಿ ಮತ್ತು ದಕ್ಷಿಣಾದಿ
ಎಂಬ ವೈವಿಧ್ಯವಿದೆ. ಉಡುಪಿಯಿಂದ ದಕ್ಷಿಣಕ್ಕೆ ತೆಂಕುತಿಟ್ಟು,ಉತ್ತರಕ್ಕೆ
ಬಡಗು ತಿಟ್ಟು. ಬಡಗಿನಲ್ಲಿ ತಾಳ ಹಿಡಿಯುತ್ತಾರೆ;ತೆಂಕಿನಲ್ಲಿ ಜಾಗಟೆ ಹಿಡಿಯುತ್ತಾರೆ.
ತೆಂಕಿನ ಚೆಂಡೆ ಏರು ಶ್ರುತಿಯಲ್ಲಿದೆ. ಬಡಗಿನ ಚೆಂಡೆ ಇಳಿ ಶ್ರುತಿಯಲ್ಲಿದೆ.
ತೆಂಕು ತಿಟ್ಟು ಕ್ರೌರ್ಯ,ಅಬ್ಬರಗಳಿಗೆ ಪ್ರಸಿದ್ಧ. ಬಡಗು ತಿಟ್ಟು ಶೃಂಗಾರ, ಲಾಲಿತ್ಯ
ಗಳಿಗೆ ಪ್ರಸಿದ್ಧ. ತುಳು ಮತ್ತು ಕನ್ನಡ ಭಾಷೆಗಳ ಪ್ರಸರಣಕ್ಕೆ ಯಕ್ಷಗಾನದ
ಮತ್ತು ತಾಳಮದ್ದಳೆಯ ಕೊಡುಗೆ ಅನನ್ಯ.
ತಾಳಮದ್ದಳೆ –ಯಕ್ಷಗಾನದ ವಾಚಿಕ ಪ್ರಕಾರ. ಮಾತು ಹಾಗೂ ಆಂಗಿಕಾಭಿನಯಗಳಿಂದ
ಜನಾಕರ್ಷಣೆ ಪಡೆದ ಕಲೆ. ಆದ್ದರಿಂದ ಅದನ್ನು ದೃಶ್ಯ-ಶ್ರಾವ್ಯ ಸಮನ್ವಿತ ಕಲೆ
ಎಂದು ಕರೆಯಬಹುದು.ನಮ್ಮ ಸಂಸ್ಕೃತಿ, ಪುರಾಣ ಪರಿಚಯ, ಜನಪದ ಹಾಗೂ
ಜೀವನ ಮೌಲ್ಯಗಳ ಅರಿವು ಯಕ್ಷಗಾನದಿಂದ ಮಾತ್ರ ಸಾಧ್ಯ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s