Uncategorized

ಕನ್ನಡ ಸೌರಭ.

೧.ಪ್ರ :ಅಮಾವಾಸ್ಯೆ ೧೨ ಗಂಟೆ. ಒಂದೂ ಬೀದಿ ದೀಪವಿಲ್ಲ. ಆ ಹೊತ್ತಿನಲ್ಲಿ ೨ ಲಾರಿಗಳು ಒಂದು ಸೇತುವೆಯ ಮೇಲೆ ದೀಪವಿಲ್ಲದೆ ಎದುರು ಬದುರಾಗಿ ಹೋದವು. ಆದರೆ ಡಿಕ್ಕಿ ಹೊಡೆಯಲಿಲ್ಲ. ಹೇಗೆ ? ಉ:ಮಧ್ಯಾಹ್ನ ೧೨ ಘಂಟೆಯಾದ್ದರಿಂದ. ೨. ಗೌರಿಗೇನು ಗೊತ್ತು ಗಂಡಸಿನ ದುಃಖ ? ಹಿಮಗಿರಿಯ ಮಗಳು ಗೌರಿಗೂ ಗೊತ್ತಾಗಲಿಲ್ಲ ಗಂಡಸಿನ ದುಃಖ. ಇಲ್ಲದಿದ್ದರೆ ಗಂಡನ ಮಾತು ಮೀರಿ ಅಪ್ಪನ ಮನೆಗೆ ಹೋಗಿ, ಬೆಂಕಿಗೆ ಹಾರಿ ಅಷ್ಟೊಂದು ರಾದ್ಧಾಂತ ಮಾಡುತ್ತಿದ್ದಾಳಾ ? ೩. ಜಗತ್ಪ್ರಸಿಧ್ಧ, ಪ್ರತಿಭಾವಂತ, ಜನಪ್ರಿಯ… Continue reading ಕನ್ನಡ ಸೌರಭ.

Uncategorized

ದೂರುವವರು ದೇವರಿಂದ ದೂರವೇ ಉಳಿಯುತ್ತಾರೆ.

''ತುಂಬೆ ಹೂವಿನ ಮೇಲೆ ಶಿವನಿಗೇಕೆ ಒಲವು ?'' ಎಂಬ ಬಗ್ಗೆ ಕಥೆ ಇಂತಿದೆ: ಒಮ್ಮೆ ಪರಮೇಶ್ವರ ಆಕಾಶದಲ್ಲಿ ಹೋಗುತ್ತಿದ್ದಾಗ ಎತ್ತರದ ತೆಂಗಿನ ಮರ ಕಣ್ಣಿಗೆ ಬಿತ್ತು . ದೇವರು ''ಹೇಗಿದ್ದೀಯ'' ಎಂದಾಗ ತೆಂಗಿನ ಮರ ''ನೀನು ನನ್ನನ್ನು ಎತ್ತರವಾಗಿ ಸೃಷ್ಟಿಸಿದ್ಧೀಯಾ ! ಹಾಗೇ ಸಮಸ್ಯೆಗಳನ್ನೂ ಕೊಟ್ಟಿದ್ದೀಯ !ಎತ್ತರದಲ್ಲಿರುವ ಕೊಂಬೆಗಳಿಗೆ ಕೆಳಗಿರುವ ಬೇರುಗಳಿಂದ ನೀರು ಹೊರುವುದು ಕಷ್ಟ. ನಾನ್ಯಾರಿಗೂ ನೆರಳನ್ನು ಕೊಡಲಾರೆ. ಸಿಡಿಲು ಬಡಿದರೆ ಮೊದಲು ತಗಲುವುದು ನನಗೇ '' ಎಂದು ಕಷ್ಟಗಳ ಪಟ್ಟಿಯನ್ನು ಮುಂದಿಟ್ಟಿತು. ಮುಂದೆ ಕಾಣಿಸಿದ… Continue reading ದೂರುವವರು ದೇವರಿಂದ ದೂರವೇ ಉಳಿಯುತ್ತಾರೆ.

Uncategorized

ಚಿಂತನ.

೧. ವಿವಿಧ ಧರ್ಮ,ಮತ ಗಳು ವಿವಿಧ ದೀಪಗಳಿದ್ದಂತೆ. ಬೆಳಕು ಒಂದೇ. ೨. ಸೇವೆ ಗುರುತಿಸುವಿಕೆಗಾಗಿ ಸಲ್ಲದು. ಹೃದಯ ಶ್ರೀಮಂತಿಕೆಯಿಂದ ಮಾಡಬೇಕು. ೩. ಗುಬ್ಬಿ ನಮ್ಮ ದೇಶದ ಪುಟ್ಟ ಇರುವಿಕೆಯ, ಕ್ಷೀಣ ಧ್ವನಿಯವರ ಪ್ರತಿನಿಧಿ ಎನ್ನ ಬಹುದು. ೪. ''ಮಣ್ಣು ತಿಂದು ಹಣ್ಣು ಕೊಡುವ ಮರ'' ಪರೋಪಕಾರಿ. ಪಣೋಲಿ ಮರ ಹೂ ಬಿಟ್ಟರೆ ಅದು ದುರ್ಭಿಕ್ಷೆಯ ಸಂಕೇತವೆಂದು ಭಾವಿಸಿ ಅದನ್ನು ಕಡಿದುರುಳಿಸುತ್ತಾರೆ. ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಹೂ ಬಿಡುವ ಪಣೋಲಿಮರ ತಾನಾಗಿ ಸತ್ತರೆ ಒಳ್ಳೆಯದಲ್ಲ ಎನ್ನುತ್ತಾರೆ. ''ಮಗ ಹುಟ್ಟಿ… Continue reading ಚಿಂತನ.

Uncategorized

ಚಿಂತನ.

೧.ಸತ್ಯ ಎಂದರೇನು ಎನ್ನುವ ವಿಚಾರದಲ್ಲಿ ಹಲವರಲ್ಲಿ ಗೊಂದಲವಿದೆ. ಸುಳ್ಳು ಹೇಳದೇ ಇರುವುದನ್ನು ಸತ್ಯ ಎಂದು ತಿಳಿದವರೇ ಹೆಚ್ಚು. ಆದರೆ ಸತ್ಯ ಎನ್ನುವ ಪದಕ್ಕೆ ವಿಶಾಲ ಅರ್ಥವಿದೆ. ಈ ಸೃಷ್ಟಿಯ ಮೂಲವನ್ನು ಸತ್ಯ ಎಂದು ಕರೆಯಲಾಗಿದೆ. ಆದರೆ, ಸೃಷ್ಟಿಯ ಅಂತ್ಯವೂ ಸತ್ಯವೇ ಆಗಿದೆ. ಸತ್ಯ ಮತ್ತು ಅಸತ್ಯಗಳು ಒಂದೇ ಮೂಲವುಳ್ಳವಾಗಿದ್ದು,ಕೇವಲ ಸಂದರ್ಭವನ್ನು ಹೊಂದಿಕೊಂಡು ಸತ್ಯ ಅಥವಾ ಸುಳ್ಳು ಎಂದು ಗುರುತಿಸಲ್ಪಡುತ್ತದೆ. ಕೆಲವು ಸಂದರ್ಭದಲ್ಲಿ ಸತ್ಯವನ್ನಾಡುವುದು ಅನಾಹುತವೊಂದಕ್ಕೆ ಕಾರಣವಾಗಬಹುದು. ಆಗ ನಿಜವನ್ನು ಮರೆಮಾಚುವುದೇ ಅರ್ಥಪೂರ್ಣ. ವಸ್ತುಸ್ಥಿತಿಯ ಇತಿಮಿತಿಯಲ್ಲಿ ''ನಾವು ಏನನ್ನು… Continue reading ಚಿಂತನ.

Uncategorized

ಕನ್ನಡ ಸುಭಾಷಿತಗಳು.

೧.ಜೀವನದಲ್ಲಿ ಸಮಸ್ಯೆಗಳು ಮಳೆಯ ಹನಿಗಳಿದ್ದಂತೆ. ಅದು ನಿಧಾನವಾಗಿ ಬರಲಿ ಅಥವಾ ರಭಸದಿಂದ ಬರಲಿ ಆತ್ಮ ವಿಶ್ವಾಸವೆಂಬ ಕೊಡೆ ನಮ್ಮಲ್ಲಿ ಇರಬೇಕು ಅಷ್ಟೆ. ೨. ಕುದಿಯುವ ನೀರಿನಲ್ಲಿ ಪ್ರತಿಬಿಂಬ ನೋಡಲು ಸಾಧ್ಯವಿಲ್ಲ. ಹಾಗೆಯೇ ಮನಸ್ಸು ಸಿಟ್ಟಿನಿಂದ ಕುದಿಯುತ್ತಿರುವಾಗ ಸರಿಯಾಗಿ ಯೋಚಿಸಲು ಆಗುವುದಿಲ್ಲ. ಆದ್ದರಿಂದ ಮನಸ್ಸನ್ನು ತಿಳಿನೀರಿನಂತೆ ತಿಳಿಯಾಗಿಸಿ ಸಮಾಧಾನದಿಂದ ಇಟ್ಟುಕೊಳ್ಳಬೇಕು. ೩. ಯಾರ ಎದುರು ಮನಃ ಸ್ಫೂರ್ತಿ ನಗ್ತಿರೋ ಅವರ ಜೊತೆ ಇಡೀ ದಿನ ಕಳೆಯಬಹುದು. ಹಾಗೆಯೇ ಯಾರ ಜೊತೆ ಮನಸ್ಸು ಬಿಚ್ಚಿ ಅಳ್ತಿರೋ ಅವರ ಜೊತೆ ಇಡೀ… Continue reading ಕನ್ನಡ ಸುಭಾಷಿತಗಳು.