Uncategorized

ಸುಭಾಷಿತಗಳು.

೧.ಸಿಟ್ಟು ಬಾರದವನು ಕಡು ಮೂರ್ಖ; ಆದರೆ ಸಿಟ್ಟಿಗೇಳದವನು
ಕಡು ಜಾಣ.
೨. ಪರರನ್ನು ಅರಿತವನು ಜಾಣ. ತನ್ನನ್ನು ಅರಿತವನು ಜ್ಞಾನಿ.
೩. ”ಹರಕೆ ತೀರಿಸಲು ೧೨ ವರ್ಷದ ಅವಧಿ ” ಎಂಬ ಪ್ರತೀತಿ ಇದೆ.
೪. ರತ್ನದಿಂದ ಅಲಂಕೃತವಾದರೂ ಹಾವು ಭಯವನ್ನೇ
ಹುಟ್ಟಿಸುತ್ತದೆ.
೫. ದಡ್ಡರಾದರೂ ಧಾಂಡಿಗರಾಗಿರಬೇಕು.
೬. ಜೇನು ಹೂವಿನಲ್ಲಿದ್ದರೆ ಮಕರಂದ ಎನ್ನುತ್ತಾರೆ. ಗೂಡಿನಲ್ಲಿದ್ದರೆ
ಜೇನು ಎನ್ನುತ್ತಾರೆ.
೭. ನೊಂದು ಬಾಳುವ ಬದುಕಿಗೂ ಹೊಂದಿ ಬಾಳುವ ಬದುಕಿಗೂ
ಕಾರಣ ಮನೋಸ್ಥಿತಿ.
೮. ಒಳ್ಳೆಯ ಮಾತುಗಳನ್ನು ಆಡುವುದು ಸಹ ಉಪಾಸನೆಯಿದ್ದಂತೆ.
೯. ಉರಿಯೊಳಗಣ ಕರ್ಪೂರಕ್ಕೆ ಕರಿಯುಂಟೆ ಅಯ್ಯಾ ?
೧೦. ಸಜ್ಜನರಿಗೆ ತಲೆ ಬಾಗುವುದು ವಿನಯ; ದುರ್ಜನರೆದುರು
ತಲೆಯೆತ್ತಿ ನಿಲ್ಲುವುದು ಧೈರ್ಯ.
೧೧.ಸಾಹಿತ್ಯ , ಕವನ, ಕಲೆ ಮನುಷ್ಯನ ಸೃಜನಶೀಲ ಮುಖ ;
ಬದುಕಿನ ಗೊಂದಲ, ಸಂಕಟ ಪರಿಹರಿಸುವ ದಿವ್ಯ ಮಂತ್ರ.
೧೨. ನಾವು ಅನ್ಯರಿಂದ ವಂಚಿತರಾಗುವುದಿಲ್ಲ. ನಮ್ಮನ್ನು
ನಾವೇ ವಂಚಿಸಿಕೊಳ್ಳುತ್ತೇವೆ.
೧೩. ಕಾಡು ಉರಿಯಲು ಒಂದು ಕಿಡಿ ಬೇಕು ;ಸಮಾಜ
ಉರಿಯಲು ಒಂದು ದ್ವೇಷಾಗ್ನಿ ಸಾಕು.
೧೪. ನಾವು ಸಮಾನ ಅವಕಾಶಗಳನ್ನು ಸೃಷ್ಟಿಸಬಹುದು;
ಆದರೆ ಸಮಾನತೆ (ಎಲ್ಲರನ್ನೂ ಒಂದೇ ಹಂತಕ್ಕೆ ಮೊಟಕು
ಗೊಳಿಸುವುದು )ಯನ್ನಲ್ಲ. ಅದು ಎಂದಿಗೂ ಸಾಧ್ಯವಿಲ್ಲ.
೧೫. ಸಂಗಾತಿ ಇರದ ವಯಸ್ಸು,ಪ್ರೀತಿಯಿರದ ಮನಸ್ಸು ವ್ಯರ್ಥ.
೧೬. ಅಖಂಡ ಪ್ರಪಂಚಕ್ಕೆ ಶುದ್ಧ ಮಾನವೀಯ ದೀಕ್ಷೆ
ಕೊಡುವುದೇ ಸಾಹಿತ್ಯದ ಮೂಲಗುರಿ.
೧೭. ಹುಟ್ಟು, ಸಾವು ಗಳಿಂದ ಅತೀತವಾಗಿರುವ ಒಂದು
ತತ್ತ್ವವುಂಟು. ಇದನ್ನೇ ವೇದಾಂತ ದರ್ಶನವು ಬ್ರಹ್ಮ, ಆತ್ಮ
ಎಂದೆಲ್ಲ ಕರೆಯುವುದು.
೧೮. ಆಪತ್ತಿನಿಂದ ಪಡೆಯುವ ಅನುಭವವು ಯಾವ
ವಿದ್ಯಾಲಯದಲ್ಲೂ ಸಿಗಲಾರದು.
೧೯. ”ಲಿಂಗ” ಎಂಬ ಶಬ್ದದಲ್ಲಿನ ”ಲಿ ” ಕಾರವು ಲಯವನ್ನು ,
ಬಿಂದು(ಅನುಸ್ವಾರ =೦)ವು ಸ್ಥಿತಿಯನ್ನು ಮತ್ತು ”ಗ’ಕಾರವು
ಸೃಷ್ಟಿಯನ್ನು ಸೂಚಿಸುತ್ತವೆ. ಹೀಗೆ ”ಲಿಂಗ ”ವು ಜಗತ್ತಿನ
ಸೃಷ್ಟಿ, ಸ್ಥಿತಿ , ಲಯಗಳಿಗೆ ಕಾರಣವಾದುದು ಎಂದು
ಸೂಕ್ಷ್ಮಾಗಮ, ”ಲಿಂಗ ”ಶಬ್ದದ ನಿರ್ವಚನವನ್ನು ನೀಡಿದೆ.
೨೦. ನಮ್ಮ ಹೃದಯವೆಂಬ ಗ್ರಂಥವನ್ನು ಓದಲು ಕಲಿಯುವ
ತನಕ ಎಲ್ಲ ಗ್ರಂಥಗಳೂ ನಿರುಪಯೋಗಿ.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s