Uncategorized

ಕನ್ನಡ ಸೌರಭ.

೧. ಕಥೆಯೆಂದರೆ ”ಶಿಶು ವಶೀಕರಣ ಮಂತ್ರ ”.
ಕಥೆ – ನೀತಿ ಸಮರಸ ಪಾಕವಾಗಿದ್ದರೆ ನೀತಿ ಬೋಧೆ.
ಅನ್ಯಥಾ ನೀತಿಬಾಧೆ ಯಾಗಬಾರದು.
೨.ಭೂಮಿ, ನೀರು, ಗಾಳಿ, ಬೆಂಕಿ, ಆಕಾಶ ಇವು ಪಂಚ
ಭೂತಗಳು. ಸೂರ್ಯ, ಚಂದ್ರ,ಯಷ್ಟಾ (ಯಜ್ಞ ಮಾಡುವವನು )
ಈ ಮೂವರೂ ಸೇರಿದರೆ ಶಿವನ ಅಷ್ಟ ಮೂರ್ತಿಗಳೆಂದು ಕಲ್ಪನೆ.
೩. ಚಂದ್ರ –
”ಯಾರು ಕೊಟ್ಟರೋ ಬಾನಿಗೊಂದು ಬಂಗಾರದ ಮೆಡಲು”
-G.S.Shivarudrappa.
ಮಧುರ ಕವಿಗಳ ಸೃಷ್ಟಿಕರ್ತ–Keats.
ನಕ್ಷತ್ರಗಳ ರಾಣಿ , ನಾವಿಕನ ಗೆಳೆಯ –Wordsworth.
ಆಕಾಶದೊಳಗಪ್ಸರೆಯರ ಮಣಿ ಮಂಚ -ಗೋಕಾಕ.
ಮುಗಿಲ ತೀರದ ರಾಜ ನೌಕೆ. -ಪು. ತಿ. ನ.
ಪ್ರೇಮಿಗಳ ಸಖ.
ಬಾನ ಸರೋವರದಲ್ಲಿ ಹರಿಗೋಲು ಚಂದಿರ.
ಕಾವ್ಯಗಳ ಮಲ್ಲಿಗೆ ಹಂದರಕ್ಕೂ ತಿಂಗಳ ಬೆಳಕಿಗೂ
ಬಹುಕಾಲದ ಸ್ನೇಹ.
”ಚಂದ್ರ ಬಿಂಬದಲ್ಲಿ ತಾಯಿಗಣ್ಣಿನ ತುಳುಕಾಟ”ವನ್ನು
ಬೇಂದ್ರೆ ಕಂಡಿದ್ದಾರೆ.
”ರಜನಿಗಾ ಚಂದ್ರ೦ ಮಹಾ ಭೂಷಣಂ ”
”ಆಕಾಶದ ಕವಿ ಸಮ್ಮೇಳನಕ್ಕೆ ಅಧ್ಯಕ್ಷನಾಗಿದ್ದ ಪಂಚಮಿಯ ಚಂದ್ರ
ಜನರೆಲ್ಲಾ ಮಲಗಿದ್ದರೂ ಇಡೀ ರಾತ್ರೆ ಕೇಳಲಿಕೆ ನೆರೆದಿತ್ತು
ಚುಕ್ಕಿಗಳ ಜಾತ್ರೆ”.
ಬಾಲಚಂದ್ರನನ್ನು ಕಂಡ ಜೇಮ್ಸ್ ಬ್ಯಾರನ್ ಹೋಪ್ –”ನೆಲದೀ
ಕತ್ತಲ ಕೊಯ್ಯುವ ಕುಡುಗೋಲು ”ಎಂದು ಬಣ್ಣಿಸುತ್ತಾನೆ.
”ಮೇಲೆ ಸಗ್ಗದ ಬಳ್ಳಿ ಮನೆಯಲ್ಲಿ ಹೂವಿನಂತಹ ಚಂದಿರ ”-
William Blake.
ಬಾಗು ಚಂದ್ರನ ತೂಗುಮಂಚಕೆ ಬಾ ಚಕೋರಿ –ಕುವೆಂಪು.
”ದೇವರ ಪೆಪ್ಪರಮೆಂಟೇನಮ್ಮಾ ಗಗನದೊಳಲೆಯುವ ಚಂದಿರನು ”
”ಬೆಳಕಿಗೆ ಕತ್ತಲೆ ಕೊಟ್ಟಾಗ ಮುತ್ತು, ಮೂಡ್ಯಾನೋ ಚಂದಿರ ”-ಬೇಂದ್ರೆ.
”ತಾರೆ ಚೆಲ್ಲಿದ ಬೆಳ್ಳಿ ಬೀದಿಯಲ್ಲಿ ಶಶಿಯ ದಿಬ್ಬಣ”ವನ್ನು
ಬಣ್ಣಿಸಿದ್ದಾರೆ ವೀ. ಸೀ.
”ಚಿಕ್ಕೆಗಳ ಜೋಕಾಲಿ ಜೀಕುತಿಹ ಚಂದ್ರ ”
ಚಿನ್ನದ ಪಾತ್ರೆಯಂತೆ ಆಕಾಶದಲ್ಲಿ ಕಂಗೊಳಿಸುವ ತುಂಬು ಚಂದಿರ .
ಆ ಪಾತ್ರೆಯಲ್ಲಿ ತಂದ ನೊರೆಹಾಲನ್ನು ಕುಡಿದು ನಗುತ್ತಿರುವ
ಮಕ್ಕಳೋ ಎಂಬಂತೆ ಮಿನುಗುತ್ತಿರುವ ಅಸಂಖ್ಯಾತ ನಕ್ಷತ್ರಗಳು.
”ರಾಜ” ಎಂಬುದು ಚಂದ್ರನಿಗೆ ಹೆಸರು. ರಾಜಶೇಖರನೆನಿಸಿದ
ಶಿವನ ಜಟಾಜೂಟದಲ್ಲಿನ ಚಂದ್ರ, ಲೋಕಕ್ಕೆ ಬೆಳಕನ್ನೂ,
ತಂಪನ್ನೂ ಕೊಡುವ ಹಾಗೆ ಪ್ರಾಚೀನ ಕಾಲದ ರಾಜರು ಇದ್ದರು.
ಲೋಕಕ್ಕೆ ಶಿವಾನುಭವವನ್ನು ಉಂಟುಮಾಡುತ್ತಿದ್ದರು.
ಮೂಲ:ಸಂಗ್ರಹ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s