Uncategorized

ಕನ್ನಡ ಸೌರಭ.

ನಗು
ನಗುವಿಗೆ ಹಣ ನೀಡ ಬೇಕಿಲ್ಲ.
ಕೊಟ್ಟಷ್ಟು ಖಾಲಿ ಆಗುವುದಿಲ್ಲ.
ನಗು ಸಾಮಾಜಿಕ ಆಸ್ತಿ .
ಕೆಟ್ಟ ನಗು ವ್ಯಕ್ತಿಯ ಭವಿಷ್ಯವನ್ನೇ ಹಾಳು ಮಾಡುತ್ತದೆ.
ಮಂದಹಾಸ, ಅಟ್ಟಹಾಸ,ಮೊನಾಲಿಸಾ ನಗು (ನಿಗೂಢ ನಗು )
ವಿಕೃತ ನಗು, ವಿಕಟಾಟ್ಟಹಾಸ, ವ್ಯಂಗ್ಯ ನಗು, ಹುಚ್ಚು ನಗು ,
ಚುಚ್ಚುನಗು ಹೀಗೆ ನಗುವಿನಲ್ಲೂ ಎಷ್ಟೊಂದು ವಿಧಗಳಿವೆ !
೨. ನಮ್ಮ ಭಾರತದಲ್ಲಿ ”ಗ ” ಕಾರ ಗಳಿಗೆ ಬಹಳ ಪವಿತ್ರ ಸ್ಥಾನ
ಕೊಟ್ಟಿದ್ದಾರೆ. ಅವು ಯಾವುದೆಂದರೆ ಗಂಗಾ, ಗೀತೆ, ಗಾಯತ್ರಿ ,
ಗೋವು ಮತ್ತು ಗೋವಿಂದ. ಇವು ಐದನ್ನು ಸ್ಮರಣೆಯಲ್ಲಿಟ್ಟು
ಕೊಂಡರೆ ನಮ್ಮ ಸಂಸ್ಕೃತಿ ಉಳಿದೀತೆಂಬ ಭಾವನೆ ನಮ್ಮ
ಹಿರಿಯರದ್ದು.
೩. ಪಂಚ ಲಿಂಗಗಳು -ಆಚಾರ ಲಿಂಗ,ಗುರುಲಿಂಗ,ಶಿವಲಿಂಗ,
ಜಂಗಮ ಲಿಂಗ, ಪ್ರಸಾದ ಲಿಂಗ,
ಪಂಚ ಪರಮೇಷ್ಠಿಗಳು -ಅರ್ಹತ್,ಸಿದ್ಧ,ಆಚಾರ್ಯ,ಉಪಾಧ್ಯಾಯ,
ಸರ್ವ ಸಾಧುಗಳು.
ಪಂಚ ಕೋಶಗಳು -ಅನ್ನಮಯ, ಪ್ರಾಣಮಯ, ಮನೋಮಯ,
ವಿಜ್ಞಾನಮಯ,ಆನಂದಮಯ.
೪. ಕನ್ನಡಕ್ಕರ ಚೆನ್ನ। ಕನ್ನಡದ ನುಡಿ ಚೆನ್ನ।
ಕನ್ನಡಿಗರೊಡನಾಟ ಬಲು ಚೆನ್ನ।
ಇಲ್ಲೆ ಎತ್ತಿದೆ ಜನ್ಮ ।ಎನಗೇತರದು ಬನ್ನ ।
ಕನ್ನಡವೆ ಹಾಲನ್ನ ಏಕೆ ಅನ್ಯ ?
೫. ಅಪ್ರಿಯ ಸತ್ಯವನ್ನು ಹೇಳಬಾರದು. ಪ್ರಿಯವಾದ
ಅಸತ್ಯವನ್ನೂ ಹೇಳಬಾರದು. ಇದೇ ಸನಾತನ ಧರ್ಮ.
ತನ್ನಲ್ಲಿರುವ ಕೆಡುಕುಗಳ ಮೇಲೆ ಜಯ ಸಾಧಿಸುವುದೇ
ಮನುಷ್ಯನ ಗುರಿ. ಈ ರೀತಿ ವಿಜಯ ಸಾಧಿಸುವುದನ್ನು
ಮತ ನಮಗೆ ಕಲಿಸದಿದ್ದರೆ ಅದು ಏನನ್ನೂ ಕಲಿಸುವುದಿಲ್ಲ
ಎನ್ನ ಬೇಕಾಗುತ್ತದೆ.
ಮೂಲ :ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s