Uncategorized

ಮಾತನಾಡುವ ಕಲೆ.

ಮಾತು ಬೇರೆ ಮಾತುಗಾರಿಕೆ ಬೇರೆ.
ಎಲ್ಲಿ ಏನನ್ನು ಮಾತನಾಡಬೇಕು, ಎಷ್ಟು ಮಾತನಾಡ ಬೇಕು,
ಹೇಗೆ ಮಾತನಾಡ ಬೇಕೆಂಬ ಪರಿಜ್ಞಾನವೇ ಮಾತನಾಡುವ ಕಲೆ.
ಒಂದು ಸವಿ ಮಾತಿನಲಿ ವಿಶ್ವವನ್ನು ಸೃಷ್ಟಿಸಿಹ ಬೊಮ್ಮಗಿಹ
ಶಕ್ತಿಯಿದೆ. ಬಿರುನುಡಿಯ ಬಸಿರಿನಲಿ ಘೋರಾಂಧಕಾರವಿದೆ.
ಒಂದೇ ಒಂದು ಮರದಿಂದ ಸಾವಿರಾರು ಬೆಂಕಿ ಕಡ್ಡಿಗಳನ್ನು
ತಯಾರಿಸಬಹುದು. ಆದರೆ ಒಂದೇ ಒಂದು ಬೆಂಕಿಕಡ್ಡಿಯಿಂದ
ಸಾವಿರಾರು ಮರಗಳನ್ನು ಸುಟ್ಟು ಹಾಕಬಹುದು. ಅಂತೆಯೇ
ಒಂದು ಕಿಡಿ ಕಾಡನ್ನು ಮಾತ್ರ ಸುಡಬಲ್ಲುದು. ಆದರೆ ಒಂದು
ಕೆಟ್ಟನುಡಿ, ಕಾಡನ್ನು, ನಾಡನ್ನು ಎರಡನ್ನೂ ಸುಡಬಲ್ಲುದು.
ಅಂತೆಯೇ ಎಲ್ಲಿ ನಮ್ಮ ಮಾತುಗಳಿಗೆ ಬೆಲೆ ಇಲ್ಲವೋ, ಅಲ್ಲಿ
ಮಾತನಾಡಲೇ ಬಾರದು. ಮಾತ್ರವೇ ಅಲ್ಲ, ಗೊತ್ತಿಲ್ಲದ
ವಿಷಯಗಳನ್ನು ಮಾತನಾಡ ಬಾರದು. ಇತರರನ್ನು ಕೇಳುವ
ಸಹನೆಯೂ ನಮಗಿರಬೇಕು.
”ಮಾತಿನಿಂ ನಗೆನುಡಿಯು, ಮಾತಿನಿಂ ಹಗೆ ಹೊಲೆಯು,
ಮಾತಿನಿಂ ಸರ್ವ ಸಂಪದವು, ಲೋಕಕ್ಕೆ ಮಾತೆ ಮಾಣಿಕ್ಯವು” -ಸರ್ವಜ್ಞ.
”ನುಡಿದರೆ ಮುತ್ತಿನ ಹಾರದಂತಿರಬೇಕು;
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು;
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು;
ನುಡಿದರೆ ಲಿಂಗವು ಮೆಚ್ಚಿ ಅಹುದಹುದು ಎನುತಿರಬೇಕು”
-ಜಗಜ್ಯೋತಿ ಬಸವಣ್ಣ.
ಊಟ ಬಲ್ಲವಗೆ ರೋಗವಿಲ್ಲ ;ಮಾತು ಬಲ್ಲವಗೆ ಜಗಳವಿಲ್ಲ.
-ಕನ್ನಡ ಗಾದೆ .
ಮಾತುಗಳು ಅತಿಯಾಗಬಾರದು; ಆತುರದಲ್ಲಿರಬಾರದು;
ಅಸಂಬದ್ಧವಾಗಿರಬಾರದು;ಅನಾವಶ್ಯಕವಾಗಿರಬಾರದು;
ಕಟುವಾಗಿರಬಾರದು;ಕೃತಕವಾಗಿರಬಾರದು;ಕರ್ಕಶವಾಗಿರಬಾರದು.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s