Uncategorized

ಕನ್ನಡ ಸಂಪದ.

೧. ಇತಿಹಾಸ–ವರ್ತಮಾನ ಕಾಲದ ಪ್ರಶ್ನೆಗಳಿಗೆ ಉತ್ತರಿಸುವ
ಶಕ್ತಿ ಇತಿಹಾಸಕ್ಕೆ ಇರುವುದೇ ಅದರ ಪ್ರಾಮುಖ್ಯತೆ.
ಇತಿಹಾಸದ ಬಗ್ಗೆ ನಮಗೆ ತಿಳಿದಿರುವ ಮಾಹಿತಿ ನಿರಂತರವಾಗಿ
ಬದಲಾಗುತ್ತಿರುತ್ತದೆ. ಹೊಸ ಆಧಾರಗಳು ನಮಗೆ ಸಿಗುತ್ತಾ ಹೋದಂತೆ
ಇತಿಹಾಸದ ದಿಕ್ಕು ಬದಲಾಗುತ್ತದೆ.
ಉದಾ:೧೯೨೦ ವರೆಗೆ ಭಾರತೀಯ ಇತಿಹಾಸ ವೇದಗಳ ಕಾಲದ
ನಾಗರಿಕತೆಯೊಂದಿಗೆ ಪ್ರಾರಂಭವಾಗುತ್ತದೆಂದು ತಿಳಿದಿದ್ದೆವು.
೧೯೨೧-೨೨ರ ಹೊತ್ತಿಗೆ ಹರಪ್ಪಾ ಅಥವಾ ಸಿಂಧೂ ಸಂಸ್ಕೃತಿ
ಬೆಳಕಿಗೆ ಬಂದಾಗ ಭಾರತೀಯ ಇತಿಹಾಸ ಸಾವಿರಾರು ವರ್ಷಗಳಷ್ಟು
ಹಿಂದೆ ಹೋಯಿತು.
೨. ಗೋವು – ಮನುಜ ಕುಲದ ತಾಯಿ ತನ್ನ ಮಗುವಿಗೆ ಮಾತ್ರ
ಹಾಲೂಡಿಸುತ್ತಾಳೆ. ಆದರೆ ಗೋವು ಇತರರ ಮಕ್ಕಳಿಗೆ ಹಾಲು
ನೀಡುತ್ತದೆ. ಗೋಮೂತ್ರ ಮತ್ತು ಗೋಮಯದಿಂದ ಭೂಮಿ
ಸತ್ತ್ವಯುತವಾಗಿ ಫಲವತಿಯಾಗಬಲ್ಲುದು. ಗೋವು ತೃಣ
ಸಮಾನವಾದ ಹುಲ್ಲನ್ನು ತಿಂದು ಅಮೃತೋಪಮವಾದ
ಹಾಲನ್ನು ನೀಡುತ್ತದೆ. ಆದರೆ ನಾವು ಈ ಹಾಲನ್ನು ಕುಡಿದು
ಹಾಲಾಹಲ ಸೃಷ್ಟಿಸುತ್ತೇವೆ. ಗೋವಧೆ ಸರ್ವಥಾ ಸಾಧುವಲ್ಲ.
ಗೋಮೂತ್ರದಲ್ಲಿ cancer ನ್ನು ಗುಣಪಡಿಸಬಲ್ಲ ಔಷಧಿ ಸತ್ತ್ವ
ವಿದೆ. ಗೋಮೂತ್ರದಿಂದ ವಿದ್ಯುತ್ ನಿರ್ಮಿಸಿ ಗಡಿಯಾರ
ನಡೆಸಲು ಸಾಧ್ಯ. ಹಿಂದೂ ಧರ್ಮಕ್ಕೆ ಗೋಮಾತೆ ಗೌರವದ
ಸಂಕೇತ.
೩. ಗಣಪತಿ ದ್ವೈಮಾತುರ. ಗಂಗೆ, ಗೌರಿ ಇಬ್ಬರಿಗೂ ಮಗ.
ಗೌರಿ ಅವನಿಗೆ ಆಕಾರ ಕೊಟ್ಟರೆ, ಗಂಗೆ ಚೇತನ ನೀಡಿದಳು.
ಶಿವ -ಶಕ್ತಿಯ ಸಂಯೋಜಿತ ರೂಪನಾದ ಗಣಪತಿಯದು
ಜಲತತ್ತ್ವ. ಗಣಪತಿಯ ಪ್ರತಿಷ್ಠೆ-ಆರಾಧನೆ ಹಾಗೂ ಜಲದಲ್ಲಿ
ವಿಸರ್ಜನೆ ಇತ್ಯಾದಿ ವೈದಿಕ ಪ್ರಕ್ರಿಯೆಗಳಿಗೆ ಇದು ಆಧಾರ.
ಬೇರೆ ಬೇರೆ ಕೋನಗಳಿಂದ ಜೀವನದ ಅರ್ಥವನ್ನು ಕಂಡು
ಕೊಳ್ಳುವ ವಿಭಿನ್ನ ಧರ್ಮಗಳೆಂಬ ಗಣಗಳಿಗೆ ಗಣಪತಿ ಧರ್ಮಾಧ್ಯಕ್ಷ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s