Uncategorized

ದೃಷ್ಟಿಕೋನ.

ಅಳುವು ನಿರಾಶಾವಾದಿಯೂ ಅವನತಿ ಸೂಚಕವೂ ಆಗಿದೆ.
ಅಳುವವನು ಸಾಂಸಾರಿಕ ಮೋಹದಿಂದ ಬಂಧಿತನು.
ಆದ್ದರಿಂದಲೇ ಅಂಥವನ ಮನೋವೃತ್ತಿಯಲ್ಲಿ, ಜೀವನದಲ್ಲಿ
ವೈವಿಧ್ಯ ಇರುವುದಿಲ್ಲ. ಆದರೆ ಹಾಸ್ಯದಲ್ಲಿ ನಿರ್ಲಿಪ್ತತೆ, ಯುಕ್ತಿ
ಹಾಗೂ ಊರ್ಧ್ವಗಾಮಿ ಗುಣವಿದೆ. ಅದರಲ್ಲಿ ಬಗೆ ಬಗೆಯ
ಬಣ್ಣ ರೂಪಗಳಿವೆ. ಹಲವು ಸ್ತರಗಳಿವೆ. ವ್ಯಕ್ತಿಯ ಮಾನಸಿಕ,
ಭಾವನಾತ್ಮಕ, ಹಾಗೂ ನೈತಿಕ ಶ್ರೇಷ್ಠತೆಯನ್ನು ಕೂಡ ಅವನ
ನಗುವಿನಿಂದ ತಿಳಿಯಲು ಸಾಧ್ಯವುಂಟು. ಗಾಂಧೀಜಿ,ಟಾಗೋರ್,
ಕಾಶ್ಮೀರಿ ಕವಿ ಗುಲಾಂ ಅಹಮದ್ ಮಹಜೂರ್, ಬಂಗಾಳಿ
ಸಾಹಿತಿ ಕ್ಷಿತಿ ಮೋಹನ ಸೇನ ಮೊದಲಾದ ಮಹಾಪುರುಷರಿಗೆ
ಹಾಸ್ಯವೇ ಎಲ್ಲಕ್ಕೂ ಮಿಗಿಲಾದ ಮನರಂಜನೆಯಾಗಿತ್ತು. ಇದರಿಂದ
ಅವರು ದಣಿವನ್ನು ನಿವಾರಿಸಿಕೊಳ್ಳುತ್ತಿದ್ದರಲ್ಲದೆ ತಮ್ಮ ಕೆಲಸವನ್ನೂ,
ಜೀವನವನ್ನೂ ಆಟವಾಡುವಂತೆ ನಿರ್ವಹಿಸಿ ಕೊಳ್ಳುತ್ತಿದ್ದರು.
-ಬಾಲರಾಜ್ ಸಾಹ್ನಿ.
೨. ಆದರ್ಶಗಳನ್ನೊಳಗೊಂಡ ರಾಮನಂತಹ ಗಣ್ಯ ವ್ಯಕ್ತಿಗಳನ್ನು
ನಾವು ಈ ಜಗತ್ತಿನಲ್ಲಿ ಕಾಣಬಹುದು. ಆದರೆ ಪರಮ ಸಾಧ್ವಿಯಾದ
ಸೀತೆಯಂತಹ ಮಹಿಳಾರತ್ನವನ್ನು ಕಾಣುವುದು ವಿರಳ.
ಆರ್ಯ ಸಂಸ್ಕೃತಿಯ ಪ್ರತೀಕ ಸೀತೆ. ಮಾನವಾತೀತ ನಡವಳಿಕೆಯಿಂದ
ಮಹಿಮಾನ್ವಿತೆ. ಸ್ತ್ರೀತ್ವದ ಸಕಲ ಸದ್ಗುಣಗಳಾದ ಪಾತಿವ್ರತ್ಯ
ಕಾರುಣ್ಯಭಾವ, ದಾಕ್ಷಿಣ್ಯ, ಲಜ್ಜೆಗಳ ಸಾಕಾರ ಮೂರ್ತಿ.
ಏಕಾಂಗಿ ಚಿರದುಃಖಿಯಾಗಿ ಜೀವನದ ಒಂದೊಂದೇ ವಿಷಮ ಸನ್ನಿವೇಶದಲ್ಲಿಯೂ
ಎದೆಗುಂದದೆ ವಿಘ್ನ ಪರಂಪರೆಯನ್ನೇ ಎದುರಿಸಿದಳು ಸೀತೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s