Uncategorized

ಸುಭಾಷಿತಗಳು.

೧. ಸುಂದರವಾದ ಉಡುಗೆಯು ನಿಮ್ಮ ವ್ಯಕ್ತಿತ್ವವನ್ನು ಬದಲಿಸ
ಬಹುದು. ಆದರೆ ಸುಂದರವಾದ ಗುಣವು ನಿಮ್ಮ ಬದುಕನ್ನೇ
ಬದಲಿಸುತ್ತದೆ.
೨. ಕುದಿಯುವ ನೀರಿನಲ್ಲಿ ಪ್ರತಿಬಿಂಬ ನೋಡಲು ಸಾಧ್ಯವಿಲ್ಲ.
ಹಾಗೆಯೇ ಮನಸ್ಸು ಸಿಟ್ಟಿನಿಂದ ಕುದಿಯುತ್ತಿರುವಾಗ ಸರಿಯಾಗಿ
ಯೋಚಿಸಲು ಆಗುವುದಿಲ್ಲ. ಹಾಗೂ ಯಾವ ಸತ್ಯವೂ ಕಾಣಿಸು
ವುದಿಲ್ಲ . ಆದ್ದರಿಂದ ಮನಸ್ಸನ್ನು ತಿಳಿನೀರಿನಂತೆ ತಿಳಿಯಾಗಿಸಿ
ಸಮಾಧಾನದಿಂದ ಇಟ್ಟು ಕೊಳ್ಳಬೇಕು.
೩. ನಾವೀಗ ಹೊಂದಿರುವುದಕ್ಕಿಂತ ಬೇರೆಯದೇ ಬಣ್ಣದಲ್ಲಿ ನಮ್ಮನ್ನು
ನೋಡಲು ಎಲ್ಲರೂ ಇಚ್ಚಿಸುತ್ತಾರೆ ಎನ್ನುವ ಕಾರಣಕ್ಕೆ ನಾವು ಬಣ್ಣ
ಬದಲಿಸುವುದು ಸರಿಯಲ್ಲ.
೪. ಜೀವನವೆಂದರೆ ನಾವೇ ರಚಿಸಿಕೊಳ್ಳುವ ಆದರೆ ಅಳಿಸಲು ಅವಕಾಶ
ವಿಲ್ಲದ ಚಿತ್ರಕಲೆ. ಹಾಗಾಗಿ ಒಂದೊಂದು ಗೆರೆ ಎಳೆಯುವಾಗಲೂ
ಎಚ್ಚರವಿರಲಿ.
೫. ಆತಂಕವು ಅತಿಯಾದಾಗ ಅಂತಕನು ಹತ್ತಿರ ಬರುತ್ತಾನೆ.
೬. ಸುಮ್ಮನಿದ್ದ ಮನಸ್ಸಿಗೆ ಕಲ್ಲು ಹೊಡೆದರೆ ಅದು ಎಬ್ಬಿಸುವ
ತರಂಗಗಳ ಮೇಲೆ ಕಥೆಯ ನಾವೆ ಸಾಗುತ್ತದೆ.
೭. ದುಡ್ಡು ಎಂದೂ ಮಾತನಾಡುವುದಿಲ್ಲ. ದುಡ್ಡಿನ ಅಹಂಕಾರ
ಮನುಷ್ಯನನ್ನು ಮಾತನಾಡಿಸುತ್ತದೆ. ದುಡ್ಡಿನಿಂದ ಮನುಷ್ಯ
ಬದಲಾಗಬಹುದು. ಯಾರಿಗೂ ಬೇಡದವನಾಗಬಹುದು -ದುಡ್ಡಿನ
ಸದ್ವಿನಿಯೋಗವಾಗದಿದ್ದರೆ.
೮. ಮನುಷ್ಯನನ್ನು ಹೆಚ್ಚಾಗಿ ಸೋಲಿಸುವುದು ಹೊರಗಿನ ಅಪಾಯವಲ್ಲ.
ತನ್ನ ಒಳಗೇ ಇರುವ ಭೀತಿ.
೯. ಬಲಶಾಲಿಯಾ ಆಸ್ತಿ ಕೈಗಳಾದರೆ ಬುದ್ಧಿವಂತನ ಆಸ್ತಿ ಬುದ್ಧಿ.
೧೦. ಮಾಂಸಾಹಾರಿ ಮಾನವನಿಗೆ ಬೇಕು ಮೃಗಗಳ ಮಾಂಸ.
ಸಸ್ಯಾಹಾರಿಗೆ ಬೇಕು ಸಸ್ಯಜನ್ಯ ಆಹಾರ. ಆದರೆ ಮಾನವನಿಂದ
ಅವುಗಳಿಗೆ ಏನು ಬೇಕು?
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s