Uncategorized

ಧನ್ವಂತರಿ.

೧. ಕುದಿಸಿ ತೆಗೆದ ಮೃದು ಬಟಾಟೆಯನ್ನು ರೇಷ್ಮೆ ಬಟ್ಟೆಯಲ್ಲಿ
ಸುತ್ತಿಕಣ್ಣುಗಳ ಸುತ್ತಲೂ ಇಟ್ಟರೆ ಕಪ್ಪು ಕಲೆ ಮಾಯವಾಗುವುದು.
೨. ಮೆಂತೆಯ ಎಲೆಗಳನ್ನು ಅರೆದು ಗಾಯ ಅಥವಾ ಪೆಟ್ಟಾದ
ಸ್ಥಳದಲ್ಲಿ ಲೇಪಿಸಿದರೆ ಊತ, ಉರಿತ ಕಡಿಮೆಯಾಗುತ್ತದೆ.
೩. ಬಿಳಿ ದಾಸವಾಳದ ಹೂವಿನಿಂದ ತೆಗೆದ ರಸವನ್ನು ನಿಯಮಿತವಾಗಿ
ಸೇವಿಸುವುದರಿಂದ ಚರ್ಮರೋಗ ಹಾಗೂ ಮೊಡವೆಗಳನ್ನು
ದೂರಮಾಡಬಹುದು.
೪. ಟೊಮೇಟೊ ಹಣ್ಣಿನ ರಸದ ನಿಯಮಿತ ಸೇವನೆಯಿಂದ
ಕಣ್ಣಿನ ಚುರುಕುತನ ಹೆಚ್ಚುತ್ತದೆ.
೫. ೧೨೫ ಮಿ.ಲೀ . ಪಾಲಕ್ ಸೊಪ್ಪಿನ ರಸವನ್ನು ಪ್ರತಿದಿನ
೩ ಸಲ ಸೇವಿಸುವುದರಿಂದ ರಕ್ತ ಹೀನತೆಯ ತೊಂದರೆ ನಿವಾರಣೆ
ಯಾಗುತ್ತದೆ.
೬. ಜೇನುತುಪ್ಪದಲ್ಲಿ ಅರಶಿಣವನ್ನು ಕಲೆಸಿ ಹಚ್ಚಿ ಕೊಳ್ಳುವುದರಿಂದ
ಸುಟ್ಟ ಗಾಯ ಬೇಗ ಗುಣವಾಗುತ್ತದೆ.
೭. ಕುದಿಯುವ ನೀರಿಗೆ ಶುಂಠಿ ರಸ ಬೆರೆಸಿ ಸ್ವಲ್ಪ ಸ್ವಲ್ಪವೇ ಕುಡಿಯು
ವುದರಿಂದ ಭೇದಿ ಕಡಿಮೆಯಾಗುತ್ತದೆ.
೮. ಅನನಾಸ್ ಹಣ್ಣನ್ನು (pine apple )ನಿಯಮಿತವಾಗಿ ತಿನ್ನುವುದರಿಂದ
ಮೂತ್ರಕೋಶದಲ್ಲಿ ಕಲ್ಲು ಉಂಟಾಗುವುದನ್ನು ತಡೆಯ ಬಹುದು.
೯. ಬಿಳಿ ಈರುಳ್ಳಿಯನ್ನು ತುಪ್ಪದಲ್ಲಿ ಹುರಿದು ಅನ್ನದ ಜೊತೆಗೆ ನಿಯಮಿತವಾಗಿ
ಸೇವಿಸುವುದರಿಂದ ನರ ದೌರ್ಬಲ್ಯವನ್ನು ನಿಯಂತ್ರಿಸಬಹುದು.
೧೦. ಹಸಿ ಬೆಳ್ಳುಳ್ಳಿಯ ನಿಯಮಿತ ಸೇವನೆಯಿಂದ ರೋಗ ನಿರೋಧಕ
ಶಕ್ತಿ ಹೆಚ್ಚುತ್ತದೆ.
೧೧. ಕೀವಿನಿಂದ ಕುಡಿದ ವ್ರಣಗಳಿಗೆ ಬೆಳ್ಳುಳ್ಳಿಯನ್ನು ಅರೆದು ಹಚ್ಚಿ
ಕೊಳ್ಳುವುದರಿಂದ ಬೇಗನೆ ಗುಣವಾಗುತ್ತದೆ.
೧೨. ೫ ಚಮಚ ಮೊಸರಿಗೆ ಅರ್ಧ ಚಮಚ ಜೀರಿಗೆ ಪುಡಿಯನ್ನು
ಬೆರೆಸಿ ಸೇವಿಸುವುದರಿಂದ ಭೇದಿ ನಿಲ್ಲುತ್ತದೆ.
೧೩. ಜೀರಿಗೆ ಪುಡಿಯನ್ನು ಬಿಸಿನೀರು ಅಥವಾ ಸಿಹಿ ಮಜ್ಜಿಗೆಯಲ್ಲಿ
ಬೆರೆಸಿ ಕುಡಿಯುವುದರಿಂದ ಹೊಟ್ಟೆಯುಬ್ಬರದ ಸಮಸ್ಯೆ ಕಡಿಮೆ
ಯಾಗುತ್ತದೆ.
೧೪. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ
ಮೆಂತ್ಯ ಪುಡಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ
ಅಂಶ ನಿಯಂತ್ರಣಕ್ಕೆ ಬರುತ್ತದೆ.
೧೫. ದಾಳಿಂಬೆಹಣ್ಣಿನ ನಿಯಮಿತ ಸೇವನೆಯಿಂದ ಹೃದ್ರೋಗದ
ಸಮಸ್ಯೆಗಳನ್ನು ದೂರ ಮಾಡಬಹುದು.
೧೬. ಎಳನೀರಿನ ನಿಯಮಿತ ಸೇವನೆಯಿಂದ ಕರುಳಿನ ಹುಣ್ಣಿನ
ಸಮಸ್ಯೆಯನ್ನು ತಡೆಯಬಹುದು.
೧೭. ಮುಖದಲ್ಲಿ ಮೊಡವೆಗಳು, ಕಪ್ಪುಕಲೆಗಳು ಇದ್ದರೆ ತುಳಸಿ
ಎಲೆಯ ರಸಕ್ಕೆ ಲಿಂಬೆ ರಸವನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಂಡು
ಅರ್ಧ ಗಂಟೆಯ ನಂತರ ನೀರಿನಲ್ಲಿ ತೊಳೆದುಕೊಳ್ಳಬೇಕು.
೧೮. ಶುಂಠಿರಸ ಹಾಗೂ ನೆಲ್ಲಿಕಾಯಿಯ ರಸವನ್ನು ಬೆರೆಸಿ
ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ
ಬರುತ್ತದೆ.
೧೯. ಲಿಂಬೆಹಣ್ಣಿನ ತುಂಡಿನಿಂದ ವಸಡುಗಳನ್ನು ತೀಡುವುದರಿಂದ
ವಸಡಿನ ರಕ್ತಸ್ರಾವವು ನಿಲ್ಲುತ್ತದೆ.
೨೦. ೨ ಚಮಚ ನಿಂಬೆರಸಕ್ಕೆ ೨ ಚಮಚ ಜೇನುತುಪ್ಪ ಸೇರಿಸಿ
ಮುಖಕ್ಕೆ ಲೇಪಿಸಿಕೊಂಡು ೨೦ ನಿಮಿಷಗಳ ನಂತರ ತಣ್ಣೀರಿನಿಂದ
ತೊಳೆದು ಕೊಳ್ಳಬೇಕು. ಇದನ್ನು ಪ್ರತಿದಿನ ಮಾಡುತ್ತಿದ್ದರೆ ಮುಖದ
ಚರ್ಮದ ಸಮಸ್ಯೆಗಳು ಹೋಗಿ, ಮುಖಕ್ಕೆ ಹೊಸಕಾಂತಿ ಸಿಗುತ್ತದೆ.
ಮೂಲ:ಸಂಗ್ರಹ.

Advertisements

2 thoughts on “ಧನ್ವಂತರಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s