Uncategorized

ನಾ ಮೆಚ್ಚಿದ ಕಥೆ.

ಒಬ್ಬ ಮುದುಕನಿಗೆ ಮೂವರು ಗಂಡು ಮಕ್ಕಳು. ಆ ಮೂವರಲ್ಲಿ
ತಾನು ಯಾರಿಗೆತನ್ನ ಮನೆತನದ ಜವಾಬ್ದಾರಿಯನ್ನು ಹೊರಿಸ
ಬೇಕೆಂದು ವಿಚಾರಿಸುತ್ತಿರಲು ಒಂದು ಉಪಾಯ ಹೊಳೆಯಿತು.
ಆ ಮೂವರನ್ನು ಪರೀಕ್ಷಿಸಬೇಕೆಂದು ಬಯಸಿ ಅವರಿಗೆ ಒಂದು
ಪ್ರಶ್ನೆ ಹಾಕಿದ. ”ನನ್ನನ್ನು ಯಾರಾದರೂ ಹೊಡೆದರೆ ನೀವೇನು
ಮಾಡುತ್ತೀರಿ?”. ಅದಕ್ಕೆ ಮೊದಲನೆಯವನು ”ಅಪ್ಪನಿಗೆ ಯಾರು
ಹೊಡೆಯುತ್ತಾರೋ, ಆತನನ್ನು ಆ ದಿನದ ಸೂರ್ಯ ಮುಳುಗು
ವುದರೊಳಗೆ ಕೊಲ್ಲುವೆನು” ಎಂದು ತಿಳಿಸಿದ. ಎರಡನೆಯವನು
”ಅಪ್ಪನನ್ನು ಹೊಡೆದವನನ್ನು ಆ ಕ್ಷಣದಲ್ಲೇ ಕೊಲ್ಲುವು”ದಾಗಿ
ಹೇಳಿದ. ಏನೂ ಹೇಳದೆ ಮೌನವಾಗಿದ್ದ ಮೂರನೆಯವನಿಗೆ
”ನೀನೇನು ಮಾಡುವೆ ?” ಎಂದು ಮುದುಕ ಕೇಳಿದ. ಅದಕ್ಕೆ ಆ
ಕಿರಿಯ ಮಗನು ”ನನ್ನ ಅಭಿಪ್ರಾಯದಲ್ಲಿ, ನೀನು ಬೇರೆಯವರ
ಹತ್ತಿರ ಹೊಡೆಸಿಕೊಳ್ಳಬೇಕಾದ ಪರಿಸ್ಥಿತಿಗೆ ಎಂದೂ ಸಿಲುಕ ಬಾರದು ”
ಎಂದನು. ಆ ಮುದುಕ ಆತನ ಉತ್ತರವನ್ನು ಮೆಚ್ಚಿ, ಮೂವರಲ್ಲಿ
ಆತನೇ ಜಾಣನೆಂದು ಹೇಳಿದನು. ಹಾಗೂ ಆತನನ್ನೇ ಮನೆಯ
ಯಜಮಾನನನ್ನಾಗಿ ಮಾಡಿದನು.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s