Uncategorized

ಚಿಂತನ.

೧. ಸಾವು ಎಲ್ಲರಿಗೂ ಬರುತ್ತದೆ. ಆದರೆ ಸಾಯಲು ಯಾರೂ ತಯಾರಿಲ್ಲ.
ಊಟ ಎಲ್ಲರಿಗೂ ಬೇಕು. ಆದರೆ ಬೇಸಾಯ ಮಾಡಲು ಯಾರೂ ತಯಾರಿಲ್ಲ.
ಹಾಲು ಎಲ್ಲರಿಗೂ ಬೇಕು. ಆದರೆ ಹಸು ಸಾಕಲು ಯಾರೂ ತಯಾರಿಲ್ಲ.
ನೀರು ಎಲ್ಲರಿಗೂ ಬೇಕು. ಆದರೆ ಅದನ್ನು ಉಳಿಸಲು ಯಾರೂ ತಯಾರಿಲ್ಲ.
ನೆರಳು ಎಲ್ಲರಿಗೂ ಬೇಕು. ಆದರೆ ಗಿಡ, ಮರ ನೆಡಲು ಹಾಗೂ ಬೆಳೆಸಲು
ಯಾರೂ ತಯಾರಿಲ್ಲ. ಸೊಸೆ ಎಲ್ಲರಿಗೂ ಬೇಕು. ಆದರೆ ಹೆಣ್ಣು ಉಳಿಸಲು
ಯಾರೂ ತಯಾರಿಲ್ಲ. ಮಕ್ಕಳನ್ನು ಸಾಕಲು ತಾಯಿ ಎಲ್ಲರಿಗೂ ಬೇಕು.
೨. ಮರದ ಬೇರು ಆಳಕ್ಕಿಳಿದಷ್ಟೂ ಬಿರುಗಾಳಿಯಿಂದ ಅದಕ್ಕೇನೂ ಹಾನಿ
ಆಗದಂತೆ. ಬಾಲ್ಯದ ದಿನಗಳಲ್ಲೇ ಸಂಸ್ಕೃತಿ ನಿಷ್ಠೆಯು ಬಲವಾದಷ್ಟೂ
ಅವರಿಗೆ ಆ ರೀತಿಯ ವಿಕೃತಿಯ ಧಾಳಿಯಿಂದ ಹಾನಿಯೇನೂ ಆಗದು.
೩. ಪ್ರೀತಿ ಹಂಚಿಕೊಳ್ಳಲು ಮುಗ್ಧ ಮನಸ್ಸು ಸಾಕು; ಆದರೆ ನೋವು
ಹಂಚಿಕೊಳ್ಳಲು ಶುದ್ಧ ಮನಸ್ಸು ಬೇಕು.
೪.ಪ್ರೀತಿ ಎಂಬ ಬೆಂಕಿಯ ಮುಂದೆ ಕಲ್ಲಿನ ಮೂರ್ತಿಯಾಗುವುದಕ್ಕಿಂತ
ಕರ್ಪೂರದ ಗೊಂಬೆಯಾಗು.
೫. ಸಣ್ಣ ಗುಳಿಗೆಗಳು ದೊಡ್ಡವ್ಯಾಧಿಗಳನ್ನು ಗುಣಪಡಿಸುವುದಿಲ್ಲವೇ ?
ಆನೆ ಬಹಳ ದೊಡ್ಡದು. ಆದರೆ ಅದು ಅಂಕುಶಕ್ಕೆ ವಶವಾಗುತ್ತದೆ.
ಅಂಕುರವು ಆನೆಯಷ್ಟು ದೊಡ್ಡದಿದೆಯೇ ?
ದೀಪವು ಪ್ರಜ್ವಲಿಸಿ ಬೆಳಗಿದಾಗ ಕತ್ತಲೆ ನಾಶವಾಗುತ್ತದೆ. ಆ ದೀಪವು
ಕತ್ತಲೆಯಷ್ಟು ದೊಡ್ಡದಾಗಿದೆಯೇ ?
ಪರಿಹಾರ ಸಾಧನ ಸಣ್ಣದಿದೆಯೆಂದು ನಾವು ಅದನ್ನು ಉಪೇಕ್ಷಿಸಬಾರದು.
ಪರಿಮಾಣಕ್ಕೂ ಪರಿಹಾರ ಸಾಮರ್ಥ್ಯಕ್ಕೂ ಸಂಬಂಧವಿಲ್ಲ.
ಸಣ್ಣದೆಂದು ತಿರಸ್ಕರಿಸುವಂತಿಲ್ಲ. ಒಂದು ಸಣ್ಣ ಕಲ್ಲು ದೊಡ್ಡ ತೇರನ್ನೇ
ನಿಲ್ಲಿಸಬಲ್ಲುದು. ಜೀವನದಲ್ಲಿ ಸಮಸ್ಯೆಗಳು ಬಂದಾಗ ಅವು ಬೆಟ್ಟದಂತೆ
ನಮಗೆ ಕಾಣಿಸುತ್ತವೆ. ಆದರೆ ಅದರ ಪರಿಹಾರ ಒಂದು ಸಣ್ಣ ಉಪಾಯದ
ಲ್ಲಿರಬಹುದೆಂದು ನಮಗೆ ಆಗ ಹೊಳೆಯುವುದಿಲ್ಲ. ಈ ಪ್ರವೃತ್ತಿಗೆ ಉಪಾಯದ
ಶಕ್ತಿಯ ಪರಿಜ್ಞಾನದ ಅಭಾವವೇ ಕಾರಣ. ———–ರಾಮಾನುಜಂ.
೬. ಯಾವ ವ್ಯಕ್ತಿಯು ನಿಮ್ಮಿಂದ ಅದೆಷ್ಟೇ ಬೇಸರವಾದರೂ ಅದನ್ನು
ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಮತ್ತೆ ಮೊದಲಿನ ತರಹ ನಗುತ್ತಾ
ಪ್ರೀತಿಯಿಂದ ಮಾತನಾಡುತ್ತಾರೋ ಆ ವ್ಯಕ್ತಿಯೇ ನಿಮ್ಮನ್ನು
ತುಂಬಾ ಇಷ್ಟ ಪಡುವ ವ್ಯಕ್ತಿ.
೭. ಕಾಡುವ ಬಡತನ ನಾಳೆ ಹೋಗಬಹುದು. ಇಲ್ಲದ ಸಿರಿತನ ಮುಂದೆ
ಬರಬಹುದು. ಆದರೆ ಒಮ್ಮೆ ಹೋದ ನಿಜವಾದ ಪ್ರೀತಿ ಮತ್ತೆ ಬರುವುದಿಲ್ಲ.
ಅದಕ್ಕೆ ನಿಮ್ಮ ಸಿಟ್ಟಿನ ಮೇಲೆ ತಾಳ್ಮೆ ಮುಖ್ಯ. ಸಿಟ್ಟಿನಲ್ಲಿ ಮತ್ತು ಅಹಂಕಾರದಲ್ಲಿ
ತೆಗೆದುಕೊಂಡ ನಿರ್ಧಾರ ನಿಮ್ಮ ಜೀವನದ ಅತ್ಯಮೂಲ್ಯವಾದ ಸಂಬಂಧಗಳು
ಕಳೆದು ಹೋಗುವವು.
೮. ”ಮರೆವು” ಎಂಬುದು ದೇವರು ನಮಗೆ ಕೊಟ್ಟಿರೋ ಒಂದು ಅದ್ಭುತವಾದ
ವರ.ಸತ್ತು ಹೋದವರನ್ನೇ ಮರೆತು ಬದುಕ್ತೀವಿ ಅಂದ್ಮೇಲೆ ಬಿಟ್ಟು ಹೋದವರನ್ನು
ಮರೆತು ಬದುಕಕ್ಕಾಗಲ್ವಾ ?
೯. ಅತಿಯಾಗಿ ಪ್ರೀತಿಸುವವರಿಗೆ ಸಿಗುವುದು ಮಿತಿಯಿಲ್ಲದಷ್ಟು ನೋವು ಮತ್ತು
ನೆನಪುಗಳು ಮಾತ್ರ.
೧೦. ಮನುಷ್ಯನಿಗೆ ಮನುಷ್ಯ ಕೊಡುವ ಅತಿ ದೊಡ್ಡ ಉಡುಗೊರೆ ಎಂದರೆ
ಪ್ರೀತಿ,ವಿಶ್ವಾಸ, ಗೌರವ ಹಾಗೂ ನಂಬಿಕೆ. ಇದು ಹಣದಿಂದ ಖರೀದಿಸಿ
ಕೊಡುವುದಲ್ಲ. ನಮ್ಮ ಹೃದಯದಿಂದ ಕೊಡುವುದು.
ಮೂಲ:Face Book and other sources)

 

2 thoughts on “ಚಿಂತನ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s