Uncategorized

ಅಧ್ಯಾತ್ಮ ಸಂಪದ.

೧. ನಮ್ಮ ಭೂಮಿ ಸೂರ್ಯನಿಂದ ೧೫೦ಮಿಲಿಯ ಕಿ.ಮೀ. ದೂರದಲ್ಲಿ
ಸೂರ್ಯನನ್ನು ಸುತ್ತುತ್ತಲೇ ಇದೆ. ಆ ಸೂರ್ಯನಾದರೋ ೬೦೦೦*C
ಮೇಲ್ಮೈ ಉಷ್ಣತೆ ಇರುವ ಉರಿಯುವ ಅನಿಲಗಳ ಬೃಹತ್ ಗೋಲ.
ಒಂದೊಮ್ಮೆ ಭೂಮಿಯೇ ಇನ್ನಷ್ಟು ಸಮೀಪದಲ್ಲಿರುತ್ತಿದ್ದರೆ ಅಥವಾ
ಸೂರ್ಯನ ಉಷ್ಣತೆಯೇ ಇನ್ನಷ್ಟು ಹೆಚ್ಚಾಗಿರುತ್ತಿದ್ದರೆ, ಸೂರ್ಯನ
ತಾಪ ತಾಳಲಾರದೆ ಜೀವಿಗಳೆಲ್ಲ ಬೆಂದು ಕರಟಿಯೇ ಹೋಗುತ್ತಿದ್ದವು.
ಹಾಗಲ್ಲದೆ ಭೂಮಿಯೇ ಇನ್ನಷ್ಟು ದೂರದಲ್ಲಿರುತ್ತಿದ್ದರೆ ಅಥವಾ
ಸೂರ್ಯನಉಷ್ಣತೆಯೇ ಇನ್ನಷ್ಟು ಕಡಿಮೆಯಾಗಿರುತ್ತಿದ್ದರೆ ಕೊರೆವ
ಚಳಿಯನ್ನು ತಾಳಲಾರದೆ ಜೀವಿಗಳೆಲ್ಲ ಮರಗಟ್ಟಿ ಚಿರುಟಿಯೇ
ಹೋಗುತ್ತಿದ್ದವು. ಮೊದಲ ಸಂದರ್ಭದಲ್ಲಿ ನೀರೆಲ್ಲ ಆವಿಯಾಗಿ
ಬಾಯಾರಿ ಬಸವಳಿಯಬೇಕಾದ ಪರಿಸ್ಥಿತಿ ಆದರೆ, ಎರಡನೇ ಸಂದರ್ಭದಲ್ಲಿ
ನೀರೆಲ್ಲ ಮಂಜುಗಡ್ಡೆಯಾಗಿ ಬಾಯಿಗೆ ಬರಲಾಗದ ಪರಿಸ್ಥಿತಿ. ಆದರೆ,
ಅಂತಹ ವೈಪರೀತ್ಯಗಳಿಗೆ ಅವಕಾಶವೀಯದೆ ಭೂಮಿಯಲ್ಲಿ ಜೀವಿಗಳ
ಬದುಕಿಗೆ ಹಿತಮಿತವಾದ ಶಾಖವಿದ್ದು,ನೀರೂ ಕುಡಿಯಲಾಗುವಂತೆ
ದ್ರವರೂಪದಲ್ಲೇ ಅಥವಾ ದ್ರವರೂಪಕ್ಕೆ ತರಲಾಗುವಂತೆಯೇ ಇರುವುದು
ವ್ಯವಸ್ಥಾಪಕನ ಕೈವಾಡ ಅಲ್ಲವೇ ?
೨. ನಮ್ಮ ಭೂಮಿಯ ವ್ಯಾಸ ೧೨,೭೫೦ ಕಿ.ಮೀ. ವಿಮೋಚನಾ ವೇಗ
೧೧ ಕಿ.ಮೀ./ಸೆ. ಒಂದೊಮ್ಮೆ ಈ ತೊಗಟೆಯ ದಪ್ಪ ಕಡಿಮೆಯಾಗಿರುತ್ತಿದ್ದಲ್ಲಿ
ಗುರುತ್ತ್ವಾಕರ್ಷಣ ಶಕ್ತಿ ಕಡಿಮೆಯಾಗಿ ವಿಮೋಚನಾ ವೇಗವೂ ಕುಸಿದು
ವಾತಾವರಣದಲ್ಲಿರುವ ಆಮ್ಲಜನಕವೆಲ್ಲ ಭೂಮಿಯಿಂದ ತಪ್ಪಿಸಿಕೊಂಡು
ಹೋಗಿ ಜೀವಿಗಳು ಬದುಕುವುದೇ ಅಸಾಧ್ಯವಾಗುತ್ತಿತ್ತು. ಹಾಗಾಗದಂತೆ
ಆಮ್ಲಜನಕವನ್ನು ವಾತಾವರಣದಲ್ಲಿ ಹಿಡಿದಿಟ್ಟುಕೊಳ್ಳುವಷ್ಟು ಗುರುತ್ತ್ವ
ಶಕ್ತಿ ಭೂಮಿಗಿರುವುದು ವ್ಯವಸ್ಥಾಪಕನ ಕೈವಾಡ ಅಲ್ಲವೇ ?
೩. ಭೂಮಿ ತನ್ನ ಅಕ್ಷದ ಸುತ್ತ ೨೪ ಗಂಟೆಗೊಮ್ಮೆ ಅಥವಾ ದಿನಕ್ಕೊಮ್ಮೆ
ತಿರುಗುವುದರಿಂದ ಹಗಲು ರಾತ್ರಿ ಗಳಾಗುತ್ತವೆ. ಆ ರೀತಿ ತಿರುಗುವಾಗಲೂ
ಅದು ೧೮೦೦ಕಿ.ಮೀ. /ಗಂ. ವೇಗದಲ್ಲಿ ತಿರುಗುತ್ತಿದೆ. ಈ ವೇಗವೇನಾದರೂ
ಕೇವಲ ೧೮೦ ಕಿ. ಮೀ. /ಗಂ. ಆಗಿರುತ್ತಿದ್ದಲ್ಲಿ ದಿನದ ಅವಧಿ ೨೪೦ ಗಂಟೆ ಆಗಿ
ಆ ಸುದೀರ್ಘ ಹಗಲಿನ ಬಿರು ಬಿಸಿಲನ್ನೂ ಸುದೀರ್ಘ ರಾತ್ರಿಯ ಕೊರೆವ
ಚಳಿಯನ್ನೂ ತಾಳಲಾರದೆ ಜೀವಿಗಳು ಕೊನೆಯುಸಿರೆಳೆಯುತ್ತಿದ್ದವು.
ಹಾಗಾಗದಂತೆ ದಿನಕ್ಕೊಮ್ಮೆ ಭೂಮಿ ಸೂಕ್ತ ವೇಗದಿಂದ ಪರಿಭ್ರಮಿಸುತ್ತಿರುವುದು
ವ್ಯವಸ್ಥಾಪಕನ ಕೈವಾಡವಲ್ಲವೇ ?
೪. ಭೂಮಿಯ ಅಕ್ಷವು ಪಥಕ್ಕೆಳೆದ ಲಂಬಕ್ಕೆ ೨೩ವರೆ ಡಿಗ್ರಿ ಮಾಲಿಕೊಂಡೇ
ಇರುವಂತೆ ಭೂಮಿ ಸೂರ್ಯನ ಸುತ್ತ ಬರುತ್ತಿದೆ. ಪರಿಣಾಮವಾಗಿ
ಋತು ಭೇದಗಳು ಉಂಟಾಗುತ್ತಿವೆ. ಬೇಸಿಗೆಯ ಬಿಸಿಲು ಕಳೆದು ಮಳೆ
ಸುರಿದು ಚಳಿ ಕೊರೆದು ಪುನಃ ಬೇಸಿಗೆ ಬರುತ್ತಿದೆ. ಒಂದೊಮ್ಮೆ ಈ ರೀತಿ
ಭೂಮಿ ಮಾಲಿ ಕೊಂಡಿರದೇ ಇರುತ್ತಿದ್ದಲ್ಲಿ ಆ ರೀತಿ ಆಗುತ್ತಲೇ ಇರಲಿಲ್ಲ.
ಕೆಲವೆಡೆ ಸದಾ ಬೇಸಗೆ , ಇನ್ನು ಕೆಲವೆಡೆ ಸದಾ ಮಳೆ, ಇತರೆಡೆ ಸದಾ
ಚಳಿ ಇರುತ್ತಿತ್ತು. ಆದರೆ ಹಾಗಾಗದಂತೆ ಹವಾಮಾನದ ಸಮತೋಲನವನ್ನು
ಕಾಪಾಡಿಕೊಂಡು ಬರಲಾಗಿರುವುದು ವ್ಯವಸ್ಥಾಪಕನ ಕೈವಾಡ ಅಲ್ಲವೇ ?
೫. ಭೂಮಿಯನ್ನು ಆವರಿಸಿ ಸುಮಾರು ೬೦೦ ಕಿ . ಮೀ. ಎತ್ತರದ ವರೆಗೂ
ವಾಯುಮಂಡಲವಿದೆ. ಅದರಲ್ಲೇ ಸೂರ್ಯ ವಿಕಿರಣದ ನೇರಳಾತೀತ
ಕಿರಣಗಳಿಂದರಕ್ಷಿಸುವ ಓಝೋನ್(ozone) ಪದರ ಕೂಡಾ ಇದೆ. ಅಷ್ಟು
ದಪ್ಪದ ವಾಯುವಿನ ರಕ್ಷಕ ಹೊದಿಕೆ ಇರುವುದರಿಂದ ದಿನ ದಿನವೂ
ಭೂಮಿಯೆಡೆಗೆ ಆಕರ್ಷಿಸಲ್ಪಡುತ್ತಿರುವ ಲಕ್ಷಾಂತರ ಉಲ್ಕೆಗಳು
ವಾತಾವರಣ ನೀಡುವ ಘರ್ಷಣೆಯಿಂದ ಉರಿದು ಸುಟ್ಟು ಭಸ್ಮವಾಗುತ್ತಿವೆ.
ಒಂದೊಮ್ಮೆವಾಯು ಮಂಡಲದ ಪದರವೇನಾದರೂ ತೆಳ್ಳಗಿರುತ್ತಿದ್ದರೆ,
ಓಜೋನ್ ಪದರವೂ ಇಲದಿರುತ್ತಿದ್ದರೆ, ಬೀಳುವ ಉಲ್ಕೆಗಳು ಉರಿಯುತ್ತಲೇ
ಭೂಮಿಗೆರಗಿ ಅನಾಹುತವನ್ನುಂಟು ಮಾಡುತ್ತಿದ್ದವು. ನೇರಳಾತೀತ
ಕಿರಣಗಳೂ ಸಲೀಸಾಗಿ ಭೂಮಿಯನ್ನು ಸೇರಿ ಜೀವಿಗಳ ಬದುಕಿಗೆ ಮಾರಕ
ಆಗುತ್ತಿದ್ದವು. ಹಾಗಾಗದಂತೆ ಜೀವಿಗಳೆಲ್ಲ ರಕ್ಷಿಸಲ್ಪಟ್ಟು ಸುರಕ್ಷಿತವಾಗಿರುವುದು
ವ್ಯವಸ್ಥಾಪಕನ ಕೈವಾಡ ಅಲ್ಲವೇ ?
೬. ಭೂಮಿಯ ಉಪಗ್ರಹವಾದ ಚಂದ್ರ ಭೂಮಿಯಿಂದ ೩,೮೪,೦೦೦ಕಿ. ಮೀ .
ದೂರದಲ್ಲಿದ್ದಾನೆ. ಒಂದೊಮ್ಮೆ ಆ ಚಂದ್ರನೇನಾದರೂ ಇದರ ಅರ್ಧಾ೦ಶದಷ್ಟು
ದೂರದಲ್ಲಿರುತ್ತಿದ್ದರೆ, ದಿನ ದಿನವೂ ಭರತ ಕಾಣಿಸುವ ಪ್ರದೇಶದಲ್ಲಿನ
ಭೂಮಿಯೆಲ್ಲ ಜಲಾವೃತವಾಗಿ ಜೀವಿಗಳೆಲ್ಲ ಜಲಸಮಾಧಿಯಾಗಿ ಬಿಡುತ್ತಿದ್ದವು.
ಪರ್ವತಗಳೆಲ್ಲ ಕೊಚ್ಚಿ ಹೋಗುತ್ತಿದ್ದವು. ಹಾಗಾಗದಂತೆ ಚಂದ್ರನ ಸ್ಥಾನ
ನಿಗದಿಯಾಗಿರುವುದು ವ್ಯವಸ್ಥಾಪಕನ ಕೈವಾಡ ಅಲ್ಲವೇ ?
೭. ಇನ್ನು ಭೂಮಿಯ ಜೀವ -ಜೀವನ ವಿಲಾಸ ವೈಭವಗಳಿಗೆಲ್ಲ ಪಾರವಿದೆಯೇ ?
ವಿವಿಧ ಆಕಾರ, ಬಣ್ಣ, ಗಾತ್ರ, ರುಚಿ, ಪರಿಮಳ, ಇಂಚರ,ಸೌಂದರ್ಯಗಳ
ಸಸ್ಯ, ಪ್ರಾಣಿ ಪ್ರಪಂಚ, ಹಾಗೂ ಫಲ -ಪುಷ್ಪ ವೈವಿಧ್ಯಗಳಿರುವುದು
ವ್ಯವಸ್ಥಾಪಕನ ಕೈವಾಡವೇ ಅಲ್ಲವೇ ?ಮೊಟ್ಟೆ ಇಡುವ ಸಲುವಾಗಿ
ಸಾವಿರಾರು ಕಿ. ಮೀ. ದೂರ ಚಲಿಸಿ ಪುನಃ ತವರು ನೆಲೆಯನ್ನೇ ತಲುಪುವ
ಸಲ್ಮಾನ್ ಮೀನಿಗಿರಲಿ, ಈಲ್ ಮಿನಿಗಿರಲಿ, ಉತ್ತರ ಧ್ರುವದಿಂದ ೪೦ಸಾವಿರ
ಕಿ. ಮೀ. ದೂರ ಚಲಿಸಿ ದಕ್ಷಿಣ ಧ್ರುವಕ್ಕೆ ವಲಸೆ ಹೋಗಿ ನಂತರ ಮೊದಲಿನ
ಪ್ರದೇಶಕ್ಕೇ ಹಿಂತಿರುಗುವ ಚೋಟುದ್ದದ ಟರ್ನ್ ಪಕ್ಷಿಗಿರಲಿ, ದಿಗ್ದರ್ಶನ
ಮಾಡಿ ದಾರಿ ತೋರುತ್ತಿರುವುದು ವ್ಯವಸ್ಥಾಪಕನ ಕೈವಾಡ ಅಲ್ಲವೇ ?
ಆ ವ್ಯವಸ್ಥಾಪಕ ಶಕ್ತಿಯನ್ನೇ ದೇವರು ಎಂದು ಕರೆದಲ್ಲಿ, ಯಾರಿಗೇ
ಆದರೂ ಈ ವ್ಯವಸ್ಥೆಗಳನ್ನು ಕಂಡಾಗ ದೇವರಲ್ಲಿ ನಂಬಿಕೆ ಬರದೇನು ?
ಮೂಲ :Seven reasons why a scientist believes in God -Readers
Digest ೧೯೪೯.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s