Uncategorized

ಧನ್ವಂತರಿ.

೧.ಅತ್ತಿ ಹಣ್ಣು ರಕ್ತ ಹೀನತೆಯನ್ನು ಸರಿಗೊಳಿಸುವುದು.
೨. ಕಿತ್ತಳೆ ಹಣ್ಣು ಅಥವಾ ಅದರ juice ಸೇವಿಸುತ್ತಿದ್ದರೆ
ತ್ವಚೆಯ ಬಣ್ಣ ಉತ್ತಮ ಗೊಳ್ಳುತ್ತದೆ. ಕೂದಲು, ಕಣ್ಣುಗಳಿಗೂ
ಹಿತ.
೩. ಕರಬೂಜ ಹಣ್ಣುಗಳ ನಿಯಮಿತ ಸೇವನೆಯಿಂದ ಕಣ್ಣುಗಳ
ದೃಷ್ಟಿ ಸುಧಾರಿಸುತ್ತದೆ.
೪. ಬೆಂಡೆ ಕಾಯಿಯು ನಾರಿನಂಶವನ್ನು ಹೊಂದಿದ್ದು ಅದರ
ನಿಯಮಿತ ಸೇವನೆಯಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ.
೫. ಆಹಾರದಲ್ಲಿ ಮೆಂತ್ಯ ಸೊಪ್ಪಿನ ನಿಯಮಿತ ಸೇವನೆಯಿಂದ
ರಕ್ತದ ಉತ್ಪಾದನೆ ಹೆಚ್ಚುತ್ತದೆ.
೬. ಗೋಧುಮಶಾಲಿ ಅಕ್ಕಿ ಮಧುಮೇಹಿಗಳಿಗೆ ಅತಿ ಹೆಚ್ಚು ಉಪಯುಕ್ತ.
ಮಲಬದ್ಧತೆ, ulser , ಕರುಳು ಹುಣ್ಣಿನ ರೋಗ,ಮೂಲವ್ಯಾಧಿ,ಆಹಾರದ
ಅಲರ್ಜಿ ಗಳನ್ನು ನಿಯಂತ್ರಿಸುತ್ತದೆ. ಹೃದಯ ರೋಗವನ್ನೂ ನಿವಾರಿಸುತ್ತದೆ.
೭. ಒಂದು ಬಾಳೆಹಣ್ಣಿಗೆ ಅರ್ಧ ಚಮಚ ಜೇನುತುಪ್ಪ ಬೆರೆಸಿ ಪ್ರತಿದಿನ
ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ.
೮. ಆಹಾರದಲ್ಲಿ ಇಂಗಿನ ನಿಯಮಿತ ಬಳಕೆಯು ಮಧುಮೇಹವನ್ನು
ನಿಯಂತ್ರಣದಲ್ಲಿ ಇರಿಸುತ್ತದೆ.
೯. ಬಿದ್ದು ಗಾಯವಾಗಿರುವ ಜಾಗದಲ್ಲಿ ಪಪ್ಪಾಯಿ ಎಲೆಯನ್ನು ಚೆನ್ನಾಗಿ
ಅರೆದು ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ.
೧೦. ದೊಡ್ಡಪತ್ರೆಯ ಎಲೆಹಾಕಿ ಮಾಡಿದ ಚಟ್ನಿ ಮೂತ್ರದ ಕಲ್ಲು
ಕರಗಲು ಸಹಕಾರಿ.
೧೧. ಕರಿಬೇವು-ಮಕ್ಕಳಲ್ಲಿ ಹಲ್ಲು ಬರುವುದು ತಡವಾಗಿದ್ದರೆ ಬೇಗ
ಬರಲು ಉಪಯುಕ್ತ.
೧೨. ಒಂದು ಚಮಚ ಕೊತ್ತಂಬರಿ ಸೊಪ್ಪಿನ ರಸಕ್ಕೆ ಅರ್ಧ ಚಮಚ
ಜೇನುತುಪ್ಪ ಬೆರೆಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ
ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
೧೩. ಹಸಿ ಶುಂಠಿಯ ರಸವನ್ನು ಸ್ವಲ್ಪ ಬಿಸಿಮಾಡಿ ಕುಡಿಯುವುದರಿಂದ
ಎದೆ ಉರಿತ ಶಮನವಾಗುತ್ತದೆ.
೧೪. ವೀಳ್ಯದೆಲೆಯಲ್ಲಿ ೩-೪ ಲವಂಗಗಳನ್ನಿಟ್ಟು ಜಗಿದು ತಿಂದರೆ
ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.
೧೫. ಜೇನುತುಪ್ಪದ ದ್ರಾವಣವನ್ನು ಅಂಗೈಗಳಿಗೆ ಹಚ್ಚಿಕೊಂಡು
ಮಾಲಿಶ್ ಮಾಡಿದರೆ ಅಂಗೈಗಳು ಸುಕ್ಕು ಗಟ್ಟುವುದನ್ನು
ತಡೆಗಟ್ಟುತ್ತದೆ.
ಮೂಲ :ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s