Uncategorized

ಸ್ಥಳ ಪುರಾಣ.

೧. ಎಕ್ಕಾರು –ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಭ್ರಮರ
ರೂಪ ತಾಳಿ ವಧಿಸಿದ ಅರುಣಾಸುರನೆಂಬ ದುಷ್ಟ ಆದರೆ
ದಕ್ಷನಾಗಿದ್ದ ರಾಕ್ಷಸ ರಾಜನ ರಾಜಧಾನಿ, ನಂದಿನಿ ತಟದ
ಏಕಚಕ್ರಪುರವೇ ಎಕ್ಕಾರಾಗಿತ್ತು ಎಂಬುದು ಐತಿಹ್ಯ. ಇಲ್ಲಿ
ಶ್ರೀ ಕೊಡಮಣಿತ್ತಾಯ ದೈವದ ದೇವಸ್ಥಾನವಿದೆ.
೨. ”ಪಡು ತಿರುಪತಿ” ಖ್ಯಾತಿಯ ದೇವಳ -ಕಾರ್ಕಳ ಶ್ರೀ ವೆಂಕಟ
ರಮಣ ದೇವಳ.
೩. ಮಂಡ್ಯ -ರಾಜಕೀಯವನ್ನೇ ಉಂಡು ಹೊದೆಯುವ ಸಕ್ಕರೆಯ
ಗೂಡು. ಏಷ್ಯಾದ ಮೊದಲ ಜಲ ವಿದ್ಯುತ್ ಕೇಂದ್ರ ಶಿವನ
ಸಮುದ್ರದಲ್ಲಿದೆ.ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ
ದೇವಾಲಯ, ಬೃಂದಾವನ, ಶ್ರೀರಂಗ ಪಟ್ಟಣ, ಆದಿಚುಂಚನಗಿರಿ
ಮುಂತಾದ ಹತ್ತು ಹಲವು ಪ್ರವಾಸಿ ಮತ್ತು ಯಾತ್ರಾ ಸ್ಥಳಗಳಿಗೆ
ಪ್ರಸಿದ್ಧಿ ಪಡೆದಿದೆ.
೪. ಹಾಸನ –ಹೇಮಾವತಿ ಜೀವನದಿ. ಹಾಸನಾ೦ಬಾ ದೇವಾಲಯವಿದೆ.
ಬೇಲೂರು, ಹಳೇಬೀಡು,ಶ್ರವಣ ಬೆಳಗೊಳ, ಉಪಗ್ರಹ ನಿಯಂತ್ರಣ
ಕೇಂದ್ರ ಜಿಲ್ಲೆಯಲ್ಲಿದೆ. ೧೨ ನೇ ಶತಮಾನದ ವರ್ಷಕ್ಕೊಮ್ಮೆ ಮಾತ್ರ
ದರ್ಶನ ನೀಡುವ ಗ್ರಾಮ ದೇವತೆ ಹಾಸನಾ೦ಬ ದೇವಾಲಯದ
ಗರ್ಭ ಗುಡಿಯ ದೀಪ ವರ್ಷ ಪೂರ್ತಿ ಉರಿಯುತ್ತದೆ. ನಂದಿದರೆ
ರಾಜ್ಯಕ್ಕೆ ಮತ್ತು ನಗರಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ ಎಂದು ಅರ್ಚಕರ
ಮತ್ತು ಭಕ್ತರ ನಂಬಿಕೆ.
೫. ಕೈ ಎಂದರೆ ಜಲ; ಕಯ್ಯಾರು ಎಂದರೆ ಜಲದಿಂದ ಆವೃತವಾದ
ಊರು.
೬.ಉಪ್ಪಳ ಎಂದರೆ ಉಪ್ಪು ತುಂಬಿದ ಸ್ಥಳ.
೭. ಕಾಸರಗೋಡು -ಕಾಸರ (ಸಂಸ್ಕೃತ)ಅಂದರೆ ಕೆರೆಗಳ ಸಮೂಹ
ಎಂದರ್ಥ ಕಾಸರ ಎಂಬ ಆದಿವಾಸಿಗಳ ಸಾನ್ನಿಧ್ಯ ದಿಂದ
ಕಾಸರಗೋಡು ಪದ ಉತ್ಪತ್ತಿಯಾಯಿತೆಂದು ಕೆಲವರ ಅಭಿಪ್ರಾಯ.
ಕಾಸರ (ಕಾಡು ಕೋಣ )+ಕಾಡು =ಕಾಸರಕಾಡು =ಕಾಸರಗೋಡು
ಆಯಿತೆಂದು ಇನ್ನು ಕೆಲವರ ಅಭಿಪ್ರಾಯ. ಕಾಂಗೋಡು (ಎರಡು
ಕೋಟೆಗಳಿರುವ ಪ್ರದೇಶ )ಕಾಸರಗೋಡಾಗಿ ಬದಲಾಯಿತೆಂದು
ಪೊಳಲಿ ಶೀನಪ್ಪ ಹೆಗ್ಡೆಯವರು ಹೇಳುತ್ತಾರೆ.
೮. ಮಾನಸ ಸರೋವರ ಇರುವ ಕೈಲಾಸ ಪರ್ವತವು Tibet ವ್ಯಾಪ್ತಿ
ಯಲ್ಲಿದ್ದು, ಸರೋವರವು ೧೪,೮೬೨ ಅಡಿ ಎತ್ತರದಲ್ಲಿದೆ
9.ಕರಾವಳಿ ಕರ್ನಾಟಕ –Canara Bank, Syndicate Bank ,
Corporation Bank, Karnataka Bank, Vijaya Bank ಮೊದಲಾದ
ಪ್ರತಿಷ್ಠಿತ Bank ಗಳ ತವರೂರು -ಕರಾವಳಿ ಜಿಲ್ಲೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s